ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೀವು ನಿಂತು ಊಟ ಮಾಡುತ್ತೀರಾ? ಅಥವಾ ಮಲಗಿ ಊಟ ಮಾಡುತ್ತೀರಾ? ಹಾಗಿದ್ದರೇ ನೋಡಿ !

10

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ಕೆಲವು ವರ್ಷಗಳಲ್ಲಿ ಹೋಟೆಲ್ಗಳಲ್ಲಿ ನಿಂತು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಹೋಟೆಲ್ಗಳಲ್ಲಿ ದಿನೇದಿನೇ ಜನರು ಹೆಚ್ಚುತ್ತಿರುವ ಕಾರಣ ಹೋಟೆಲ್ ಮಾಲೀಕರು ಸ್ಥಳ ಉಳಿತಾಯ ಮಾಡುವುದಕ್ಕೆ ಹಾಗೂ ಕೂತು ತಿಂದರೇ ಹೆಚ್ಚು ಸಮಯ ಕಳೆಯುತ್ತಾರೆ ಎಂಬ ಕಾರಣಕ್ಕಾಗಿ ನಿಂತುಕೊಂಡು ಊಟ ಮಾಡುವ ವ್ಯವಸ್ಥೆ ಮಾಡಿರುತ್ತಾರೆ. ಇನ್ನು ಕೆಲವರು ಆಸನದ ವ್ಯವಸ್ಥೆಯಾಗಲಿ ಅಥವಾ ನಿಂತುಕೊಂಡು ತಿನ್ನುವ ವ್ಯವಸ್ಥೆ ಕೂಡ ಮಾಡಿರುವುದಿಲ್ಲ. ನೀವು ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ತಿಂದು ವಾಪಸು ಬರಬೇಕು. ಇನ್ನು ಪ್ರತಿಷ್ಠಿತ ರೆಸ್ಟೋರೆಂಟ್ಗಳಲ್ಲಿ ಕೂತು ತಿನ್ನುವ ವ್ಯವಸ್ಥೆ ಇರುತ್ತಾದಾದರೂ ಕೂರುವ ಜಾಗದಲ್ಲಿ ಎಸಿ ಇಟ್ಟು ಒಂದಕ್ಕೆ ನಾಲ್ಕು ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನು ನಮ್ಮ ಜನರೇನು ಕಡಿಮೆ ಇಲ್ಲ, ಊಟಕ್ಕೂ ಸಮಯವಿಲ್ಲದಂತಹ ಕೆಲಸಗಳನ್ನು ಮಾಡುತ್ತಾ ಕುಳಿತುಕೊಳ್ಳಲು ವ್ಯವಸ್ಥೆ ಇದ್ದರೂ ಕೂಡ ಫಾಸ್ಟ್ ಫುಡ್ ಅಂಗಡಿಗಳಿಗೆ ತೆರಳಿ ಕೆಲವೇ ನಿಮಿಷಗಳಲ್ಲಿ ಊಟ ಮುಗಿಸಿ ಕೆಲಸಕ್ಕೆ ವಾಪಸಾಗುತ್ತಾರೆ.

ಇನ್ನು ವೈದ್ಯಶಾಸ್ತ್ರದ ಪ್ರಕಾರ ನಾವು ಊಟ ಮಾಡುವ ವಿಧಾನವೂ ಕೂಡ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ. ಇಂದು ಯಾವ ರೀತಿ ಆಹಾರ ಸೇವನೆ ಮಾಡಬೇಕು, ಯಾವ ರೀತಿ ನಾವು ಆಹಾರ ಸೇವನೆ ಮಾಡಲೇಬಾರದು ಹಾಗೂ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಸ್ನೇಹಿತರೇ ಮೊದಲೇ ಹೇಳುತ್ತಿದ್ದೇವೆ ಕೆಲವೊಮ್ಮೆ ಬಾರಿ ನೀವು ಯಾವ ರೀತಿಯಲ್ಲಿ ಆಹಾರ ಸೇವಿಸಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ದೀರ್ಘಕಾಲದಲ್ಲಿ ಕ್ರಮೇಣ ಕೆಲವೊಂದು ರೀತಿಗಳಲ್ಲಿ ಊಟ ಸೇವನೆ ಮಾಡುತ್ತಿದ್ದರೆ ಖಂಡಿತ ಅದು ‌ಆರೋಗ್ಯಕ್ಕೆ ಉತ್ತಮವಲ್ಲ. ಬನ್ನಿ ಇಂದು ನಾವು ಕಾರಣಗಳ ಸಮೇತ ಹೇಗೆ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಸ್ನೇಹಿತರೇ ನೀವು ಸೇವನೆ ಮಾಡುವ ಭಂಗಿಯು ಖಂಡಿತ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ನೀವು ಆಹಾರ ಸೇವನೆ ಮಾಡಿದ ಕೆಲವೇ ಕೆಲವು ಸೆಕೆಂಡುಗಳಲ್ಲಿ ನಿಮ್ಮ ದೇಹದಲ್ಲಿ ಜೀರ್ಣ ಕ್ರಿಯೆ ಆರಂಭವಾಗುತ್ತದೆ. ಒಂದು ವೇಳೆ ನೀವು ಮಲಗಿಕೊಂಡು ತಿನ್ನುತ್ತಿದ್ದರೇ ಇದರಿಂದ ನಿಮ್ಮ ದೇಹಕ್ಕೆ ಯಾವುದೇ ಲಾಭವಿಲ್ಲ. ಇದು ಅಜೀರ್ಣತೆಗೆ ದಾರಿ ಮಾಡಿಕೊಡುತ್ತದೆ. ಅದರಲ್ಲಿಯೂ ಪ್ರಮುಖವಾಗಿ ಮಹಿಳೆಯರು ಮಲಗಿ ತಿನ್ನಬಾರದು ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಇನ್ನು ಕೆಲವರು ಮಲಗಿಕೊಂಡು ತಿಂದು ತದ ನಂತರ ಎದ್ದು ಕುಳಿತು ಕೊಳ್ಳುತ್ತಾರೆ, ಆದರೆ ಹೀಗೆ ಮಾಡುವುದರಿಂದ ಖಂಡಿತ ಯಾವುದೇ ಲಾಭವಿಲ್ಲ. ಒಂದು ವೇಳೆ ನಿಮಗೆ ಮಲಗಿಕೊಂಡು ತಿನ್ನಲೇಬೇಕು ಎನಿಸಿದರೇ ಆಹಾರ ಸೇವಿಸಿದ ನಂತರ ಕೆಲವು ಹೆಜ್ಜೆಗಳು ಓಡಾಡಿ.

ಇನ್ನು ಕೆಲವರು ನಾವು ಆಹಾರ ಸೇವನೆ ಮಾಡುವಾಗಲೇ ಅದನ್ನು ಕರಗಿಸುವ ಕೆಲಸ ಮಾಡುತ್ತೇವೆ ಎಂದು ಅಂದುಕೊಂಡು ನಿಂತುಕೊಂಡು ಊಟ ಮಾಡುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ, ಆದರೆ ಸ್ನೇಹಿತರೇ ಇದು ತೂಕ ಕಳೆದುಕೊಳ್ಳಲು ಅಥವಾ ಆಹಾರವನ್ನು ಜೀರ್ಣ ಮಾಡಿಕೊಳ್ಳಲ್ಲು ಆರೋಗ್ಯಕಾರಿ ವಿಧಾನವಲ್ಲ. ನಿಂತುಕೊಂಡು ನೀವು ಊಟ ಮಾಡಿದರೇ ನಿಮ್ಮ ಆಹಾರ ಸೇವನೆಯ ವೇಗ ಹೆಚ್ಚಾಗುವುದು ಹಾಗೂ ಸ್ವಲ್ಪ ಹೆಚ್ಚು ಆಹಾರ ನಿಮ್ಮ ಹೊಟ್ಟೆಗೆ ಸೇರುವುದು. ಇದರಿಂದ ನಿಮ್ಮ ದೇಹದ ತೂಕದ ವ್ಯತ್ಯಾಸದಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ನಿಮಗೆ ತೂಕ ಕಳೆದುಕೊಳ್ಳುವ ಆಸಕ್ತಿ ಇದ್ದರೇ ಊಟ ಮಾಡಿದ ಬಳಿಕ ಕೆಲವು ನಿಮಿಷಗಳ ಕಾಲ ನಡೆದಾಡಿ ಅದಕ್ಕಿಂತ ಅತ್ಯುತ್ತಮ ವಿಧಾನ ಮತ್ತೊಂದಿಲ್ಲ.

ಇನ್ನು ನಿಂತುಕೊಂಡು ತಿಂದರೇ ಆಮ್ಲೀಯತೆ, ಎದೆಯುರಿ ಅಂತಹ ಸಮಸ್ಯೆಗಳು ಕಾಣಿಸಬಹುದು. ಆದರೆ ಸ್ನೇಹಿತರೇ ನೀವು ನಮ್ಮ ಪೂರ್ವಜರ ಹಾಗೆ ನೆಲದಲ್ಲಿ ಕುಳಿತುಕೊಂಡು ಆರಾಮವಾಗಿ ಊಟ ಮಾಡಿದರೇ ನಿಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೌಷ್ಠಿಕಾಂಶಗಳನ್ನು ಜೀರ್ಣಕ್ರಿಯೆಯ ಸಮಯದಲ್ಲಿ ಹೀರಿಕೊಳ್ಳಲು ನಿಮ್ಮ ದೇಹಕ್ಕೆ ನೆರವಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿನ ಜೀರ್ಣಕ್ರಿಯೆ ಬಹಳ ಸರಾಗವಾಗಿ ನಡೆಯುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ.