ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪಡಿಕ್ಕಲ್ ಬದಲು ಈ ಕನ್ನಡಿಗನನ್ನ ಆರ್ಸಿಬಿಗೆ ನಾಯಕನನ್ನಾಗಿ ಮಾಡಿ ಎಂದ ಡೇಲ್ ಸ್ಟೇನ್ – ಆ ಕನ್ನಡಿಗ ಯಾರು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಐಪಿಎಲ್ ತಂಡ. ಹಲವಾರು ವರ್ಷಗಳಿಂದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಈ ಸೀಸನ್ ನಂತರ ನಾನು ನಾಯಕನಾಗಿ ಮುಂದುವರೆಯುವುದಿಲ್ಲ, ಬದಲಾಗಿ ಆರ್ಸಿಬಿ ತಂಡದಲ್ಲಿ ಆಟಗಾರನಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಆಗ ಆರ್ಸಿಬಿಯ ಮುಂದಿನ ನಾಯಕ ಯಾರು ಎಂಬ ಚರ್ಚೆ ಜೋರಾಗಿ ಕೇಳಿ ಬಂದಿತು. ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್, ಆಪತ್ಭಾಂದವ ಎಬಿ ಡಿ ವಿಲಿಯರ್ಸ್, ಕನ್ನಡಿಗ ದೇವದತ್ ಪಡಿಕ್ಕಲ್ ಹೆಸರು ಹೆಚ್ಚು ಕೇಳಿ ಬರುತ್ತಿತ್ತು. ಆದರೇ ಈಗ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮತ್ತು ಆರ್ಸಿಬಿ ತಂಡದಲ್ಲಿಯೂ ಸಹ ಆಡಿದ್ದ ವೇಗದ ಬೌಲರ್ ಡೇಲ್ ಸ್ಟೇಯ್ನ್, ಆರ್ಸಿಬಿ ತಂಡದ ಮುಂದಿನ ನಾಯಕ ಕನ್ನಡಿಗನೇ ಆಗಿರಬೇಕು, ಆದರೇ ಅದು ದೇವದತ್ ಪಡಿಕಲ್ ಆಗಿರಬಾರದು ಎಂದು ಹೇಳಿದ್ದಾರೆ.

ಹೌದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕನ್ನಡಿಗನೊಬ್ಬ ಆರ್ಸಿಬಿ ಯ ನಾಯಕನಾಗಿರಬೇಕು. ಆದರೇ ಅನನುಭವಿ ದೇವದತ್ ಪಡಿಕಲ್ ಬದಲು ಆರ್ಸಿಬಿ ತಂಡದ ಮಾಜಿ ಆಟಗಾರ ಕೆ.ಎಲ್.ರಾಹುಲ್ ರನ್ನ ಆರ್ಸಿಬಿ ತಂಡಕ್ಕೆ ನಾಯಕರನ್ನಾಗಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಕೆ.ಎಲ್.ರಾಹುಲ್ ಮುಂದಿನ ಸಾರ್ವತ್ರಿಕ ಹರಾಜಿನ ವೇಳೆಯಲ್ಲಿ ರಾಹುಲ್ ಭಾಗಶಃ ಹರಾಜಿಗೆ ಲಭ್ಯವಾಗಬಹುದು.

ಆ ಸಮಯದಲ್ಲಿ ಕೆ.ಎಲ್.ರಾಹುಲ್ ರನ್ನ ಆರ್ಸಿಬಿ ತಂಡ ಖರೀದಿಸಿದರೇ ನಾಯಕನ ಸ್ಥಾನಕ್ಕೆ ರಾಹುಲ್ ಉತ್ತಮ ಆಯ್ಕೆಯಾಗುತ್ತಾರೆ. ಆರ್ಸಿಬಿ ತಂಡ ರಾಹುಲ್ ರನ್ನ ನಾಯಕನನ್ನಾಗಿ ಮಾಡಿದರೇ, ಖಂಡಿತ ಆರ್ಸಿಬಿ ಮುಂದಿನ ಸೀಸನ್ ಗಳಲ್ಲಿ ಖಂಡಿತ ಯಶಸ್ವಿಯಾಗಲಾದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಸಾರ್ವತ್ರಿಕ ಹರಾಜಿನ ವೇಳೆ ಪ್ರತಿ ಫ್ರಾಂಚೈಸಿಗಳು ಮೂವರು ಆಟಗಾರರನ್ನ ಮಾತ್ರ ಉಳಿಸಿಕೊಳ್ಳಬಹುದು. ಹಾಗಾಗಿ ಆರ್ಸಿಬಿ ತಂಡ ವಿರಾಟ್ ಕೊಹ್ಲಿ, ಎಬಿ.ಡಿ.ವಿಲಿಯರ್ಸ್ ಮತ್ತು ದೇವದತ್ ಪಡಿಕ್ಕಲ್ ರವರನ್ನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಮುಂದಿನ ಸಾರ್ವತ್ರಿಕ ಐಪಿಎಲ್ ಹರಾಜಿನಲ್ಲಿ ಹಲವಾರು ಆಟಗಾರರ ಬೇರೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.