ಬಹಳ ಶ್ರೇಷ್ಠ ಎನಿಸಿರುವ ಅಧಿಕ ಮಾಸದಲ್ಲಿ ಇಷ್ಟಾರ್ಥ ನೆರವೇರಬೇಕು ಎಂದರೇ ಹೀಗೆ ಮಾಡಿ ! ಅದೃಷ್ಟವಂತರಾಗಿ !

ಬಹಳ ಶ್ರೇಷ್ಠ ಎನಿಸಿರುವ ಅಧಿಕ ಮಾಸದಲ್ಲಿ ಇಷ್ಟಾರ್ಥ ನೆರವೇರಬೇಕು ಎಂದರೇ ಹೀಗೆ ಮಾಡಿ ! ಅದೃಷ್ಟವಂತರಾಗಿ !

ನಮಸ್ಕಾರ ಸ್ನೇಹಿತರೇ, ಅಧಿಕ ಮಾಸದಲ್ಲಿ ನಾವು ಹಲವಾರು ಕೆಲಸಗಳನ್ನು ಮಾಡಬಾರದು. ಆದರೆ ವಿಷ್ಣುವು ಈ ಮಾಸಕ್ಕೆ ಅಧಿಪತಿಯಾಗಿರುವ ಕಾರಣ ಪುಣ್ಯ ಪಡೆದುಕೊಳ್ಳಲು ಇದು ಬಹಳ ಪ್ರಶಸ್ತವಾದ ಮಾಸ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಯಾವುದೇ ಹೊಸ ರೀತಿಯ ವ್ಯವಹಾರ, ವ್ಯಾಪಾರ ಮಾಡುವುದು ಬೇಡ ಎಂದು ಹೇಳುವ ಪುರಾಣಗಳು ಭಗವಂತನ ಆರಾಧನೆ ಮಾಡಿದರೆ ಬಹಳ ಪುಣ್ಯ ಲಭಿಸುತ್ತದೆ ಹಾಗೂ ಮನದಲ್ಲಿ ಇರುವ ಬೇಡಿಕೆಗಳು ಈಡೇರುತ್ತವೆ ಎಂದು ಕೂಡ ತಿಳಿಸಿವೆ. ಧಾರ್ಮಿಕ ವಿಚಾರಗಳಿಗೆ ಬಹಳ ಪ್ರಶಸ್ತವಾದ ಈ ಸಮಯದಲ್ಲಿ ಕೆಲವೊಂದು ಪುಣ್ಯದ ಕಾರ್ಯಗಳನ್ನು ಮಾಡಿದರೇ ಭಗವಂತನು ಕೇಳಿದ ವರಗಳನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ಈ ಮಾಸದಲ್ಲಿ ಹಿಂದೂ ಪುರಾಣಗಳ ಪ್ರಕಾರ ದಾನ, ಧರ್ಮ, ಕೆಲವು ವಸ್ತುಗಳನ್ನು ವಿಷ್ಣುವಿಗೆ ಅರ್ಪಿಸುವ ಮೂಲಕ, ಜಪ, ಪೂಜೆ ಆರಾಧನೆಗಳು ನಡೆಯುತ್ತವೆ. ಆದರೆ ಎಲ್ಲರೂ ಯಜ್ಞ ಯಾಗಗಳನ್ನು ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಇಂದು ಸುಲಭ ವಿಧಾನಗಳ ಮೂಲಕ ಪವಿತ್ರವೆನಿಸಿರುವ ಅಧಿಕಮಾಸದಲ್ಲಿ ನೀವು ಮಾಡಬೇಕಾದ ಕೆಲವೊಂದು ಕೆಲಸಗಳನ್ನು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ, ಮೊದಲನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎನ್ನಲಾಗುತ್ತದೆ. ಸಾಕ್ಷಾತ್ ಭಗವಾನ್ ವಿಷ್ಣುವಿನಿಂದ ಪುರುಷೋತ್ತಮ ಮಾಸ ಎಂದು ಹೆಸರು ಪಡೆದುಕೊಂಡಿರುವ ಕಾರಣ ವಿಷ್ಣು ಈ ಮಾಸದ ಅಧಿಪತಿ. ಆದ ಕಾರಣದಿಂದ ನೀವು ಒಂದು ವೇಳೆ ಪುಣ್ಯ ಪಡೆದುಕೊಳ್ಳಲು ಬಯಸಿದರೇ ವಿಷ್ಣುವಿನ ಆರಾಧನೆ ಮಾಡಿ, ನೈವೇದ್ಯವಾಗಿ ಪಾಯಸವನ್ನು ಇಟ್ಟು ಅದಕ್ಕೆ ತುಳಸಿ ದಳಗಳನ್ನು ಸಮರ್ಪಣೆ ಮಾಡಿದರೇ ಭಗವಾನ್ ಶ್ರೀಕೃಷ್ಣನ ಆಶೀರ್ವಾದ ನಿಮಗೆ ಲಭ್ಯವಾಗುತ್ತದೆ.

ಇನ್ನು ಎರಡನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ವಿಷ್ಣುವಿಗೆ ಹಳದಿ ಬಣ್ಣವು ಬಹಳ ಪ್ರಿಯವಾಗಿದ್ದು, ನೀವು ಯಾವುದಾದರೂ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ನಿಮಗೆ ಪುಣ್ಯದ ಫಲಗಳು ಸಿಗುತ್ತವೆ. ಉದಾಹರಣೆಗೆ ಹಳದಿ ಬಣ್ಣದ ವಸ್ತ್ರ, ಹಳದಿ ಬಣ್ಣದ ಬೇಳೆ ಕಾಳುಗಳು, ಹಳದಿ ಬಣ್ಣದ ಹಣ್ಣುಗಳು ಮುಂತಾದವುಗಳನ್ನು ವಿಷ್ಣುವಿಗೆ ಸಮರ್ಪಿಸಿ ಹಾಗೂ ದಾನ ಮಾಡಿ.

ಇನ್ನು ಮೂರನೆಯದಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕೂ 48 ನಿಮಿಷಗಳ ಮುನ್ನ ಹಾಗೂ ಸೂರ್ಯಾಸ್ತಕ್ಕೆ 48 ನಿಮಿಷಗಳ ಮುನ್ನ ನೀವು ವಿಷ್ಣುವಿಗೆ ಕೇಸರಿ ಬಣ್ಣವನ್ನು ಸೇರಿಸಿದ ಹಾಲಿನಿಂದ ಅಭಿಷೇಕ ಮಾಡಿ. ನಂತರ ವಿಷ್ಣುವಿಗೆ ತುಳಸಿ ಮಾಲೆಯನ್ನು ಅರ್ಪಿಸಿ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸಿ.

ಇನ್ನು ನಾಲ್ಕನೆಯದಾಗಿ ವಿಷ್ಣುವಿಗೆ ಅತಿ ಪ್ರಿಯವಾದ ವಸ್ತು ತುಳಸಿಯನ್ನು ಪೂಜಿಸಿ. ತುಳಸಿ ಗಿಡದ ಮುಂದೆ ನೀವು ಅಧಿಕ ಮಾಸದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ನಂತರ ಓಂ ನಮೋ ಭಗವತೇ ವಾಸುದೇವಾಯ ನಮಃ ಮಂತ್ರವನ್ನು ಪಠಿಸಿ 11 ಬಾರಿ ತುಳಸಿ ಗಿಡವನ್ನು ಪ್ರದಕ್ಷಿಣೆ ಮಾಡಿದರೆ ನಿಮ್ಮ ಮನೆಯಲ್ಲಿರುವ ದುಃಖ ದೂರವಾಗಿ ಮನೆಯಲ್ಲಿ ಹಾಗೂ ನಿಮ್ಮ ಮನದಲ್ಲಿ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಇನ್ನು ಅಷ್ಟೇ ಅಲ್ಲದೆ ನೀವು ವಿಷ್ಣುವಿನ ಕೃಪೆಗೆ ಪಾತ್ರರಾಗಬೇಕು ಎಂದರೇ ಅಶ್ವತ್ಥ ಮರಕ್ಕೆ ನೀರನ್ನು ಹಾಕಿ, ಮರದ ಬಳಿ ತುಪ್ಪದ ದೀಪವನ್ನು ಹಚ್ಚುವುದರಿಂದ ಅಶ್ವತ್ಥ ಮರದಲ್ಲಿ ವಾಸವಾಗಿರುವ ವಿಷ್ಣುವು ನಿಮ್ಮ ಮನದಲ್ಲಿರುವ ಬೇಡಿಕೆಗಳನ್ನು ಈಡೇರಿಸುತ್ತಾನೆ ‌ಎಂದೂ ಪುರಾಣಗಳು ಹೇಳುತ್ತವೆ.

ಅಧಿಕಮಾಸದಲ್ಲಿ ನೀವು ಪ್ರತಿದಿನವೂ ಸೂರ್ಯನಿಗೆ ನೀರನ್ನು ಅರ್ಪಿಸಬೇಕು, ಸೂರ್ಯನಿಗೆ ಅರ್ಘ್ಯ ನೀಡುವ ಸಂದರ್ಭದಲ್ಲಿ ವಿಷ್ಣುವನ್ನು ಪ್ರಾರ್ಥಿಸುತ್ತಾ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಇಷ್ಟಾರ್ಥಗಳು ಬಹಳ ಬೇಗನೆ ನೆರವೇರುತ್ತವೆ. ಇನ್ನೂ ಒಂದು ವೇಳೆ ನೀವು ವ್ಯಾಪಾರ ವ್ಯವಹಾರಗಳಲ್ಲಿ ಏಳಿಗೆಯ ನಿರೀಕ್ಷೆಯಲ್ಲಿ ಇದ್ದರೇ ಅಧಿಕ ಮಾಸದ ನವಮಿ ತಿಥಿಯ ದಿನ ನೀವು ಕನ್ಯೆಗೆ ಭೋಜನವನ್ನು ದಾನ ಮಾಡುವುದರಿಂದ ನಿಮ್ಮ ವ್ಯಾಪಾರ ಹಾಗೂ ಅವ್ಯವಹಾರಗಳು ಏಳಿಗೆ ಕಾಣುತ್ತವೆ ಗೆದ್ದು ಶಾಸ್ತ್ರಗಳು ತಿಳಿಸುತ್ತವೆ.