ಕನ್ನಡ ಚಿತ್ರರಂಗದ ಕುರಿತು ಈ ವಿಚಾರದಲ್ಲಿ ಅಪ್ಪಾಜಿ ರವರಿಗೆ ಬಹಳ ಬೇಸರವಿತ್ತು ! ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡಿಗರಿಗೆ ಡಾ. ರಾಜಕುಮಾರ್ ಎಂಬ ಹೆಸರು ಕೇಳಿದ ತಕ್ಷಣ ಅವರ ನಟನೆ ನೆನಪಾಗಿ ರೋಮಾಂಚನವಾಗುತ್ತದೆ. ಕನ್ನಡಿಗರು ಡಾಕ್ಟರ್ ರಾಜಕುಮಾರ್ ಎಂದು ಸಾಮಾನ್ಯವಾಗಿ ಕರೆಯುವುದಿಲ್ಲ ಬದಲಾಗಿ ಅಪ್ಪಾಜಿ ಅಥವಾ ಅಣ್ಣಾವ್ರು ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರು ಅಭಿನಯಿಸುತ್ತಿದ್ದ ಸಿನಿಮಾಗಳು ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ, ಬದಲಾಗಿ ಪ್ರತಿಯೊಂದು ಸಿನಿಮಾದಲ್ಲಿಯೂ ಒಂದೊಂದು ಸಾಮಾಜಿಕ ಸಂದೇಶವನ್ನು ಹೊತ್ತು ತರುತ್ತಿದ್ದರು. ಸಾಮಾನ್ಯವಾಗಿ ಡಾಕ್ಟರ್ ರಾಜಕುಮಾರ್ ರವರಿಗೆ ನಿರ್ದೇಶಕರು ಕಥೆಯನ್ನು ಹೇಳುವಾಗ ಆ ಕಥೆಯಲ್ಲಿ ಒಂದು ಉತ್ತಮ ಸಾಮಾಜಿಕ ಸಂದೇಶ ಇದೆ ಎಂದ ತಕ್ಷಣ ಡಾಕ್ಟರ್ ರಾಜಕುಮಾರ್ ಅವರು ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಿದ್ದರು. ಇನ್ನು ಸಿನಿಮಾ ಒಪ್ಪಿಕೊಂಡ ತಕ್ಷಣ ಇವರ ಕೆಲಸ ಮುಗಿಯುತ್ತಿರಲಿಲ್ಲ.

ಒಬ್ಬರು ಅದ್ಭುತ ನಟನಾಗಿದ್ದರೂ ಕೂಡ ಚಿತ್ರದಲ್ಲಿರುವ ಪಾತ್ರದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಅದಕ್ಕೆ ತಕ್ಕಂತೆ ತಮ್ಮ ಜೀವನವನ್ನು ಅಳವಡಿಸಿಕೊಂಡು ಪಾತ್ರಕ್ಕೆ ಜೀವ ತುಂಬಿ ಅದ್ಭುತ ನಟನೆ ಮಾಡುತ್ತಿದ್ದರು. ಅಸಲಿಗೆ ಅದು ನಟನೆಗೆ ಎಂದು ಯಾರಿಗೂ ಅನಿಸುತ್ತಿರಲಿಲ್ಲ, ಇನ್ನು ಇವರು ನಟಿಸಿದ ಎಲ್ಲಾ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಅಣ್ಣಾವ್ರ ಸಿನಿಮಾ ಎಂದರೇ ಕೋಟ್ಯಾಂತರ ಜನರು ತುದಿಗಾಲಲ್ಲಿ ಕಾದು ನಿಂತಿರುತ್ತಿದ್ದರು. ಇಷ್ಟೆಲ್ಲಾ ಅಭಿಮಾನಿಗಳು ಹಾಗೂ ಅತ್ಯದ್ಭುತ ಕಲೆ ಇದ್ದರೂ ಕೂಡ ಡಾಕ್ಟರ್ ರಾಜಕುಮಾರ್ ಅವರು ತಮ್ಮ ಸರಳ ಜೀವನದಲ್ಲಿ ಸರಳ ವ್ಯಕ್ತಿತ್ವ ವನ್ನು ಅನುಸರಿಸುವ ಮೂಲಕ ಎಲ್ಲರಿಗೂ ಒಬ್ಬ ಮಾದರಿಯ ವ್ಯಕ್ತಿಯಾಗಿದ್ದರು.

ಇಷ್ಟೆಲ್ಲಾ ಸಾಧನೆ ಮಾಡಿ ಯಶಸ್ಸಿನ ಉತ್ತುಂಗದಲ್ಲಿ ಇದ್ದ ಡಾಕ್ಟರ್ ರಾಜಕುಮಾರ್ ರವರ ೯೦ ರ ದಶಕದಲ್ಲಿಯೇ ಕನ್ನಡ ಚಿತ್ರರಂಗ ಸಾಗುತ್ತಿರುವ ದಿಕ್ಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಹೌದು ಸ್ನೇಹಿತರೇ ಈ ಮಾತನ್ನು ಡಾಕ್ಟರ್ ರಾಜಕುಮಾರ್ ಅವರು ಹೇಳಿದ್ದು ಸುಮಾರು ಮೂರು ದಶಕಗಳ ಹಿಂದೆ ನಡೆದ ಒಂದು ಸಂದರ್ಶನದಲ್ಲಿ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಮುಂದಿನ ಭವಿಷ್ಯದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ತಾವು ಒಂದೆಡೆ ಹಲವಾರು ಸಾಮಾಜಿಕ ಸಂದೇಶಗಳನ್ನು ಹೊತ್ತು ತರುತ್ತಿರುವ ಸಂದರ್ಭದಲ್ಲಿ, 90ರ ದಶಕದಲ್ಲಿ ಕೆಲವು ಚಿತ್ರಗಳಲ್ಲಿ ಹಿಂ’ಸೆ – ಕ್ರೌ’ರ್ಯ ವಿಜೃಂಭಿಸುವ ಚಿತ್ರಗಳು ಹಾಗೂ ಚಿತ್ರಗಳಲ್ಲಿ ಹೆ’ಣ್ಣನ್ನು ತೋರಿಸುತ್ತಿದ್ದ ರೀತಿ ಡಾಕ್ಟರ್ ರಾಜಕುಮಾರ್ ರವರಿಗೆ ಇಷ್ಟವಾಗಿರಲಿಲ್ಲ. ಇದನ್ನು ಕಂಡ ಡಾಕ್ಟರ್ ರಾಜಕುಮಾರ್ ರವರು ಇಂತಹ ಚಿತ್ರಗಳು ನಮಗೆ ಬೇಕೆ ಎಂದು ಪ್ರಶ್ನೆ ಮಾಡಿದ್ದರು.

ಇನ್ನು ಇದೇ ಸಂದರ್ಶನದಲ್ಲಿ ಮಾತನಾಡಿದ ಡಾಕ್ಟರ್ ರಾಜಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದ ಆರಂಭದ ಕಾಲ ಹೇಗಿತ್ತು ಗೊತ್ತಾ ಅದು ಬಹಳ ಸುಂದರವಾಗಿತ್ತು, ಅದನ್ನು ನೆನಪಿಸಿಕೊಂಡರೇ ನನಗೆ ಬಹಳ ಮಧುರವಾದ ಅನುಭವವಾಗುತ್ತದೆ. ಚಿತ್ರರಂಗದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಬಹಳ ಕ’ಷ್ಟದ ದಿನಗಳು ಕಾಣಿಸಿದವು. ನಮಗೂ ಕೂಡ ಚಿತ್ರದಲ್ಲಿ ನಟನೆ ಮಾಡಬೇಕು ಎಂದರೆ ಅದು ಸುಲಭವಾಗಿರಲಿಲ್ಲ. ಆದರೆ ನಾವು ಎಲ್ಲಾ ಕ’ಷ್ಟಗಳ ನಡುವೆಯೂ ಚಿತ್ರರಂಗದಲ್ಲಿ ಅತ್ಯುತ್ತಮ ಚಿತ್ರಗಳನ್ನು ಮಾಡಿದ್ದೇವೆ, ಇದೀಗ ಎಲ್ಲರಿಗೂ ಬಹಳ ಅನುಕೂಲಗಳಿವೆ. ಆಧುನಿಕ ಯಂತ್ರೋಪಕರಣಗಳು ಹೇರಳವಾಗಿ ಸಿಗುತ್ತವೆ, ಆದರೆ ನಾವು ನಮ್ಮ ಮೆದುಳನ್ನು ಬಳಸಿ ಚಿತ್ರ ತಯಾರು ಮಾಡುವ ವಿಚಾರದಲ್ಲಿ ಹಿಂದೆ ಉಳಿದಿದ್ದೇವೆ ಎಂದು ಕನ್ನಡ ಚಿತ್ರರಂಗದ ಕುರಿತು ಬೇ’ಸರ ವ್ಯಕ್ತಪಡಿಸಿದ್ದರು.

Post Author: Ravi Yadav