ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹಗುರ ಯುದ್ಧವಿಮಾನ ತೇಜಸ್​ಗೆ ಶಕ್ತಿ ತುಂಬುವ ಕಾವೇರಿ, ಬದಲಾಗುತ್ತಿದೆ ಮಿಲಿಟರಿ ರಫ್ತಿನ ಆಯಾಮ, ಹೇಗೆ ಗೊತ್ತೇ??

10

ನಮಸ್ಕಾರ ಸ್ನೇಹಿತರೇ ಭಾರತದ ರಕ್ಷಣಾ ಶಕ್ತಿ ಎಂದಿಗೂ ಅದ್ಭುತ. ವಾಯುಪಡೆಯ ಸರ್ವಶ್ರೇಷ್ಠ ಶಕ್ತಿ ಎಂದು ಕರೆಸಿಕೊಂಡಿದ್ದ ಯುದ್ಧ ವಿಮಾನ ತೇಜಸ್ ಗೆ ಬಲ ನೀಡುತ್ತಿರುವ ಇಂಜಿನ್ ಹೆಸರು ಕನ್ನಡಿಗರ ಹೆಮ್ಮೆ ಎಂದೇ ಕರೆಯಬಹುದಾದ ಕಾವೇರಿ. ಹೌದು ಕಳೆದ ಹತ್ತು ವರ್ಷಗಳಿಂದ ಯುದ್ಧ ವಿಮಾನ ತೇಜಸ್ ಗೆ ಬಲ ನೀಡುತ್ತಿರುವುದು ಕಾವೇರಿ ಹೆಸರಿನ ಇಂಜಿನ್. ಇದನ್ನ ಅಭಿವೃದ್ಧಿಪಡಿಸಲು ಕಳೆದ ಹತ್ತು ವರ್ಷಗಳಿಂದ ತಜ್ಞರ ತಂಡವೊಂದು ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗ ಕೆಲವು ಮಾಹಿತಿಗಳು ಈಗ ಹೊರಬರುತ್ತಿವೆ.

ತೇಜಸ್ ಅನ್ನು ವಿಶ್ವದ ಅತ್ಯಂತ ಹಗುರವಾದ ಯುದ್ಧ ವಿಮಾನ ಎಂದು ಕರೆಯಲಾಗುತ್ತದೆ. ಮೊದಲು ಈ ಸ್ವದೇಶಿ ಯುದ್ಧ ವಿಮಾನಕ್ಕೆ ಸ್ವದೇಶಿ ನಿರ್ಮಿತ ಇಂಜಿನ್ ನ್ನು ಅಳವಡಿಸಬೇಕು ಎಂದು ಯೋಚಿಸಲಾಗಿತ್ತು. ಆದರೇ ಸ್ವದೇಶಿ ಇಂಜಿನ್ ಕಾವೇರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಅನಿವಾರ್ಯವಾಗಿ ಜಿಐ ಇಂಜಿನ್ ಗಳ ಮೊರೆ ಹೋಗಬೇಕಾಯಿತು.

ಇನ್ನು 1996ರಲ್ಲೇ ಶುರುವಾದ ಕಾವೇರಿ ಇಂಜಿನ್ ನ ಅಭಿವೃದ್ಧಿಪಡಿಸುವ ಕಾರ್ಯ ಇಂದಿಗೂ ಕುಂಠುತ್ತಾ ಸಾಗಿದೆ. ಡಿ.ಆರ್.ಡಿ.ಓ ದ ನುರಿತ ಇಂಜಿನಿಯರ್ ಗಳು ವಿಶೇಷವಾದ ತಂತ್ರಜ್ಞಾನ ಬಳಸಿ ಅದೆಷ್ಟೇ ಅಭಿವೃದ್ಧಿಪಡಿಸಿದರೂ, ನೀರಿಕ್ಷಿತ ಫಲಿತಾಂಶ ದೊರೆಯುತ್ತಿಲ್ಲ. ಇನ್ನು ಯುದ್ಧ ವಿಮಾನಗಳ ಇಂಜಿನ್ ಗಳು ಹಗುರ ತೂಕವನ್ನು ಹೊಂದಿರಬೇಕು ಹಾಗೂ ಹೆಚ್ಚು ಹೊತ್ತು ಆಗಸದಲ್ಲಿ ಹಾರಾಡುವ ಸಾಮರ್ಥ್ಯವನ್ನು ಹೊಂದಿರಬೇಕಾಗಿರುತ್ತದೆ. ಸ್ವದೇಶಿ ಯುದ್ಧ ವಿಮಾನವನ್ನ ತಯಾರಿಸಿದ ಭಾರತಕ್ಕೆ ಇಂಜಿನ್ ವಿಭಾಗದಲ್ಲಿಯೂ ಸ್ವದೇಶಿ ಇಂಜಿನ್ ತಯಾರಿಸಲೂ ಆಗುತ್ತಿಲ್ಲ.

2014ರಲ್ಲಿ ನಡೆದ ಜಾಗತಿಕ ಒಪ್ಪಂದದಂತೆ, ಡಿ.ಆರ್.ಡಿ.ಒ ಫ್ರಾನ್ಸ್ ನ ಜೊತೆ ಇಂಜಿನ್ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈ ಹಾಕಿತು. ಆದರೇ ಆ ತಂತ್ರಜ್ಞಾನವನ್ನು ವರ್ಗಾಯಿಸಲು ಫ್ರಾನ್ಸ್ ಸರ್ಕಾರ ಒಪ್ಪದ ಕಾರಣ ಕಾವೇರಿ ಇಂಜಿನ್ ಬಲಪಡಿಸುವ ಕಾರ್ಯ ಕೈಗೂಡಲಿಲ್ಲ. ಆದರೇ ಸದ್ಯ ಕೇಂದ್ರ ಸರ್ಕಾರ ಆತ್ಮನಿರ್ಭರ್ ಭಾರತ್ ಹೆಸರಿನಲ್ಲಿ ಸ್ವದೇಶಿ ಉದ್ಯಮಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ‌. ಹಾಗಾಗಿ ಮೇಕ್ ಇನ್ ಇಂಡಿಯಾ ಎಂಬಂತೆ ಸ್ವದೇಶಿ ಇಂಜಿನ್ ಕಾವೇರಿ ಸಹ ಶೀಘ್ರ ತೇಜಸ್ ನಲ್ಲಿ ಒಳಗೊಳ್ಳುವ ಸಾಧ್ಯತೆಯಿದೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.