ನಾಯಕತ್ವ ಸುಮ್ಮನೆ ಕೊಟ್ಟಿಲ್ಲ, ರೋಹಿತ್ ಗೆ ಎರಡು ವರ್ಷದಲ್ಲಿ ನೀಡಲಾಗಿದೆ ಬೃಹತ್ ಕೆಲಸ. ಮಾಡಿ ಮುಗಿಸಲೇಬೇಕು ಹೊಸ ಕ್ಯಾಪ್ಟನ್. ಏನು ಗೊತ್ತೇ??

ನಾಯಕತ್ವ ಸುಮ್ಮನೆ ಕೊಟ್ಟಿಲ್ಲ, ರೋಹಿತ್ ಗೆ ಎರಡು ವರ್ಷದಲ್ಲಿ ನೀಡಲಾಗಿದೆ ಬೃಹತ್ ಕೆಲಸ. ಮಾಡಿ ಮುಗಿಸಲೇಬೇಕು ಹೊಸ ಕ್ಯಾಪ್ಟನ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ನೀರಿಕ್ಷೆಯಂತೆ ಬೆಳವಣಿಗೆ ನಡೆದಿದೆ. ಟಿ 20 ತಂಡದ ನಾಯಕನಾಗಿದ್ದ ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವವನ್ನು ಸಹ ನೀಡಿದೆ. ಸದ್ಯ 35 ರ ಹರೆದಯಲ್ಲಿ ನಾಯಕನಾಗಿರುವ ರೋಹಿತ್ ಶರ್ಮಾ ಮುಂದೆ ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನ ಸಮಾಧಾನಿಸಿಕೊಂಡು ಹೋಗುವುದಲ್ಲದೇ, ಬೆಟ್ಟದಷ್ಟು ಟಾಸ್ಕ್ ಗಳನ್ನ ಬಿಸಿಸಿಐ ಮುಂದಿಟ್ಟಿದೆ.

ಭಾರತ ಹಲವಾರು ವರ್ಷಗಳಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿಲ್ಲ. ಮುಂಬರುವ ಟಿ 20 ವಿಶ್ವಕಪ್, ಏಕದಿನ ವಿಶ್ವಕಪ್ ಗೆಲ್ಲಬೇಕೆಂಬ ಟಾಸ್ಕ್ ಇದೆ. ಇದರ ಜೊತೆ ತಂಡದಲ್ಲಿರುವ ಭಿನ್ನಾಭಿಪ್ರಾಯಗಳು, ಬಣಗಳು , ಹಾಗೂ ಗುಂಪುಗಾರಿಕೆಯನ್ನು ಮುಕ್ತಗೊಳಿಸಬೇಕಿದೆ. ಅದಲ್ಲದೇ ಭವಿಷ್ಯದ ನಾಯಕನನ್ನು ಸಹ ಸೃಷ್ಠಿಸುವ ಸಂಪೂರ್ಣ ಜವಾಬ್ದಾರಿಯನ್ನ ರೋಹಿತ್ ಹಾಗೂ ದ್ರಾವಿಡ್ ಹೆಗಲ ಮೇಲೆ ಬಿಸಿಸಿಐ ಹಾಕಿದೆ.

ಧೋನಿ ನಾಯಕರಾಗಿದ್ದಾಗ ವಿರಾಟ್ ರನ್ನ ನಾಯಕರನ್ನಾಗಿ ಬೆಳೆಸಿದ ರೀತಿ, ರೋಹಿತ್ ಸಹ ಭವಿಷ್ಯದ ನಾಯಕನನ್ನು ಬೆಳೆಸಬೇಕಾಗಿದೆ. ಮೂಲಗಳ ಪ್ರಕಾರ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶುಭಮಾನ್ ಗಿಲ್ ಭವಿಷ್ಯದ ನಾಯಕರಾಗಬಹುದೆಂದು ಹೇಳಿದರೂ, ಗಿಲ್ ಹಾಗೂ ಅಯ್ಯರ್ ಇನ್ನು ಭಾರತ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಲ್ಲ. ಇನ್ನು ರಾಹುಲ್ ಗೆ ಸದ್ಯ 30 ವರ್ಷವಾದರೇ, ರಿಷಭ್ ಪಂತ್ ಇನ್ನು 24 ವರ್ಷವಾಗಿದೆ. ಹೀಗಾಗಿ ರಿಷಭ್ ಪಂತ್ ರಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಒಟ್ಟಿನಲ್ಲಿ ಈ ಹೊಸ ಜವಾಬ್ದಾರಿಯನ್ನ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ ರೋಹಿತ್ ಹೇಗೆ ನಿಭಾಯಿಸುತ್ತಾರೆಂಬುದನ್ನ ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.