ಜಿಯೋ ಗೆ ಠಕ್ಕರ್ ಕೊಡಲು ವಿದೇಶದಿಂದ ಹಾರಿ ಬರುತ್ತಿದ್ದಾನೆ ದೈತ್ಯ. ಈತನೇ ಬ್ಯಾಕ್ಗ್ರೌಂಡ್ ನೋಡಿದರೆ ಮತ್ತೊಮ್ಮೆ ಟೆಲಿಕಾಂ ತಲ್ಲಣಗೊಳ್ಳಲಿದೆ, ಏನು ಮಾಡುತ್ತಿದ್ದಾರೆ ಗೊತ್ತಾ??

ಜಿಯೋ ಗೆ ಠಕ್ಕರ್ ಕೊಡಲು ವಿದೇಶದಿಂದ ಹಾರಿ ಬರುತ್ತಿದ್ದಾನೆ ದೈತ್ಯ. ಈತನೇ ಬ್ಯಾಕ್ಗ್ರೌಂಡ್ ನೋಡಿದರೆ ಮತ್ತೊಮ್ಮೆ ಟೆಲಿಕಾಂ ತಲ್ಲಣಗೊಳ್ಳಲಿದೆ, ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟೆಲಿಕಾಂ ಇಂಡಸ್ಟ್ರಿಯಲ್ಲಿ ಮತ್ತೊಂದು ಸಂಚಲನ ಮೂಡಿಸಿ ಕ್ರಾಂತಿ ಮಾಡಲು ಬರುತ್ತಿದೆ ಜಗತ್ತಿನ ನಂಬರ್ ಒನ್ ಶ್ರೀಮಂತನ ಟೆಲಿಕಾಂ ಕಂಪನಿ. ಈಗಾಗಲೇ ಅಂಬಾನಿ 2016 ರಲ್ಲಿ ಜಿಯೋ ಸಂಸ್ಥೆಯ ಮೂಲಕ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಬಹುದೊಡ್ಡ ಟೆಲಿಕಾಂ ನೆಟ್ ವರ್ಕ್ ಆಗಿ ಬೆಳೆದು ನಿಂತಿದೆ.

ಸದ್ಯಕ್ಕೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳಿಗೆ ಭಾರಿ ಪೈಪೋಟಿ ನಡೆಯುತ್ತಿದೆ. ಇದೀಗ ಇವೆರಡಕ್ಕೂ ಪ್ರಬಲ ಪೈಪೋಟಿ ನೀಡಲು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಅವರು ಸ್ಟಾರ್ ಲಿಂಕ್ ಎಂಬ ಹೆಸರಿನ ಬ್ರಾಂಡ್ ಬ್ಯಾಂಡ್ ಸೇವೆ ನೀಡಲು ಮುಂದಾಗಿದ್ದಾರೆ. ಎಲನ್ ಮಸ್ಕ್ ಅವರು ತಮ್ಮ ಒಡೆತನದ ಸ್ಟಾರ್ ಲಿಂಕ್ ಸಂಸ್ಥೆಯಿಂದ ಸ್ಯಾಟ್ ಲೈಟ್ ಆಧಾರಿತ ಬ್ರಾಡ್ ಬ್ಯಾಂಡ್ ಸೇವೆಯನ್ನ 2022 ರ ಡಿಸೆಂಬರ್ ಅಂತ್ಯದಿಂದ ಪ್ರಾರಂಭ ಮಾಡಲು ಎಲ್ಲಾ ರೀತಿಯ ಯೋಜನಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಈಗಾಗಲೇ ಎಲಾನ್ ಮಸ್ಕ್ ಅವರು ತಮ್ಮ ಈ ನೂತನ ಸ್ಟಾರ್ ಲಿಂಕ್ ಬ್ರಾಡ್ ಬ್ಯಾಂಡ್ ಸೇವೆಯನ್ನು ದೇಶದಲ್ಲಿ ಆರಂಭ ಮಾಡಲು ಭಾರತ ಸರ್ಕಾರದಿಂದ ಬರೋಬ್ಬರಿ ಎರಡು ಲಕ್ಷ ಟರ್ಮಿನಲ್ ಸಮ್ಮತಿ ಪಡೆದುಕೊಂಡಿದ್ದಾರಂತೆ. ಸ್ಪೇಸ್ ಎಕ್ಸ್ ಅಧೀನ ಸಂಸ್ಥೆಯಾಗಿರುವ ಈ ಸ್ಟಾರ್ ಲಿಂಕ್ ಬ್ರಾಡ್ ಬ್ಯಾಂಡ್ ಸೇವೆಯು ಐವತ್ತರಿಂದ ನೂರೈವತ್ತು ಮೆಗಾಬೈಟ್ ವೇಗದಲ್ಲಿ ಇರಲಿದ್ದು, ಗ್ರಾಹಕರು ಈ ಸೇವೆ ಪಡೆಯಲು ಇಂತಿಷ್ಟು ಹಣವನ್ನು ಅಡ್ವಾನ್ಸ್ ಆಗಿ ನೀಡಬೇಕಾಗಿದೆಯಂತೆ.

ಈ ಸ್ಟಾರ್ ಲಿಂಕ್ ನೆಟ್ ವರ್ಕ್ ಸದ್ಯದ ಮಟ್ಟಿಗೆ ಇತರೆ ಟೆಲಿಕಾಂ ನೆಟ್ ವರ್ಕ್ ಗಳಿಗೆ ಎಲ್ಲಿ ತಮಗೆ ಸೇವೆ ನೀಡಲು ತೊಂದರೆ ಅನುಭವಿಸುತ್ತಿವೆಯೋ ಅಲ್ಲೆಲ್ಲಾ ಈ ಸ್ಟಾರ್ ಲಿಂಕ್ ನೆಟ್ ವರ್ಕ್ ಸೇವೆ ಸಿಗುತ್ತದೆಯಂತೆ. ಪ್ರಸ್ತುತ ಯಾವುದಾದರು ರಾಜ್ಯ ಅಥವಾ ದೇಶದ ಯಾವುದಾದರು ಗಡಿ ಅಂಚಿನ ಪ್ರದೇಶಗಳಲ್ಲಿ ಹೋದಾಗ ಸದ್ಯ ಇರುವ ಟೆಲಿಕಾಂ ಸಂಸ್ಥೆಗಳ ನೆಟ್ ವರ್ಕ್ ಸೇವೆ ಅಲಭ್ಯವಾಗಿರುತ್ತವೆ. ಆದರೆ ಈ ಸ್ಟಾರ್ ಲಿಂಕ್ ಕಂಪನಿಯು ಈ ನ್ಯುನತೆಗಳನ್ನ ಮೀರಿ ಸೇವೆ ನೀಡುತ್ತವೆ ಎಂದು ತಿಳಿದು ಬಂದಿದೆ. ಏಕೆಂದರೆ ಈ ಸ್ಟಾರ್ ಲಿಂಕ್ ಟೆವಿಕಾಂ ನೆಟ್ ವರ್ಕ್ ನೇರವಾಗಿ ಸ್ಯಾಟ್ ಲೈಟ್ ಮುಖಾಂತರ ಕಾರ್ಯ ನಿರ್ವಹಿಸುತ್ತದೆಯಂತೆ. ಒಟ್ಟಾರೆಯಾಗಿ ಮುಂದಿನ 2022 ವರ್ಷದ ಅಂತ್ಯದ ವೇಳೆಗೆ ಎಲಾನ್ ಮಸ್ಕ್ ಅವರ ಈ ಸ್ಟಾರ್ ಲಿಂಕ್ ಸಂಸ್ಥೆ ಟೆಲಿಕಾಂ ಇಂಡಸ್ಟ್ರಿಗೆ ಹೆಜ್ಜೆ ಇಟ್ಟಲ್ಲಿ ಪ್ರಸ್ತುತ ಟೆಲಿಕಾಂ ಇಂಡಸ್ಟ್ರಿಯನ್ನು ಆಳುತ್ತಿರುವ ಜಿಯೋ ಮತ್ತು ಭಾರ್ತಿ ಎರ್ಟೆಲ್ ಕಂಪನಿಗಳಿಗೆ ಭಾರಿ ಪೈಪೋಟಿ ನೀಡಿ ಈ ಎರಡೂ ಕಂಪನಿಗಳ ನೆಟ್ ವರ್ಕ್ ಸೇವೆಗೂ ಈ ಸ್ಟಾರ್ ಲಿಂಕ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಸೇವೆ ಸೆಡ್ಡು ಹೊಡೆಯಲಿದೆ ಎನ್ನಬಹುದಾಗಿದೆ.