ಸೌಂದರ್ಯದಿಂದಲೇ ರಾಜರನ್ನು ಮದುವೆಯಾಗಿ ರಾಜ್ಯಗಳನ್ನು ವಶಕ್ಕೆ ಪಡೆಯುತ್ತಿದ್ದ ಈ ರಾಣಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದಳು ಗೊತ್ತೇ??

ಸೌಂದರ್ಯದಿಂದಲೇ ರಾಜರನ್ನು ಮದುವೆಯಾಗಿ ರಾಜ್ಯಗಳನ್ನು ವಶಕ್ಕೆ ಪಡೆಯುತ್ತಿದ್ದ ಈ ರಾಣಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದಳು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಪುರಾತನ ಸಮಯದಲ್ಲಿ ರಾಣಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿದ್ದರು. ಇದಕ್ಕಾಗಿ ಅವರು ಹಲವಾರು ಸೌಂದರ್ಯವರ್ಧಕ ಕ್ರಮಗಳನ್ನು ಅನುಸರಿಸುತ್ತಿದ್ದರು. ಇನ್ನು ಹಲವಾರು ರಾಣಿಯರು ಎಮ್ಮೆ ಹಾಗೂ ಹಸುವಿನ ಹಾಲನ್ನು ಸ್ನಾನ ಮಾಡಲು ಬಳಸಿಕೊಳ್ಳುತ್ತಿದ್ದರು. ಇನ್ನು ಇಂದು ನಾವು ಹೇಳಲು ಹೊರಟಿರುವ ರಾಣಿ ಜಗದೇಕ ಸುಂದರಿಯಾಗಿ ಇತಿಹಾಸದಲ್ಲಿ ಗುರುತು ಪಡೆದುಕೊಂಡಿದ್ದಾಳೆ.

ಆಕೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದಳು ಹಾಗೂ ಆಕೆ ಯಾರು ಎಂಬ ವಿವರವನ್ನು ನಾವು ಇಂದಿನ ವಿಚಾರದಲ್ಲಿ ಹೇಳಲು ಹೊರಟಿದ್ದೇವೆ. ಹೌದು ಹೀಗೆ ತಾನು ದಿನನಿತ್ಯ ಸ್ನಾನ ಮಾಡಲು ಬರೋಬ್ಬರಿ 700 ಕತ್ತೆಗಳ ಹಾಲನ್ನು ತರಿಸಿಕೊಳ್ಳುತ್ತಿದ್ದಳಂತೆ. ಹೌದು ಇಂದು ನಾವು ಮಾತನಾಡಲು ಹೊರಟಿರುವುದು ಇತಿಹಾಸ ಪ್ರಸಿದ್ಧ ರಾಣಿ ಯಾಗಿರುವ ಸುಂದರಿ ಮಿಸ್ರ ದೇಶದ ರಾಣಿ ಕ್ಲಿಯೋಪಾತ್ರ. ಇನ್ನು ಈಕೆ 14ವರ್ಷದ ಹೇಳಿರಬೇಕಾದರೆ ಇವಳ ತಂದೆ ಮರಣ ವನ್ನು ಹೊಂದಿದೆ ಅತಿ ಚಿಕ್ಕ ವಯಸ್ಸಿನಲ್ಲಿ ರಾಜ್ಯಭಾರವನ್ನು ಮಾಡುವ ಹೊಣೆ ಈಕೆ ಮತ್ತು ಈಕೆಯ ಸಹೋದರ ಟೊಲೆಮಿಯ ಮೇಲೆ ಬಿತ್ತು.

ಆದರೆ ರಾಜ್ಯದ ವಿಷಯವಾಗಿ ಕ್ಲಿಯೋಪಾತ್ರ ಹಾಗೂ ಆಕೆಯ ಸಹೋದರನ ನಡುವೆ ಜಗಳಗಳು ಪ್ರಾರಂಭವಾಗಿ ಸಿರಿಯಾದಲ್ಲಿ ಕ್ಲಿಯೋಪಾತ್ರ ಸೋಲುತ್ತಾಳೆ. ಇನ್ನು ಇದಕ್ಕೆ ಈಕೆ ಮಾಡಿದಂತಹ ಶಡ್ಯಂತ್ರ ಕೂಡ ಸಾಕಷ್ಟು ಗಮನಾರ್ಹವಾಗಿತ್ತು. ಇನ್ನೊಂದಿನ ಕಾಲದಲ್ಲಿ ಅತ್ಯಂತ ಶಕ್ತಿಶಾಲಿ ರಾಜನಾಗಿದ್ದ ಜೂಲಿಯಸ್ ಸೀಸರ್ ಅನ್ನು ತನ್ನ ಸೌಂದರ್ಯದ ವಷವಾಗಿ ಮಾಡಿಕೊಂಡು ಸಹೋದರನ ಮೇಲೆ ದಂಡೆತ್ತಿ ಹೋಗಿ ಆತನನ್ನು ಮುಗಿಸಿ ಆತನ ಜಾಗದಲ್ಲಿ ರಾಜ್ಯಭಾರವನ್ನು ವಹಿಸಿಕೊಳ್ಳುತ್ತಾಳೆ.

ಇನ್ನು ಅಕ್ಕಪಕ್ಕದ ರಾಜರನ್ನು ಕೂಡ ತನ್ನ ಸೌಂದರ್ಯದಿಂದಾಗಿ ಎಲ್ಲರನ್ನೂ ತನ್ನ ವಶದಲ್ಲಿ ಇರಿಸಿಕೊಂಡಿರುತ್ತಾಳೆ. ಇನ್ನು ಇವಳು 12 ಭಾಷೆಗಳನ್ನು ಕೂಡ ಅರಿತುಕೊಂಡಿದ್ದ ರಿಂದಾಗಿ ಎಲ್ಲರ ಜೊತೆಗೆ ಸಂವಹನ ಮಾಡಲು ಸದಾ ಸಿದ್ಧರಾಗಿರುತ್ತಿದ್ದಳು. ಇನ್ನು ಸೌಂದರ್ಯ ದೇವತೆಯಾಗಿರುವ ಕ್ಲಿಯೋಪಾತ್ರ ಸೌಂದರ್ಯವತಿ ಆಗಿರಲು 700 ಕತ್ತೆಗಳ ಹಾಲನ್ನು ಉಪಯೋಗಿಸುತ್ತಿದ್ದೆ ಕಾರಣ ಎಂಬುದು ಇತ್ತೀಚಿಗಷ್ಟೇ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ.

ಕತ್ತೆಗಳ ಹಾಲಿನಲ್ಲಿ ಕಡಿಮೆ ಕೊಬ್ಬಿರುವ ರಿಂದಾಗಿ ಇದು ತ್ವಚೆಗೆ ಬಹಳಷ್ಟು ಕಾಂತಿಯನ್ನು ನೀಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಇನ್ನು ಇಷ್ಟೊಂದು ಸುಂದರವಾಗಿದ್ದ ಕ್ಲಿಯೋಪಾತ್ರ ಜೀವಿಸಿ ರುವುದು ಕೇವಲ 39 ವರ್ಷಗಳಷ್ಟು ಮಾತ್ರ. ಕೆಲವು ಮೂಲಗಳ ಪ್ರಕಾರ ಅವಳಿಗೆ ಹಾವನ್ನು ಕಚ್ಚಿಸಿ ಮುಗಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಕೆಲವು ಕಡೆಗಳಲ್ಲಿ ಕ್ಲಿಯೋಪಾತ್ರ ಮಾದಕ ವಸ್ತುಗಳ ದಾಸಿಯಾಗಿದ್ದು ಇದೇ ಕಾರಣದಿಂದಾಗಿ ಆಕೆ ತನ್ನ ಜೀವವನ್ನು ಕಳೆದುಕೊಳ್ಳುತ್ತಾಳೆ ಎಂಬ ಉಲ್ಲೇಖವಿದೆ. ಆದರೆ ಇಂದಿಗೂ ಕೂಡ ಜಗದೇಕ ಸುಂದರಿಯಾಗಿದ್ದ ಕ್ಲಿಯೋಪಾತ್ರ ತನ್ನ ಜೀವವನ್ನು ಹೇಗೆ ಕಳೆದುಕೊಂಡಿದ್ದಾರೆ ಎಂಬ ಗೊಂದಲ ಇನ್ನೂ ಕೂಡ ಇತಿಹಾಸಕಾರರಲ್ಲಿ ಹಾಗೆ ಉಳಿದುಕೊಂಡಿದೆ. ಕೇವಲ ತನ್ನ ಸೌಂದರ್ಯದಿಂದಲೇ ಎಲ್ಲವನ್ನು ಸಾಧಿಸಿದ್ದ ಕ್ಲಿಯೋಪಾತ್ರಾಳ ಸಾಹಸ ಹಾಗೂ ಸಾಧನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.