ದಿಡೀರ್ ಎಂದು ಕೇವಲ 5 ನಿಮಿಷದಲ್ಲಿ ಈರುಳ್ಳಿ ಇಲ್ಲದೇ ಮಾಡಿ ರುಚಿಕರವಾದ ಟೊಮೊಟೊ ಗೊಜ್ಜು.

ದಿಡೀರ್ ಎಂದು ಕೇವಲ 5 ನಿಮಿಷದಲ್ಲಿ ಈರುಳ್ಳಿ ಇಲ್ಲದೇ ಮಾಡಿ ರುಚಿಕರವಾದ ಟೊಮೊಟೊ ಗೊಜ್ಜು.

ನಮಸ್ಕಾರ ಸ್ನೇಹಿತರೇ, ಸಾಮಾನ್ಯ ರೀತಿಯಲ್ಲಿ ಮಾಡುವ ಟೊಮೊಟೊ ಗೊಜ್ಜು ನಿಮಗೆ ಬೋರಾಗುತ್ತಿದೆಯಾ?? ಹಾಗಿದ್ದರೆ ಬನ್ನಿ ಇನ್ನು ನಾವು ಈರುಳ್ಳಿಯನ್ನು ಉಪಯೋಗಿಸದೇ ಯಾವ ರೀತಿಯಲ್ಲಿ ಎಲ್ಲರೂ ಇಷ್ಟ ಪಡುವಂತಹ ಅದ್ಭುತವಾದ ಟೊಮೊಟೊ ಗೊಜ್ಜು ಮಾಡುವ ವಿಧಾನವನ್ನು ತಿಳಿಸಿಕೊಳ್ಳುತ್ತೇವೆ. ಖಂಡಿತ ಈ ವಿಧಾನದಿಂದ ಮಾಡಿದ ಗೊಜ್ಜನ್ನು ಎಲ್ಲರಿಗೂ ಇಷ್ಟಪಟ್ಟು ತಿನ್ನುತ್ತಾರೆ, ನಿಮ್ಮ ಅನುಕೂಲತೆಗಾಗಿ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ಟ್ರೈ ಮಾಡಿ ನೋಡಿ.

ಟೊಮೇಟೊ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು: ಸ್ವಲ್ಪಎಣ್ಣೆ, 8 – 10 ಬೆಳ್ಳುಳ್ಳಿ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಸ್ವಲ್ಪ ಕರಿಬೇವು, 1 ಬಟ್ಟಲಿನಷ್ಟು ಕಡಲೆ ಬೀಜದ ಪುಡಿ, 4 ಟೊಮೋಟೊ, ಒಂದು ಚಿಟಿಕೆ ಅರಿಶಿನಪುಡಿ, ಒಂದುವರೆ ಚಮಚ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಗರಂ ಮಸಾಲ, ಅರ್ಧ ಧನಿಯಾ ಪುಡಿ, 1 ಚಮಚ ಸಕ್ಕರೆ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಟೊಮೇಟೊ ಗೊಜ್ಜು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ. ಸ್ವಲ್ಪ ಸಾಸಿವೆ, ಜೀರಿಗೆ, ಸ್ವಲ್ಪ ಕರಿಬೇವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಬಟ್ಟಲಿನಷ್ಟು ಕಡಲೆ ಬೀಜದ ಪುಡಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊವನ್ನು ಹಾಕಿ ಮತ್ತೆ ಸ್ವಲ್ಪ ಫ್ರೈ ಮಾಡಿಕೊಳ್ಳಿ.

ತದನಂತರ ಇದಕ್ಕೆ ಚಿಟಿಕೆ ಅರಿಶಿನಪುಡಿ, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗೊಜ್ಜಿಗೆ ಬೇಕಾಗುವಷ್ಟು ನೀರನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಂಡು, ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ .ಕೊನೆಯದಾಗಿ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಟೊಮೊಟೊ ಗೊಜ್ಜು ಸವಿಯಲು ಸಿದ್ಧ