ಬಿಪಿನ್ ರಾವತ್ ರವರ ಸ್ಥಾನ ತುಂಬಲು ಸಿದ್ಧತೆ ಆರಂಭಿಸಿದ ಕೇಂದ್ರ, ಕೇಳಿ ಬರುತ್ತಿರುವ ಹೆಸರು ಯಾರದ್ದು ಗೊತ್ತೇ??

ಬಿಪಿನ್ ರಾವತ್ ರವರ ಸ್ಥಾನ ತುಂಬಲು ಸಿದ್ಧತೆ ಆರಂಭಿಸಿದ ಕೇಂದ್ರ, ಕೇಳಿ ಬರುತ್ತಿರುವ ಹೆಸರು ಯಾರದ್ದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಸೇನೆಯ ಮಹಾದಂಡನಾಯಕರು ಇಹಲೋಕ ತ್ಯಜಿಸಿದ ಬಳಿಕ ಇಡೀ ದೇಶವೇ ದುಃಖದಲ್ಲಿ ಮುಳುಗಿದ್ದರೂ ಕೂಡ ಕೂಡಲೇ ಭಾರತೀಯ ಸೇನೆಯ ಮಹಾ ದಂಡನಾಯಕನನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎರಡು ಕಡೆಗಳಲ್ಲಿ ಒಂದೆಡೆ ಪಾಕಿಸ್ತಾನ ಹಾಗೂ ಮತ್ತೊಂದೆಡೆ ಚೀನಾ ದೇಶಗಳ ಗಡಿಯಲ್ಲಿ ಹಲವಾರು ತಿಂಗಳುಗಳಿಂದ ಸದಾ ಉದ್ವಿಗ್ನ ವಾತಾವರಣವಿರುವ ಕಾರಣ ಯಾವುದೇ ಸಮಯದಲ್ಲೂ ಕೂಡ ಸವಾಲುಗಳನ್ನು ಎದುರಿಸಲು ಭಾರತ ದೇಶ ಸಿದ್ಧವಾಗಿರಬೇಕು.

ಆದಕಾರಣ ಒಂದು ಕ್ಷಣವು ಕೂಡ ವ್ಯರ್ಥ ಮಾಡುವ ಪರಿಸ್ಥಿತಿಯಲ್ಲಿ ಭಾರತ ದೇಶ ಈಗ ಇಲ್ಲ. ಕೊಂಚ ಯಾಮಾರಿದರೂ ಕೂಡ ಚೀನಾ ಹಾಗೂ ಪಾಕಿಸ್ತಾನ ದೇಶಗಳು ಬಾಲ ಬಿಚ್ಚಲು ಆರಂಭಿಸುತ್ತವೆ ಎಂಬುದನ್ನು ಕೇಂದ್ರ ಸ್ಪಷ್ಟವಾಗಿ ತಿಳಿದು ಕೊಂಡಿದೆ. ಆದ ಕಾರಣ ಇಡೀ ಭಾರತ ದೇಶದ ದುಃಖದಲ್ಲಿದ್ದರೂ ಕೂಡ ರಕ್ಷಣಾ ಸಿಬ್ಬಂದಿ ಮುಖ್ಯಸ್ಥನನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಇದೀಗ ಕೇಂದ್ರ ಚಾಲನೆ ನೀಡಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಜನರಲ್ ಬಿಪಿನ್ ರಾವತ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬುವಂತಹ ನಾಯಕನಿಗಾಗಿ ಕೇಂದ್ರ ಹುಡುಕಾಟ ನಡೆಸಿದೆ.

ಈ ಹುಡುಕಾಟದಲ್ಲಿ ಕೇಂದ್ರ ಸರ್ಕಾರಕ್ಕೆ ಇದೀಗ ಭೂಸೇನೆಯ ಮುಖ್ಯಸ್ಥರಾಗಿರುವ ಮನೋಜ್ ಮುಕುಂದನ್ ನರವಣಿ ರವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿರುವ ನರವಣಿ ರವರು ಭಾರತ ಹಾಗೂ ಚೀನಾ ಗಡಿಯಲ್ಲಿ ಸರಿಸುಮಾರು ನಾಲ್ಕು ಸಾವಿರ ಕಿಲೋಮೀಟರ್ ಗಡಿಯನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು ಹೊತ್ತುಕೊಂಡು ಬಹಳ ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಹಲವಾರು ಕಮಾಂಡ್ ಗಳಲ್ಲಿ ಹಾಗೂ ಸಿಬ್ಬಂದಿ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿರುವ ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಮತ್ತು ಪೂರ್ವ ಮುಂಭಾಗದ ಪದಾತಿದಳದ ಕಮಾಂಡರ್ ಕೂಡ ಆಗಿದ್ದರು. ಶ್ರೀಲಂಕಾದಲ್ಲಿ ಶಾಂತಿಪಾಲನಾ ಪಡೆಯ ಭಾಗವಾಗಿದ್ದ ಇವರು ಮೂರು ವರ್ಷಗಳ ಕಾಲ ಮ್ಯಾನ್ಮಾರ್ ದೇಶದ ರಾಯಭಾರಿ ಕಚೇರಿಯಲ್ಲಿ ಕೂಡ ಕೆಲಸ ಮಾಡಿದ್ದಾರೆ. ಹೀಗೆ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿರುವ ನರಾವಣೆ ರವರನ್ನು ಮುಂದಿನ ಸಿಡಿಎಸ್ ಅಂದರೆ ರಕ್ಷಣಾ ಸಿಬ್ಬಂದಿ ಮುಖ್ಯ ಸ್ಥಾನಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.