ಬಿಪಿನ್ ರವರು ರೋಡಿನಲ್ಲಿ ತೆರಳಲ್ಲೂ ಎಲ್ಲಾ ವ್ಯವಸ್ಥೆಯಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಹೋಗೋಣ ಎಂದು ಹೇಳಿದ್ದು ಯಾರು ಗೊತ್ತೇ??

ಬಿಪಿನ್ ರವರು ರೋಡಿನಲ್ಲಿ ತೆರಳಲ್ಲೂ ಎಲ್ಲಾ ವ್ಯವಸ್ಥೆಯಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಹೋಗೋಣ ಎಂದು ಹೇಳಿದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ದೇಶ ಇದೀಗ ದುಃಖದಲ್ಲಿ ಮುಳುಗಿದೆ. ದೇಶದ ಮೊದಲ ಮಹಾದಂಡನಾಯಕ ಬಿಪಿನ್ ರಾವತ್ ಅವರು ನಿನ್ನೆ ತಮಿಳುನಾಡಿನಲ್ಲಿ ನಡೆದ ಹೆಲಿಕ್ಯಾಪ್ಟರ್ ಪತನದಲ್ಲಿ ಇಹಲೋಕ ತ್ಯಜಿಸಿ ಸ್ವರ್ಗ ಸೇರಿದ್ದಾರೆ. ಈ ಸಮಯದಲ್ಲಿ ಬಿಪಿನ್ ರಾವತ್ ರವರಿಗೆ ಸ್ವರ್ಗಪ್ರಾಪ್ತಿ ಆಗಲಿ ಎಂದು ವಿಶ್ವದ ಮೂಲೆ ಮೂಲೆಯಿಂದ ಎಲ್ಲರೂ ಸಂತಾಪವನ್ನು ಸೂಚಿಸುತ್ತಿದ್ದಾರೆ. ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾದ ಚೀನಾ ದೇಶವನ್ನು ಬಾಲ ಬಿಚ್ಚದ ಹಾಗೆ ಮಾಡಿದ್ದ ನಾಯಕ ಇನ್ನು ಇಲ್ಲ ಎಂಬುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ

ವಿಶ್ವದಲ್ಲಿ ಬಲಾಢ್ಯ ಸೇನೆಗಳಲ್ಲಿ ಒಂದಾದ ಭಾರತ ದೇಶದ ಮೂರು ಸೇನೆಗಳ ಮಹಾದಂಡನಾಯಕ ಒಂದು ಹೆಲಿಕ್ಯಾಪ್ಟರ್ ಪತನದಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ ಎಂದರೆ ನಿಜಕ್ಕೂ ನಂಬಲಾರದ ಸುದ್ದಿ ಎಂಬ ಮಾತುಗಳು ಕೇಳಿ ಬರುತ್ತಿವೆ ಹಾಗೂ ಈ ಕುರಿತು ತನಿಖೆ ಕೂಡ ನಡೆಯಬೇಕು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಇಂತಹ ಸಮಯದಲ್ಲಿ ನಿನ್ನೆ ನಡೆದ ವ್ಯವಸ್ಥೆಗಳ ಕುರಿತು ತಮಿಳುನಾಡು ಪೊಲೀಸರಿಂದ ಮಾಹಿತಿ ಹೊರ ಬಂದಿದೆ. ಹೌದು ಸ್ನೇಹಿತರೇ ರಾವತ್ ರವರಿಗೆ ಸಂಪೂರ್ಣ ಭದ್ರತೆ ನೀಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ತಮಿಳುನಾಡು ಪೊಲೀಸರಿಂದ ಇದೀಗ ಮಾಹಿತಿ ಹೊರಬಂದಿದ್ದು

ತಮಿಳುನಾಡು ಪೊಲೀಸರ ಹೇಳಿಕೆಯ ಪ್ರಕಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರು ರವರಿಗೆ ತಮಿಳುನಾಡು ಭಾರೀ ಭದ್ರತೆಯನ್ನು ನೀಡಿತ್ತು, ಮೊದಲೇ ಬರುವುದು ಖಚಿತವಾಗಿದ್ದರಿಂದ ತಮಿಳುನಾಡು ಪೊಲೀಸರು ಎಲ್ಲ ವ್ಯವಸ್ಥೆ ಮಾಡಿ ಸೂಲೂರಿನಿಂದ ರಸ್ತೆ ಮಾರ್ಗವಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ತಲುಪಬೇಕಾಗಿದ್ದ ಕಾಲೇಜಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅದ್ಯಾಕೋ ತಿಳಿದಿಲ್ಲ 80 ಕಿಲೋಮೀಟರ್ ದೂರ ಇದೆ ಆದಕಾರಣ ಕಾರಿನಲ್ಲಿ ಹೋಗುವುದು ಬೇಡ ಹೆಲಿಕ್ಯಾಪ್ಟರ್ ನಲ್ಲಿ ಹೋಗಿ ಬಿಡೋಣ ಎಂದು ಕುದ್ದು ಬಿಪಿನ್ ರಾವತ್ ಅವರೇ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂಬುದು ತಮಿಳುನಾಡು ಪೊಲೀಸರ ಹೇಳಿಕೆಯಾಗಿದೆ. ಇದಕ್ಕೆ ಅಲ್ವ ವಿಧಿಯಾಟ ಅನ್ನೋದು??