ವಾಸ್ತು ಶಾಸ್ತ್ರ: ವಾಸ್ತು ಹೀಗಿದ್ದರೇ ಹಣ ಬರುವುದಷ್ಟೇ ಅಲ್ಲಾ, ಹಣ ದುಪ್ಪಟ್ಟಾಗುತ್ತದೆ

ನಮಸ್ಕಾರ ಸ್ನೇಹಿತರೇ, ವಾಸ್ತು ಎಂಬುದು ಬಹಳ ಜನರ ನಂಬಿಕೆಯಾಗಿದೆ. ನಮ್ಮ ಪುರಾಣಗಳಲ್ಲಿ ಪ್ರತಿಯೊಂದು ಮನೆ, ಆಶ್ರಮಗಳನ್ನು ನಿರ್ಮಿಸುವ ಮುನ್ನ ವಾಸ್ತು ನೋಡಿ ನಿರ್ಮಿಸಲಾಗುತ್ತಿತ್ತು ಎಂಬ ನಂಬಿಕೆ ಇದೆ. ಮೊದಲಿನಿಂದಲೂ ಎಲ್ಲರೂ ಮನೆಗಳನ್ನು ಕಟ್ಟಿಸುವಾಗ ವಾಸ್ತು ನೋಡಿಯೇ ಕಟ್ಟಿಸುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ಕೊಠಡಿಯಲ್ಲಿ ವಾಸ್ತು ನೋಡಿರುತ್ತಾರೆ. ಆದರೆ ಕೆಲವರು ವಾಸ್ತು ಶಾಸ್ತ್ರವನ್ನು ನಂಬುವುದಿಲ್ಲ. ಒಂದು ವೇಳೆ ನಿಮಗೆ ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇದ್ದರೇ ಈ ಕೆಳಗಿನ ವಾಸ್ತು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಕೈತುಂಬ ಹಣ ಗಳಿಸಬಹುದು ಹಾಗೂ ಗಳಿಸಿದ ಹಣವನ್ನು ಉಳಿಸಿಕೊಂಡು ದುಪ್ಪಟ್ಟು ಮಾಡಬಹುದು.

ಸ್ನೇಹಿತರೇ, ಮೊದಲನೆಯದಾಗಿ ನೀವು ಮಲಗುವ ಕೋಣೆಯಲ್ಲಿ ಮೆಟಲ್ ಸೇರಿದಂತೆ ಇನ್ಯಾವುದೇ ಲೋಹಗಳ ವಸ್ತುಗಳು ಇರದಂತೆ ನೋಡಿಕೊಳ್ಳಿ. ಅಷ್ಟೇ ಅಲ್ಲದೆ ನಿಮ್ಮ ಕೋಣೆಯ ಗೋಡೆಗಳಲ್ಲಿ ಯಾವುದೇ ರೀತಿಯ ಬಿರುಕು ಮೂಡಿರಬಾರದು. ಇದರಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇನ್ನು ಎರಡನೆಯದಾಗಿ ನಿಮ್ಮ ಮನೆಯ ಒಳಗಡೆಯಿಂದ ಹೊರಗೆ ಹೋಗುವ ನೀರು ಸರಿಯಾದ ದಿಕ್ಕಿನಲ್ಲಿ ಹೋಗಬೇಕು. ಇಲ್ಲದಿದ್ದರೆ ಹಣದ ಹರಿವಿನ ಪ್ರಮಾಣ ಕಡಿಮೆಯಾಗಿ ನಿಮಗೆ ಆರ್ಥಿಕ ಕೊರತೆಯುಂಟಾಗುತ್ತದೆ, ಪ್ರಮುಖವಾಗಿ ಮನೆಯಿಂದ ಹೊರಹೋಗುವ ನೀರು ಪಕ್ಷಿಮ ಅಥವಾ ದಕ್ಷಿಣ ದಿಕ್ಕಿನ ಕಡೆಗೆ ಹೋಗಬಾರದು. ಇದು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹರಿದು ಹೋಗಬೇಕು. ಹೀಗೆ ಹರಿದು ಹೋದರೆ ನಿಮಗೆ ಶುಭವಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಇನ್ನು ಮೂರನೆಯದಾಗಿ ನೀವು ಹಣವನ್ನು ಇಡುವ ಬೀರು ಅಥವಾ ಲಾಕರ್ ಪೆಟ್ಟಿಗೆಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡಿ. ಹೀಗೆ ನೀವು ನಿಮ್ಮ ಹಣದ ಪೆಟ್ಟಿಗೆ ಉತ್ತರ ದಿಕ್ಕಿಗೆ ಮುಖ ಮಾಡಿ ಇಡುವುದರಿಂದ ನಿಮಗೆ ಲಾಭವೂ ಹೆಚ್ಚಾಗುತ್ತದೆ ಹಾಗೂ ನೀವು ಗಳಿಸಿದ ಹಣವ ನಿಮ್ಮ ಕೈಯಲ್ಲಿ ನಿಲ್ಲುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ದಯವಿಟ್ಟು ಗಮನದಲ್ಲಿಡಿ ಪೆಟ್ಟಿಗೆ ಎಂದಿಗೂ ದಕ್ಷಿಣಕ್ಕೆ ಮುಖ ಮಾಡಬಾರದು. ಇನ್ನು ನಿಮ್ಮ ಮನೆಯಲ್ಲಿ ಅಥವಾ ಮನೆಯ ಗೋಡೌನ್ ನಲ್ಲಿ ನೀವು ಬಿರುಕು ಬಿಟ್ಟಿರುವ ಪಾತ್ರಗಳನ್ನು ಇಟ್ಟುಕೊಂಡಿದ್ದರೆ ದಯವಿಟ್ಟು ಹೊರಗೆ ಹಾಕಿ. ಯಾವುದೇ ಕಾರಣಕ್ಕೂ ಮನೆಯಲ್ಲಿ ಮುರಿದ ಮಂಚ, ಬಳಸದ ಕಪಾಟುಗಳು ಅಥವಾ ಇನ್ಯಾವುದೇ ಇತರ ಮರದ ವಸ್ತುಗಳು ನಿಮ್ಮ ಮನೆಯಲ್ಲಿ ಇರಬಾರದು. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುವುದು ಅಷ್ಟೇ ಅಲ್ಲದೆ ಖರ್ಚುಗಳು ಕೂಡ ಹೆಚ್ಚಾಗುತ್ತವೆ.

ಮನೆಯಲ್ಲಿ ನೀವು ನಲ್ಲಿಗಳಿಂದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಿ ಹಾಗೂ ನಲ್ಲಿಗಳಿಂದ ನೀವು ನೀರು ನಿಲ್ಲಿಸಿದ ಮೇಲೆ ಯಾವುದೇ ಕಾರಣಕ್ಕೂ ನೀರು ತೊಟ್ಟಿಕ್ಕುದಂತೆ ನೋಡಿಕೊಳ್ಳಿ, ಸಣ್ಣ ಪ್ರಮಾಣದಲ್ಲಿ ಕೂಡ ನೀರು ಸೋರುತ್ತಿದ್ದರೆ, ನಿಮ್ಮ ಮನೆಯಲ್ಲಿ ವಾಸ್ತು ಸರಿಹೊಂದುವುದಿಲ್ಲ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಅಷ್ಟೇ ಅಲ್ಲದೆ ಮನೆಯ ಮುಖ್ಯ ದ್ವಾರ ಎಂದಿಗೂ ದಕ್ಷಿಣ ದಿಕ್ಕಿಗೆ ಇರಬಾರದು ಹಾಗೂ ಮುಖ್ಯದ್ವಾರದಲ್ಲಿ ಬಿರುಕು ಕಾಣಿಸಿಕೊಳ್ಳಬಾರದು.

ಇನ್ನು ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಕೋಣೆ ಇದ್ದರೆ ನಿಮಗೆ ಹಣ ಸಾಕಷ್ಟು ಬರುತ್ತದೆ ಆದರೆ ಬಂದ ಹಣ ಕೈಯಲ್ಲಿ ನಿಲ್ಲುವುದಿಲ್ಲ ಆದಕಾರಣ ಸಾಧ್ಯವಾದಷ್ಟು ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮನೆಯನ್ನು ಇಡಬೇಡಿ. ಇನ್ನು ಪ್ರಮುಖವಾಗಿ ನೀವು ಮನೆಗೆ ಅಲಂಕಾರ ಮಾಡಲು ತಂದ ಪ್ಲಾಸ್ಟಿಕ್ ಹೂವುಗಳು ಅಥವಾ ಗಿಡಗಳನ್ನು ತೆಗೆದು ಹಾಕಿ ಯಾಕೆಂದರೆ ಇವುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇಷ್ಟೇ ಅಲ್ಲದೆ ನೀವು ಎಂದಿಗೂ ಮನೆಯ ಒಳಗಡೆ ಬಾಡಿದ ಹೂವುಗಳನ್ನು ಇಟ್ಟುಕೊಳ್ಳಬೇಡಿ.

Post Author: Ravi Yadav