ಭಾರತದ ಮಿಲಿಟರಿ ರಫ್ತಿಗೆ ಐತಿಹಾಸಿಕ ಕ್ಷಣಕ್ಕೆ ದಿನಗಣನೆ, ವಿಶ್ವದ ದೊಡ್ಡಣ್ಣನು ಕೂಡ ಭಾರತದ ಶಕ್ತಿಗೆ ಫಿದಾ, ನಡೆಯುತ್ತಿರುವುದಾದ್ರು ಏನು ಗೊತ್ತೇ??
ಭಾರತದ ಮಿಲಿಟರಿ ರಫ್ತಿಗೆ ಐತಿಹಾಸಿಕ ಕ್ಷಣಕ್ಕೆ ದಿನಗಣನೆ, ವಿಶ್ವದ ದೊಡ್ಡಣ್ಣನು ಕೂಡ ಭಾರತದ ಶಕ್ತಿಗೆ ಫಿದಾ, ನಡೆಯುತ್ತಿರುವುದಾದ್ರು ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಸ್ವತಂತ್ರ ಬಂದು ಇಷ್ಟು ವರ್ಷಗಳೂ ಕಳೆದರೂ ರಫ್ತಿಗಿಂತ ಆಮದನ್ನೇ ಜಾಸ್ತಿ ಮಾಡಿಕೊಳ್ಳುತ್ತದೆ. ಆ ಕಾರಣಕ್ಕೆ ಭಾರತ ಇಂದಿಗೂ ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿದೆ ಹೊರತು ಮುಂದುವರೆದಿಲ್ಲ ಎಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಯಾವಾಗ ಒಂದು ದೇಶದ ಆಮದಿನ ಪ್ರಮಾಣ ಕಡಿಮೆಯಾಗಿ, ರಫ್ತಿನ ಪ್ರಮಾಣ ಹೆಚ್ಚಾದರೇ, ಆ ದೇಶ ಜಗತ್ತಿನ ಅತ್ಯಂತ ಮುಂದುವರೆಯುತ್ತಿರುವ ದೇಶವಾಗುತ್ತದೆ. ಆಹಾರ ಪದಾರ್ಥಗಳಲ್ಲಿ ಸ್ವಾವಲಂಬಿಯಾಗಿದ್ದ ಭಾರತ , ಈಗ ಆತ್ಮ ನಿರ್ಭರ ಭಾರತ ಎಂಬ ನಿಯಮದಡಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಹ ರಫ್ತಿಗೆ ಮುಂದಾಗಿದೆ.
ಇಷ್ಟು ವರ್ಷಗಳ ಕಾಲ ಭಾರತ ರಕ್ಷಣಾ ವಲಯಕ್ಕೆ ಬೇಕಾದ ಯುದ್ದ ಸಾಮಗ್ರಿಗಳು, ಹೆಲಿಕಾಪ್ಟರ್ ಗಳು, ಮಿಗ್ ವಿಮಾನಗಳನ್ನ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಸ್ವದೇಶಿ ನಿರ್ಮಿತ ತೇಜಸ್ ವಿಮಾನ ಎಲ್ಲಾ ರಂಗದಲ್ಲಿಯೂ ಅತ್ಯುತ್ತಮ ಎಂಬ ಹೆಗ್ಗಳಿಕೆ ಹೊಂದಿದೆ. ಈಗ ತರಬೇತಿಗಾಗಿ ಮಲೇಷಿಯಾ ಹಾಗೂ ಅಮೇರಿಕ ದೇಶಗಳು ಸ್ವದೇಶಿ ನಿರ್ಮಿತ ತೇಜಸ್ ಲಘು ವಿಮಾನ ಖರೀದಿಗೆ ಮುಂದಾಗಿವೆ. ಈ ಸ್ವದೇಶಿ ಲಘು ವಿಮಾನವನ್ನ ಬೆಂಗಳೂರಿನ ಹೆಚ್.ಎ.ಎಲ್ ಸಂಸ್ಥೆ ಅಭಿವೃದ್ಧಿಪಡಿಸಿದೆ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಬಹಳಷ್ಟು ವರ್ಷಗಳ ಕಾಲ ರಕ್ಷಣಾ ವಲಯದಲ್ಲಿ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಒಳಗಾಗಿತ್ತು. ಹಾಗಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳು ತಾವು ಉತ್ಪಾದಿಸಿದ ರಕ್ಷಣಾ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಆಹ್ವಾನಿಸುತ್ತಿದ್ದವು. ಆದರೇ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಎಂಬ ಯೋಜನೆಗಳಡಿ ಕೇಂದ್ರ ಸರ್ಕಾರ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಶುರುವಾಗಿದೆ. ಮುಂದುವರೆದ ದೇಶಗಳಾದ ಅಮೇರಿಕ ಹಾಗೂ ಸಿಂಗಾಪುರದಂತಹ ರಾಷ್ಟ್ರಗಳು ದೇಶಿ ನಿರ್ಮಿತ ಲಘು ವಿಮಾನ ತೇಜಸ್ ಆಮದಿಗೆ ಮುಂದಾಗಿರುವುದು ಸಾಕ್ಷಿಯಾಗಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾದರೆ ಅದು ನಿಜಕ್ಕೂ ಪ್ರತಿಯೊಬ್ಬ ಭಾರತೀಯರಿಗೂ ಐತಿಹಾಸಿಕ ದಿನವಾಗಲಿದೆ.
2015 ರಿಂದ ಆರಂಭವಾದ ಈ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ 2020 ರಲ್ಲಿ 73 ತೇಜಸ್ 1 ಎ ಹಾಗೂ ಅದಕ್ಕೆ ಸಹಾಯಕವಾಗಿ 10 ತರಬೇತಿ ವಿಮಾನಗಳನ್ನ ಬರೋಬ್ಬರಿ 45 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದು ಭಾರತದ ರಕ್ಷಣಾ ವ್ಯವಸ್ಥೆಯ ಪಾಲಿಗೆ ಹೊಸ ಹುಟ್ಟು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಭಾರತಕ್ಕೆ ರಕ್ಷಣಾ ವ್ಯವಸ್ಥೆಯಲ್ಲಿ ಒಳ್ಳೆಯ ದಿನಗಳು ಬಂದಿದಾವೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾರಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.