ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸ ಸಂಚಲನವನ್ನು ಸೃಷ್ಟಿ ಮಾಡಿದ ಬಾಲಯ್ಯ ನಟನೆಯ ಅಖಂಡ ಸಿನಿಮಾ ಮೊದಲ 10 ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗಿರುವಂತಹ ಬಾಲಯ್ಯ ನಟನೆಯ ಅಖಂಡ ಚಿತ್ರ ತೆಲುಗು ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತಿದೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಬಾಲಯ್ಯ ನಟನೆಯ ಅಖಂಡ ಚಿತ್ರ.

ಕೇವಲ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಚಿತ್ರಮಂದಿರಗಳಲ್ಲೂ ಕೂಡ ಬಾಲಯ್ಯ ನಟನೆಯ ಅಖಂಡ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಬೋಯಾಪತಿ ಶ್ರಿನು ಹಾಗೂ ಬಾಲಯ್ಯ ಕಾಂಬಿನೇಷನ್ ಈಗಾಗಲೇ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದು ಈ ಸಾಲಿಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಅಖಂಡ ಕೂಡ ಸೇರಿದೆ. ಈಗಾಗಲೇ ಹಲವಾರು ತೆಲುಗು ಚಿತ್ರಗಳು ಬಿಡುಗಡೆಯಾದರೂ ಕೂಡ ಪ್ರೇಕ್ಷಕರ ಮುಖದಲ್ಲಿ ಮನೋರಂಜನೆಯ ಸಂತಸವನ್ನು ಮೂಡಿಸಿದ್ದು ಕೇವಲ ಬಾಲಯ್ಯ ನಟನೆಯ ಅಖಂಡ ಚಿತ್ರ ಮಾತ್ರ. ಇನ್ನು ಅಖಂಡ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

10 ದಿನದಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಖಂಡ ಚಿತ್ರ ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಮೊದಲ ದಿನದಲ್ಲೇ ಬರೋಬ್ಬರಿ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಅಖಂಡ. ಇನ್ನು ಅಖಂಡ ಚಿತ್ರ ಭಾರತದಲ್ಲಿ 75 ಕೋಟಿ ರೂಪಾಯಿಯನ್ನು ಗಳಿಸಿದ್ದಾರೆ ವಿದೇಶಗಳಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಚಿತ್ರದ ಗೆಲುವಿನ ಕುರಿತಂತೆ ನಂದಮೂರಿ ಬಾಲಕೃಷ್ಣ ರವರು ಸಂತೋಷವನ್ನು ವ್ಯಕ್ತಪಡಿಸಿದ್ದು ಇದು ತಂಡದ ಪರಿಶ್ರಮಕ್ಕೆ ಸಂದ ಗೆಲುವು ಎಂಬುದಾಗಿ ಹೇಳಿದ್ದಾರೆ. ಅಖಂಡ ಎರಡನೇ ಪಾರ್ಟ್ ಕೂಡ ಅತಿ ಶೀಘ್ರದಲ್ಲೇ ಬರಲಿದೆ ಎಂಬುದಾಗಿ ಕೂಡಾ ತೆಲುಗು ಚಿತ್ರರಂಗದಲ್ಲಿ ಮಾತುಕತೆಗಳು ಪ್ರಾರಂಭವಾಗಿದೆ. ಅಖಂಡ ಚಿತ್ರವನ್ನು ವೀಕ್ಷಿಸಿದ್ದರೆ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.