ನಿಮ್ಮ ಕಣ್ಣುಗಳನ್ನು ನೋಡಿ ನಿಮ್ಮ ಆರೋಗ್ಯ ಹೇಗೆ ತಿಳಿಯಬಹುದು ಎಂಬುದನ್ನು ತಿಳಿಯಿರಿ.

ನಿಮ್ಮ ಕಣ್ಣುಗಳನ್ನು ನೋಡಿ ನಿಮ್ಮ ಆರೋಗ್ಯ ಹೇಗೆ ತಿಳಿಯಬಹುದು ಎಂಬುದನ್ನು ತಿಳಿಯಿರಿ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ವೈದ್ಯರು ಹೇಳುವ ಪ್ರಕಾರ ಪ್ರತಿ ತಿಂಗಳಿಗೊಮ್ಮೆ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಬೇಕು. ಆದರೆ ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಹಾಗೂ ಮಧ್ಯಮ ವರ್ಗದವರು ಹೆಚ್ಚಿರುವ ರಾಷ್ಟ್ರದಲ್ಲಿ ಪ್ರತಿ ತಿಂಗಳಿಗೆ ಆರೋಗ್ಯ ತಪಾಸಣೆ ಎಂದರೇ ಅದು ಅಸಾಧ್ಯವಾದ ವಿಚಾರ. ಭಾರತದಲ್ಲಿರುವ ಜನಸಂಖ್ಯೆಯನ್ನು ತಿಂಗಳಿಗೊಮ್ಮೆ ತಪಾಸಣೆ ಮಾಡಬೇಕು ಎಂದರೇ ಒಂದು ತಿಂಗಳ ಸಮಯ ಕೂಡ ಸಾಕಾಗುವುದಿಲ್ಲ. ಆದರೆ ಸ್ನೇಹಿತರೇ ನೀವು ಪ್ರತಿ ತಿಂಗಳು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೊಂಡು, ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಹಲವಾರು ಅಭ್ಯಾಸಗಳನ್ನು ಮುಂದುವರಿಸಿದರೇ ಖಂಡಿತ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ಆಯುರ್ವೇದ ಪಂಡಿತರು ಹಾಗೂ ಇತ್ತೀಚಿನ ದಿನಗಳಲ್ಲಿ ನಾವು ಕಂಡುಹಿಡಿದಿದ್ದೇವೆ ಎನ್ನುತ್ತಿರುವ ವೈದ್ಯರು ಕೂಡ ಒಪ್ಪಿಕೊಳ್ಳುತ್ತಾರೆ.

ಹೀಗಿರುವಾಗ ನಿಮ್ಮ ದೇಹದ ಆರೋಗ್ಯದ ಕುರಿತು ನಿಮ್ಮ ಕಣ್ಣುಗಳು ಸೂಚನೆ ನೀಡುತ್ತವೆ ಎಂಬ ವೈದ್ಯಶಾಸ್ತ್ರದಲ್ಲಿ ಮಾಹಿತಿ ಇದೆ. ಬನ್ನಿ ಈ ಕುರಿತು ಎಂದು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಮೊದಲಿಗೆ ಸ್ನೇಹಿತರೇ ನಿಮ್ಮ ಕಣ್ಣುಗಳು ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿದ್ದರೇ (ಕೊಬ್ಬು ಅಥವಾ ಗೀಜು), ಅಂದರೆ ಒಂದು ವೇಳೆ ನಿಮ್ಮ ಕಣ್ಣಿನ ರೆಟಿನಾ ದಲ್ಲಿ ಸಣ್ಣ ಹನಿಗಳಲ್ಲಿ ಹಳದಿ ಅಥವಾ ಹಸಿರು ಮಿಶ್ರಿತ ಗೀಜು ಹೊಂದಿದ್ದರೇ ಅಂತಹ ಜನರು ಟೈಪ್ 2 ಮಧುಮೇಹದಿಂದ ಬಳಲುವ ಸಾಧ್ಯತೆಗಳು ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ. ಒಂದು ವೇಳೆ ನಿಮ್ಮ ಕಣ್ಣುಗಳು ಆ ರೀತಿ ಕಂಡುಬಂದಲ್ಲಿ ದಯವಿಟ್ಟು ಕೂಡಲೇ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆಗಳನ್ನು ಪಾಲಿಸಿ. ಇದರಿಂದ ನೀವು ಡಯಾಬಿಟಿಸ್ ಬರುವ ಮುನ್ನವೇ ತಡೆಯಬಹುದು.

ಇನ್ನು ಎರಡನೇಯದಾಗಿ ನಿಮ್ಮ ಕಣ್ಣುಗಳು ಬಹಳ ಕೆಂಪಾಗಿದ್ದರೇ, ಅಂದರೇ ಸಾಮಾನ್ಯವಾಗಿ ನೀವು ತೇವಾಂಶವನ್ನು ಕಾಪಾಡಿಕೊಳ್ಳದೆ ಇದ್ದರೇ ಅಥವಾ ಕೊಬ್ಬರಿ ಎಣ್ಣೆ ಬಳಸದಿದ್ದರೇ ಈ ರೀತಿ ಕೆಂಪು ಆಗುವ ಸಾಧ್ಯತೆ ಇದೆ. ಆದರೆ ನೀವು ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಬಳಸಿದರೂ ಕೂಡ ನಿಮ್ಮ ಕಣ್ಣಿನ ಒಂದು ಭಾಗ ಬಿಳಿಯಾಗಿದ್ದು ಮತ್ತೊಂದು ಭಾಗ ಕೆಂಪಾಗಿದ್ದರೆ, ದಯವಿಟ್ಟು ವೈದ್ಯರ ಬಳಿ ಹೋಗಿ ಒಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ. ವೈದ್ಯರು ರೆಟಿನಾ ದಲ್ಲಿರುವ ಸಣ್ಣ ರಕ್ತಕಣಗಳನ್ನು ಪರೀಕ್ಷಿಸುತ್ತಾರೆ. ಈ ಸಮಸ್ಯೆಯು ಸಾಮಾನ್ಯವಾಗಿ ರ’ಕ್ತದ ಒತ್ತಡ ಹೊಂದಿರುವ ಜನರಲ್ಲಿ ಕಾಣಿಸಿಕೊಳ್ಳುತ್ತದೆ, ಇದು ಕ್ರಮೇಣ ಮುಂದುವರೆದರೆ ನಿಮಗೆ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ ಕಾರಣದಿಂದ ಒಂದು ವೇಳೆ ನಿಮ್ಮ ಕಣ್ಣುಗಳು ನಿಮ್ಮ ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಂಡಿದ್ದರೂ ಕೂಡ ಕೆಂಪಾದರೆ ದಯವಿಟ್ಟು ವೈದ್ಯರ ಬಳಿ ಹೋಗಿ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.

ಇನ್ನು ಕಣ್ಣುಗಳು ಹಳದಿ ಮತ್ತು ಹಸಿರು ಬಣ್ಣದಲ್ಲಿ ಕಾಣಿಸಿಕೊಂಡರೇ, ನಿಮಗೆ ಪಿತ್ತಜನಕಾಂಗದ ಸಮಸ್ಯೆ ಇರುವ ಸಾಧ್ಯತೆಗಳು ಹೆಚ್ಚು ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಕಣ್ಣಿನಲ್ಲಿ ಈ ರೀತಿಯ ಬದಲಾವಣೆ ಕಾಣಿಸಿಕೊಳ್ಳಲು ಯಕೃತ್ತಿನ ಕಾರ್ಯದಲ್ಲಿನ ವ್ಯತ್ಯಾಸವೇ ಕಾರಣ. ಆದ ಕಾರಣದಿಂದ ಒಂದು ವೇಳೆ ನಿಮ್ಮ ಕಣ್ಣುಗಳು ಈ ರೀತಿ ಕಾಣಿಸಿಕೊಂಡಲ್ಲಿ ದಯವಿಟ್ಟು ವೈದ್ಯರನ್ನು ಕೂಡಲೇ ಸಂಪರ್ಕಿಸಿ ಸಲಹೆಯನ್ನು ತೆಗೆದುಕೊಂಡು ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಆರೋಗ್ಯಯುತ ಜೀವನ ನಡೆಸಬಹುದು.