ಮೊದಲ ಅಗ್ನಿ ಪರೀಕ್ಷೆಯನ್ನೇನೋ ಗೆದ್ದ ಬೊಮ್ಮಾಯಿ, ಆದರೆ ಮುಂದಿನ ಸವಾಲುಗಳನ್ನು ಗೆಲ್ಲಲು ಸಾಧ್ಯವೇ?? ಯಾವ್ಯಾವು ಗೊತ್ತೇ??
ಮೊದಲ ಅಗ್ನಿ ಪರೀಕ್ಷೆಯನ್ನೇನೋ ಗೆದ್ದ ಬೊಮ್ಮಾಯಿ, ಆದರೆ ಮುಂದಿನ ಸವಾಲುಗಳನ್ನು ಗೆಲ್ಲಲು ಸಾಧ್ಯವೇ?? ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಅನೀರಿಕ್ಷಿತ ಎಂಬಂತೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರಿಂದ ಬಿಜೆಪಿ ಹೈಕಮಾಂಡ್ ರಾಜೀನಾಮೆ ಪಡೆಯಿತು. ಮುಂದೆ ಯಾರು ಸಿಎಂ ಎಂಬ ಚರ್ಚೆ ಜೋರಾದ ಹಿನ್ನಲೆಯಲ್ಲಿ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಸೈಡ್ ಮಾಡಿ ಮೊದಲು ಬಂದು ಮುಖ್ಯಮಂತ್ರಿಯಾದರು. ಬಹಳಷ್ಟು ಜನ ಇವರು ರಬ್ಬರ್ ಸ್ಟಾಂಪ್ ಸಿಎಂ ಎಂದೇ ಕರೆಯುತ್ತಿದ್ದರು. ಇವರು ಯಡಿಯೂರಪ್ಪನವರ ನೆರಳಿನಂತೆ ಕೆಲಸ ಮಾಡುತ್ತಾರೆ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಿಎಂ ಆಗಲಾರರು ಎಂದು ಹೇಳಿದ್ದರು. ಆದರೇ ತಿಂಗಳು ತುಂಬುವಲ್ಲಿ ತಮ್ಮ ಅನುಭವ, ಮಾತು, ಆಡಳಿತ ಶೈಲಿಯ ಮೂಲಕ ಬಸವರಾಜ ಬೊಮ್ಮಾಯಿ, ಸೋಶಿಯಲ್ ಮೀಡಿಯಾಗಳಲ್ಲಿ ಬಸಣ್ಣನಾಗಿ ಮಿಂಚಿದರು.
ಇನ್ನು ಮೊದಲ ಅಧಿವೇಶನದಲ್ಲಿಯೂ ಸಹ ಬಸಣ್ಣ ಸದನವನ್ನ ನಡೆಸಿದ ರೀತಿ ಸಹ ಮೆಚ್ಚುಗೆಗಳಿಸಿತು. ವಿರೋಧ ಪಕ್ಷದವರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು. ಅದರಲ್ಲೂ ಬೆಲೆ ಏರಿಕೆ ವಿಚಾರದಲ್ಲಿ ಆರೋಪಿಸಿದ್ದ ಸಿದ್ದರಾಮಯ್ಯನವರಿಗೆ ತಮ್ಮದೇ ಶೈಲಿಯ ಅಂಕಿ-ಸಂಖ್ಯೆಗಳ ಮೂಲಕ ಬಸಣ್ಣ ಉತ್ತರ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮೆಚ್ಚುಗೆ ಗಳಿಸಿತು. ಇನ್ನು ಬಹಳಷ್ಟು ವರ್ಷಗಳ ನಂತರ ಇದೇ ಮೊದಲ ಭಾರಿ , ವಿಪಕ್ಷಗಳು ಸದನ ಬಹಿಷ್ಕಾರ ಮಾಡಿ ಸದನದಿಂದ ಹೊರ ನಡೆಯಲಿಲ್ಲ. ಇದು ಸಹ ಬಸಣ್ಣನವರ ಚಾಕಚಕ್ಯತೆಗೆ ಸಾಕ್ಷಿ ಎಂಬಂತಿತ್ತು.
ಸದ್ಯ ಸದನವನ್ನ ಯಶಸ್ವಿಯಾಗಿ ಮುಗಿಸಿರುವ ಮುಖ್ಯಮಂತ್ರಿ ಬಸಣ್ಣರವರಿಗೆ ಮುಂದೆ ಭಾರಿ ಸವಾಲುಗಳಿವೆ. ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಲಿದೆ. ಇದರ ಜೊತೆ ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಸಹ ನಡೆಯಲಿವೆ. ಇದರ ಜೊತೆಜೊತೆಗೆ ಬಿಬಿಎಂಪಿ ಚುನಾವಣೆ 243 ವಾರ್ಡುಗಳಾಗಿ ಬೃಹದಾಕಾರವಾಗಿ ಬೆಳೆದಿದ್ದು ಆ ಚುನಾವಣೆ ಸಹ ಎದುರಾಗಲಿದೆ. ಈ ಮೂರು ಚುನಾವಣೆಗಳು ಸಹ ಸಾರ್ವತ್ರಿಕ ವಿಧಾನಸಭಾ ಚುನಾವಣಾ ದೃಷ್ಠಿಯಿಂದ ಮಹತ್ವದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಸವಾಲಿನಿಂದ ಕೂಡಿರುತ್ತದೆ. ಒಂದು ಕಡೆ ಯಡಿಯೂರಪ್ಪ ಮತ್ತೊಂದು ಕಡೆ ಸಂಘ ಪರಿವಾರ ಹಾಗೂ ಹೈಕಮಾಂಡ್, ಇವೆರೆಡನ್ನು ಸಮರ್ಥವಾಗಿ, ಕೊಂಚವೂ ಕುಂದು ಬಾರದಂತೆ ನಿಭಾಯಿಸಿಕೊಂಡು ಹೋಗುವ ಸವಾಲು ಬಸವರಾಜ ಬೊಮ್ಮಾಯಿರವರ ಮೇಲಿದೆ. ಅವರು ಆ ಸವಾಲನ್ನ ಯಶಸ್ವಿಯಾಗಿ ನಿಭಾಯಿಸುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.