ಪಾಕ್ ಚೀನಾ ದೇಶಗಳ ಹುಟ್ಟಡಗಿಸಿದ ಬಿಪಿನ್ ರಾವತ್ ಹಾಗೂ ಅವರ ಪತ್ನಿಯ ಕುರಿತು ನಿಮಗೆ ತಿಳಿಯದ ಮಾಹಿತಿ ಏನು ಗೊತ್ತೇ??

ಪಾಕ್ ಚೀನಾ ದೇಶಗಳ ಹುಟ್ಟಡಗಿಸಿದ ಬಿಪಿನ್ ರಾವತ್ ಹಾಗೂ ಅವರ ಪತ್ನಿಯ ಕುರಿತು ನಿಮಗೆ ತಿಳಿಯದ ಮಾಹಿತಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದ ಮೂರು ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದೆ. ಜನರಲ್ ಬಿಪಿನ್ ರಾವತ್ ಅವರು ಬುಧವಾರ ನಡೆಯುತ್ತಿದ್ದ ತಮಿಳುನಾಡು ಊಟಿ ಬಳಿಯ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು.

ಹಾಗಾಗಿ ಅವರು ದೆಹಲಿಯಿಂದ ನೇರವಾಗಿ ತಮಿಳುನಾಡಿನ ಸೂಲೂರು ವಾಯು ನೆಲೆಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದರು. ಇಲ್ಲಿಂದ ಬಿಪಿನ್ ರಾವತ್ ಅವರನ್ನ ರಸ್ತೆಯ ಮಾರ್ಗವಾಗಿ ಕರೆದೊಯ್ಯಲು ತಮಿಳುನಾಡು ಪೊಲೀಸರು ಕಾರು ವ್ಯವಸ್ಥೆಯನ್ನ ಮಾಡಿದ್ದರು‌. ಆದರೆ ಅಂತಿಮ ಕ್ಷಣದಲ್ಲಿ ಬಿಪಿನ್ ರಾವತ್ ಅವರು ವೆಲ್ಲಿಂಗ್ಟನ್ ಕಾಲೇಜಿಗೆ ಹೋಗಲು 80 ಕಿ.ಮೀ ದೂರವಿರುವ ಕಾರಣ ಹೆಲಿಕಾಪ್ಟರ್ ನಲ್ಲಿ ಹೋಗೋಣ ಎಂದು ತಿಳಿಸುತ್ತಾರೆ. ಅವರ ಸೂಚನೆಯಂತೆ 11.45 ರ ಸಮಯಕ್ಕೆ ಸರಿಯಾಗಿ ಸೂಲೂರು ವಾಯುನೆಲೆಯಿಂದ ಹೆಲಿಕಾಪ್ಟರ್ ನಲ್ಲಿ ಊಟಿ ಬಳಿಯ ವೆಲ್ಲಿಂಗ್ಟನ್ ಕಾರೇಜಿನ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ 12.20 ರ ಸಮಯದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ‌.

ಈ ಹೆಲಿಕಾಪ್ಟರ್ ನಲ್ಲಿದ್ದ 14 ಜನರ ಪೈಕಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇನ್ನು ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾರತೀಯ ಸೇನೆಗೆ ಅಪಾರ ಕೊಡುಗೆ ಸೇವೆ ಸಲ್ಲಿಸಿದ್ದಾರೆ
.ಅವರ ಪತ್ನಿ ಮಧುಲಿಕಾ ರಾವತ್ ಕೂಡ ಸೇನೆಯ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜನರಲ್ ಬಿಪಿನ್ ರಾವತ್ ಅವರ ಸೇವೆಯ ಒಂದು ಹಿನ್ನೋಟ ತಿಳಿಯುವುದಾದರೆ ಜನರಲ್ ಬಿಪಿನ್ ರಾವತ್ ಅವರ ಪೂರ್ಣ ಹೆಸರು ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್. ಇವರು ಉತ್ತರಾಖಂಡ್ ಪೌರಿ ಗರ್ವಾಲ್ ಜಿಲ್ಲೆಯ ಸೈನಾ ಎಂಬ ಗ್ರಾಮದಲ್ಲಿ ಜನಿಸುತ್ತಾರೆ.

ಚೌಧರಿ ತರಣ್ ಸಿಂಗ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದು, ಎಂ.ಫಿಲ್ ಮತ್ತು ಡಿಪ್ಲೊಮಾ, ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಬಿಪಿನ್ ರಾವತ್ ಅವರು 1978 ರಲ್ಲಿ ಸೇನೆಗೆ ಸೇರ್ಪಡೆಗೊಂಡು, ಬ್ರಿಗೇಡ್ ಕಮಾಂಡರ್,ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಸದರ್ನ್ ಕಮಾಂಡ್ ಸೆರಿದಂತೆ ಅನೇಕ ಹುದ್ದೆಗಳಲ್ಲಿ ಬಿಪಿನ್ ರಾವತ್ ಅವರು ಸೇವೆ ಸಲ್ಲಿಸಿದ್ದಾರೆ. 2016 ರಲ್ಲಿ ಭಾರತೀಯ ಸೇನೆಯ 27 ನೇ ಸಿಒಎಎಸ್ ಆಗಿ ಅಧಿಕಾರ ಸ್ವೀಕರಿಸಿದ್ದರು. 2015 ರಲ್ಲಿ ಮಣಿಪುರದ ಚಂದೇಲ್ ಪ್ರದೇಶದಲ್ಲಿ ನಾಗಾ ಬಂಡುಕೋರರು ಮಾಡಿದ ದಾಳಿಯಲ್ಲಿ 18 ಯೋಧರು ಹುತಾತ್ಮರಾಗಿದ್ದರು. ಇದಾದ ಮೂರನೇ ದಿವಸದಲ್ಲಿ ಭಾರತ ಮ್ಯಾನ್ಮಾರ್ ಗೆ ನುಗ್ಗಿ ಸೇಡು ತೀರಿಸಿಕೊಂಡಿತ್ತು.

ಇದರ ಮುಖ್ಯ ನೇತೃತ್ವವನ್ನು ಇದೇ ಜನರಲ್ ಬಿಪಿನ್ ರಾವತ್ ಅವರು ವಹಿಸಿಕೊಂಡಿದ್ದರು. 2019 ರಲ್ಲಿ ಪಾಕ್ ಉಗ್ರರು ಪಾಕ್ ಆಕ್ರಮಿತ ಪ್ರದೇಶಕ್ಕೆ ದಾಳಿಯಿಟ್ಟಾಗ ಭಾರತ ಸರ್ಜಿಕಲ್ ಸ್ಟ್ರೈಟ್ ಮಾಡಿ ಯಶಸ್ಸು ಗಳಿಸಿದರ ಹಿಂದೆ ರಾವತ್ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಹೀಗೆ ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನೆಯಲ್ಲಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ಅಪ್ರತಿಮ ಸೇವೆ ನೀಡಿದ್ದಾರೆ. ಇವರಷ್ಟೇ ಅಲ್ಲದೆ ಇವರ ಪತ್ನಿ ಮಧುಲಿಕಾ ರಾವತ್ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಮಧುಲಿಕಾ ಅವರು ಯುದ್ದದಲ್ಲಿ ನಿಧನರಾದ ಯೋಧರ ಪತ್ನಿಯರಿಗೆ ನೆರವಾಗಲು ಸೈನಿಕರ ಪತ್ನಿಯರ ವೆಲ್ ಫೇರ್ ಅಸೋಸಿಯೇಶನ್ ಆರಂಭಿಸಿದರು‌.

ಇದರಡಿಯಲ್ಲಿ ಸೈನಿಕರ ಪತ್ನಿಯರು ಅವರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಅನೇಕ ಯೋಜನೆ ಕಾರ್ಯಕ್ರಮಗಳನ್ನು ಹಾಕಿಕೊಂಡು ವೀರ ಮರಣ ಹೊಂದಿದ ಸೈನಿಕರ ಕುಟಂಬಕ್ಕೆ ನೆರವು ನೀಡುತ್ತಿದ್ದರು‌. ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತಹ ಕಾರ್ಯಗಳಲ್ಲಿಯೂ ಕೂಡ ಮಧುಲಿಕಾ ರಾವತ್ ತೊಡಗಿಸಿಕೊಂಡು ತಮ್ಮ ಪತಿ ದೇಶ ಸೇವೆ ಮಾಡುತ್ತಿದ್ದಂತೆ ತಾವು ಕೂಡ ಸಾಮಾಜಿಕ ಸೇವೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಒಟ್ಟಾರೆಯಾಗಿ ದೇಶದ ಹೆಮ್ಮೆಯ ಪುತ್ರನನ್ನ ಕಳೆದುಕೊಂಡು ಇದೀಗ ಭಾರತೀಯ ಸೇನೆಗೆ ಅಪಾರ ನಷ್ಟವೇ ಸರಿ ಆಗಿದೆ.