ಬಿಗ್ ನ್ಯೂಸ್: ಗಡಿಯಲ್ಲಿ ಯುದ್ಧ ತಯಾರಿ ನಡೆಸಲು ವಿಫಲವಾಗುತ್ತಿರುವ ಚೀನಿಯರು ! ಬಾಲ ಮುದುರುವುದು ಪಕ್ಕ !

ಬಿಗ್ ನ್ಯೂಸ್: ಗಡಿಯಲ್ಲಿ ಯುದ್ಧ ತಯಾರಿ ನಡೆಸಲು ವಿಫಲವಾಗುತ್ತಿರುವ ಚೀನಿಯರು ! ಬಾಲ ಮುದುರುವುದು ಪಕ್ಕ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮಾತುಕತೆ, ಸಭೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಬಯಸುತ್ತೇವೆ ಎನ್ನುವ ಚೀನಾ ದೇಶವು ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ತನ್ನ ಬುದ್ಧಿಯನ್ನು ಮಾತ್ರ ಬಿಟ್ಟಿಲ್ಲ. ಎಂದಿನಂತೆ ಸೇನಾ ಜಮಾವಣೆ ಮಾಡುತ್ತಾ ಭಾರತೀಯ ಸೇನೆಯ ಜೊತೆ ಕಿರಿಕ್ ಮಾಡಿಕೊಳ್ಳುತ್ತಾ ಕಾಲ ಕಳೆದಿದೆ. ತಾನು ಯುದ್ಧಕ್ಕೆ ಸಿದ್ಧನಾಗಿದ್ದೇನೆ ಎಂಬುದನ್ನು ತೋರಿಸಲು ಹಲವಾರು ತುಕಡಿಗಳು ಸೇರಿದಂತೆ ಕ್ಷಿಪಣಿಗಳನ್ನು ಜಮಾವಣೆ ಮಾಡಿದೆ. ಕೇವಲ ಈ ಗಡಿಯಲ್ಲಷ್ಟೇ ಅಲ್ಲದೆ ಇತ್ತೀಚೆಗೆ ತೈವಾನ್ ದೇಶದ ವಾಯು ಪ್ರದೇಶಕ್ಕೆ ಮೂವತ್ತಕ್ಕೂ ಹೆಚ್ಚು ಫೈಟರ್ ಜೆಟ್ ಗಳನ್ನು ಕಳುಹಿಸುವ ಮೂಲಕ ಚೀನಾ ದೇಶವು ಗಡಿ ದೇಶಗಳ ಜೊತೆ ಯುದ್ಧಕ್ಕೆ ಸಿದ್ಧವಾಗುತ್ತಿದ್ದೇನೆ ಎಂಬ ಸ್ಪಷ್ಟ ಸಂದೇಶ ಸಾರಿತ್ತು.

ಅಷ್ಟೇ ಅಲ್ಲಾ, ಚೀನಿ ಅಧ್ಯಕ್ಷ ಜಿಂಗ್ಪಿಂಗ್ ರವರು ಯುದ್ಧಕ್ಕೆ ಸದಾ ಸಿದ್ಧರಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ನಾವು ಶಾಂತಿ ಬಯಸುತ್ತೇವೆ ಆದರೆ ಚೀನಾ ದೇಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಚೀನಾ ದೇಶ ಎಂದಿಗೂ ಸುಮ್ಮನಿರುವುದಿಲ್ಲ. ಸೈನಿಕರೇ ಯುದ್ಧಕ್ಕೆ ತಯಾರಾಗಿ ಎಂದು ಸೈನಿಕರಲ್ಲಿ ಉಮ್ಮಸು ತುಂಬುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಸ್ನೇಹಿತರೇ ಗಡಿಯಲ್ಲಿನ ಪರಿಸ್ಥಿತಿ ನೋಡಿದರೇ ಕೇವಲ ಚೀನಿ ಅಧ್ಯಕ್ಷ ಮಾತ್ರ ಯುದ್ಧಕ್ಕೆ ಸಿದ್ಧರಿರುವುದಾಗಿ ತಿಳಿದುಬಂದಿದೆ. ಸೈನಿಕರಲ್ಲ. ಇದ್ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದುಕೊಂಡಿರಾ ಭಾರತೀಯ ಸೇನೆಯ ಈ ವರದಿ ನೋಡಿ.

ಸ್ನೇಹಿತರೇ, ಭಾರತ ಹಾಗೂ ಚೀನಾ ದೇಶಗಳು ಪರಸ್ಪರ ಯುದ್ಧಗಳಲ್ಲಿ ಪಾಲ್ಗೊಂಡರೆ ಬಹುತೇಕ ಪರ್ವತ ಪ್ರದೇಶಗಳಲ್ಲಿ ಯುದ್ಧ ನಡೆಸಬೇಕಾಗುತ್ತದೆ. ಹಿಮಾಲಯ ಪರ್ವತದ ಅಂಚಿನಲ್ಲಿರುವ ಪರ್ವತ ಪ್ರದೇಶದಲ್ಲಿ ಇದೀಗ ಚಳಿಗಾಲ ಆರಂಭವಾಗುತ್ತಿದ್ದು ಈಗಾಗಲೇ ತಾಪಮಾನ ಬಹಳ ಕಡಿಮೆಯಾಗಿಬಿಟ್ಟಿದೆ. ಇದರಿಂದ ಚೀನಿ ಸೈನಿಕರು ಕು’ಸಿದು ಬೀ’ಳುತ್ತಿದ್ದಾರೆ, ಎತ್ತರದ ಪ್ರದೇಶಗಳಲ್ಲಿ ಉಂಟಾಗುವ ಆರೋಗ್ಯದ ತೊಂದರೆಗಳಿಂದಾಗಿ ಚೀನಿ ಸೈನಿಕರು ಅಸ್ವಸ್ಥ ಗೊಳ್ಳುತ್ತಿದ್ದಾರೆ ಎಂಬುದನ್ನು ಭಾರತೀಯ ಸೇನೆ ತಿಳಿಸಿದೆ. ಹಲವಾರು ಸೈನಿಕರು ಅಸ್ವಸ್ಥಗೊಂಡಿದ್ದು ಇತರ ಸೈನಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಏರ್ ಅಂಬುಲೆನ್ಸ್ ಗಳ ಮೊರೆ ಹೋಗಲಾಗಿದೆ ಎಂಬುದು ತಿಳಿದುಬಂದಿದೆ. ಆದರೆ ಮತ್ತೊಂದೆಡೆ ಭಾರತೀಯ ಸೈನಿಕರು ಹಿಮಕ್ಕೆ ಕ್ಯಾರೆ ಎನ್ನದೆ 6 ಪರ್ವತ ಪ್ರದೇಶಗಳನ್ನು ಕಳೆದ ಮೂರು ವಾರಗಳಲ್ಲಿ ತಮ್ಮ ವ’ಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಆರಂಭದಲ್ಲಿಯೇ ಚೀನಿ ಸೈನಿಕರು ಅಸ್ವಸ್ಥ ಗೊಳ್ಳುತ್ತಿದ್ದು ಇನ್ನು ಚಳಿಗಾಲ ಸಂಪೂರ್ಣವಾಗಿ ಆರಂಭಗೊಂಡರೇ ಖಂಡಿತ ಚೀನಿ ಸೈನಿಕರು ಯುದ್ಧಕ್ಕೆ ಮುನ್ನವೇ ಮಂಡಿಯೂರಿ ಹಿಂದಿರುಗುತ್ತಾರೆ ಎಂದು ಭಾರತೀಯ ಸೇನೆ ತಿಳಿಸಿದೆ.