ತುಪ್ಪ ಸೇವನೆ ಹಾಗೂ ತುಪ್ಪದ ದೀಪ ಹಚ್ಚುವ ವೈಜ್ಞಾನಿಕ ಕಾರಣ ಬಹಿರಂಗ ! ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ??

ತುಪ್ಪ ಸೇವನೆ ಹಾಗೂ ತುಪ್ಪದ ದೀಪ ಹಚ್ಚುವ ವೈಜ್ಞಾನಿಕ ಕಾರಣ ಬಹಿರಂಗ ! ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿರುವ ಹಲವಾರು ಧಾರ್ಮಿಕ ಆಚಾರ ವಿಚಾರ ಹಾಗೂ ಪದ್ಧತಿಗಳನ್ನು ಆಧುನಿಕ ವಿಜ್ಞಾನಿಗಳು ಸೇರಿದಂತೆ ಇನ್ನೂ ಕೆಲವು ಬುದ್ಧಿಜೀವಿಗಳು ಇದೆಲ್ಲಾ ಕೇವಲ ಒಂದು ಅರ್ಥವಿಲ್ಲದ ಸಂಪ್ರದಾಯವಷ್ಟೇ, ಆಗಿನ ಕಾಲದಲ್ಲಿ ಅನಾಗರಿಕರು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದರು ಕೇವಲ ಮೂ’ಢ ನಂಬಿಕೆಯಿಂದ ಅದೇ ಪದ್ಧತಿಯನ್ನು ಇಂದಿಗೂ ಕೂಡ ಜನರು ಅನುಸರಿಸುತ್ತಿದ್ದಾರೆ ಎಂದು ಮನಬಂದಂತೆ ಹೇಳಿಕೆ ನೀಡುತ್ತಿದ್ದರು. ಆದರೆ ಈ ರೀತಿಯ ಧಾರ್ಮಿಕ ಆಚಾರ ವಿಚಾರಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಇಂದಿನ ಆಧುನಿಕ ವಿಜ್ಞಾನಿಗಳು ತನಿಖೆ ಮಾಡಿ ನೋಡಿದಲ್ಲಿ, ಅದರಲ್ಲಿರುವ ಎಷ್ಟು ಲಾಭಗಳು ಹೊರಬೀಳುತ್ತಿವೆ. ಇದೀಗ ದೇವರಿಗೆ ತುಪ್ಪದ ದೀಪ ಹಚ್ಚುವ ಹಿಂದಿರುವ ಕಾರಣವನ್ನು ವಿಜ್ಞಾನಿಗಳು ಅರಿತುಕೊಳ್ಳಲು ಪ್ರಯತ್ನಿಸಿದಾಗ ಕೆಲವೊಂದು ಸ್ವಾರಸ್ಯಕರ ಮಾಹಿತಿಗಳು ಕೇಳಿಬಂದಿವೆ. ನಮ್ಮ ಪೂರ್ವಜರು ಆರೋಗ್ಯಕ್ಕಾಗಿ ಹಲವಾರು ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಇವೆಲ್ಲವನ್ನು ಅಂದಿನ ಕಾಲದಲ್ಲಿಯೇ ಯಾವುದೇ ಆಧುನಿಕ ಉಪಕರಣಗಳು ಇಲ್ಲದೆ ಅವರು ಕಂಡುಕೊಂಡಿದ್ದರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇವರಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೇವಲ ಮನೆಗಳಲ್ಲಷ್ಟೇ ಅಲ್ಲದೇ ದೇವಸ್ಥಾನಗಳಲ್ಲಿಯೂ ಕೂಡ ತುಪ್ಪದ ದೀಪ ಹಚ್ಚಿ ತುಪ್ಪದಿಂದ ಆರತಿ ಬೆಳಗಲಾಗುತ್ತದೆ. ಅಷ್ಟೇ ಯಾಕೆ ಯಾವುದೇ ಹೋಮ ಹವನಗಳಲ್ಲಿ ತುಪ್ಪವನ್ನು ಅಗ್ನಿಗೆ ಅರ್ಪಿಸಿ ಹೋಮ-ಹವನಗಳನ್ನು ನೆರವೇರಿಸಲಾಗುತ್ತದೆ. ಇದನ್ನು ಕಂಡ ಕೆಲವು ಜನರು ಇವೆಲ್ಲಾ ಕೇವಲ ಮೂ’ಢ ನಂಬಿಕೆ ಇವುಗಳಿಂದ ಯಾವುದೇ ಲಾಭವಿಲ್ಲ ಎಂದಿದ್ದರು. ಆದರೆ ಸ್ನೇಹಿತರೇ ಬನ್ನಿ ವೈಜ್ಞಾನಿಕ ವರದಿಯಲ್ಲಿ ಏನು ಸಾಬೀತಾಗಿದೆ ಎಂಬುದು ನಿಮಗೆ ಇಂದು ನಾವು ತಿಳಿಸುತ್ತೇವೆ. ಅಷ್ಟೇ ಅಲ್ಲದೇ ತುಪ್ಪವನ್ನು ನೀವು ಸೇವಿಸಿದರೇ ಯಾವೆಲ್ಲ ಆರೋಗ್ಯದ ಲಾಭಗಳು ಸಿಗುತ್ತವೆ. ಇನ್ನು ತುಪ್ಪದ ದೀಪ ಹಚ್ಚುವ ಕಾರಣ ಹಾಗೂ ಅದು ನಿಮ್ಮ ದೇಹದ ಆರೋಗ್ಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ತುಪ್ಪ ಸೇವಿಸಿದರೇ ಯಾವ ರೀತಿಯ ಆರೋಗ್ಯದ ಲಾಭಗಳು ಉಂಟಾಗುತ್ತವೆ ಎಂಬುದರ ಬಗ್ಗೆ ಮಾತನಾಡುವುದಾದರೇ ತುಪ್ಪವು ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ತುಪ್ಪದಿಂದ ನಿಮ್ಮ ಆರೋಗ್ಯ ವರ್ಧನೆಯಾಗಿ ಆಯಸ್ಸು ವೃದ್ದಿಯಾಗುತ್ತದೆ. ತುಪ್ಪವು ಮಧುರ ರಸ, ಸ್ನಿಗ್ಧ ಸೇರಿದಂತೆ ಇನ್ನೂ ಹಲವಾರು ವಿವಿಧ ಗುಣಗಳನ್ನು ತನ್ನಲ್ಲಿ ಹೊಂದಿದ್ದು ನಿಮ್ಮ ದೇಹದಲ್ಲಿನ ವಾತ ಹಾಗೂ ಪಿತ್ತದೋಷ ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇನ್ನು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ತುಪ್ಪ, ಚರ್ಮ ಹಾಗೂ ಕಣ್ಣಿಗೆ ಹಿತಕರ ಎಂಬುದು ತಿಳಿದುಬಂದಿದೆ. ಇನ್ನು ತುಪ್ಪವನ್ನು ನೀವು ಕ್ರಮೇಣ ಸೇವನೆ ಮಾಡುವುದರಿಂದ ನಿಮ್ಮ ಸ್ಮರಣ ಶಕ್ತಿ ಸೇರಿದಂತೆ ಬುದ್ಧಿಯ ಅಷ್ಟಾಂಗ ಗುಣಗಳು ಹೆಚ್ಚಾಗುತ್ತವೆ. ಇಷ್ಟೇ ಅಲ್ಲಾ ತುಪ್ಪವನ್ನು ಸೇವಿಸುವ ಕಾರಣ ನಿಮ್ಮ ಮನದಲ್ಲಿ ಕಂಡುಬರುವ ಕೆಲವೊಂದು ಇಲ್ಲಸಲ್ಲದ ವಿಚಾರಗಳನ್ನು ತೆಗೆದುಹಾಕಿ ನಿಮ್ಮನ್ನು ಶಾಂತಿಯತ್ತ ಕರೆದೊಯ್ಯುತ್ತದೆ. ಇಷ್ಟೆಲ್ಲಾ ಆರೋಗ್ಯದ ಗುಣಗಳನ್ನು ಹೊಂದಿದ್ದ ಕಾರಣ ನಮ್ಮ ಪೂರ್ವಜರು ತುಪ್ಪವನ್ನು ತಮ್ಮ ಅಡುಗೆ ಮನೆಯಲ್ಲಿ ಪ್ರಮುಖ ಪದಾರ್ಥವಾಗಿ ಬಳಸುತ್ತಿದ್ದರು.

ಇನ್ನು ದೇವರಿಗೆ ತುಪ್ಪದ ದೀಪ ಹಚ್ಚಿ ಹೋಮ ಹವನಗಳಲ್ಲಿ ತುಪ್ಪ ಸುರಿಯುವ ಪದ್ಧತಿ ಹಿಂದೆಯೂ ಕೂಡ ಒಂದು ವೈಜ್ಞಾನಿಕ ಕಾರಣವಿದೆ. ಅವು ಏನೆಂದರೆ ತುಪ್ಪದ ದೀಪ ನಿಮ್ಮ ಮನೆಯಲ್ಲಿ ಉರಿಯುತ್ತಿರುವ ಸಂದರ್ಭದಲ್ಲಿ ಅದರಿಂದ ಹೊರಬರುವ ಸುವಾಸನೆ ನಿಮ್ಮ ಮನೆಯ ವಾತಾವರಣದಲ್ಲಿನ ಕ್ರಿಮಿಕೀಟಗಳನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲದೆ ಆ ತುಪ್ಪದ ವಾಸನೆಯನ್ನು ನೀವು ಉಸಿರಾಟದ ಮೂಲಕ ತೆಗೆದುಕೊಂಡರೇ ತುಪ್ಪ ದಲ್ಲಿರುವ ಮೇದೋವರ್ಧಕ ಎಂಬ ಗುಣದ ಪ್ರಭಾವದಿಂದ ನಿಮ್ಮ ಮಿದುಳಿನಲ್ಲಿ ಹೊಸ ಚೈತನ್ಯ ಉಂಟಾಗಿ, ನಿಮ್ಮ ಮೆದುಳಿನ ಗ್ರಹಣ, ಧಾರಣ ಹಾಗೂ ಸ್ಮರಣ ಪ್ರಸಾದನ ಶಕ್ತಿಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಸಾಮಾನ್ಯ ಪದಗಳಲ್ಲಿ ಹೇಳಬೇಕೆಂದರೆ ನಿಮ್ಮಲ್ಲಿರುವ ಜ್ಞಾಪಕ ಶಕ್ತಿಗೆ ಹಾಗೂ ಮೆದುಳಿಗೆ ಸಂಬಂಧಪಟ್ಟ ಕೆಲವು ಶಕ್ತಿಗಳನ್ನು ಇದು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ವಾತಾವರಣದಿಂದ ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ದೂರವಾಗಿ ನಿಮ್ಮಲ್ಲಿ ಶಾಂತಿ ನೆಲೆಸುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಚಂಚಲತೆ ದೂರವಾಗುತ್ತದೆ.