ತೆರೆ ಮೇಲೆ ಮೋದಿ ಜೀವನ: ಪ್ರಧಾನಿ ಪಾತ್ರ ಮಾಡಲಿರುವ ನಾಯಕ ಯಾರು ಗೊತ್ತಾ??

0

ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲಿ ನೋಡಿದರೂ ಗಣ್ಯರು ಹಾಗೂ ರಾಜಕೀಯ ನಾಯಕರ ನಿಜವಾದ ಜೀವನ ಘಟನೆಗಳನ್ನು ಆಧರಿಸಿದ ಚಿತ್ರಗಳು ನಿರ್ಮಾಣವಾಗುತ್ತಿವೆ. ಈಗಾಗಲೇ ಹಲವಾರು ಕ್ರೀಡಾಪಟುಗಳ, ರಾಜಕೀಯ ನಾಯಕರ ಸಿನಿಮಾಗಳು ನಿರ್ಮಾಣವಾಗಿದ್ದು ಈಗ ಈ ಎಲ್ಲಾ ಸಿನಿಮಾಗಳನ್ನು ಮೀರಿಸುವಂತಹ ಒಂದು ಕಥೆ ನಿರ್ಮಾಣವಾಗಲಿದೆ.

ಅದುವೇ ಭಾರತದ ಪ್ರಧಾನ ಸೇವಕರಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿರುವ ನರೇಂದ್ರ ಮೋದಿ ರವರ ಜೀವನ ಆಧಾರಿತ ಚಿತ್ರ. ಜನವರಿ ಮೊದಲ ವಾರದಲ್ಲಿ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಮುಂದಿನ ಕೆಲ ತಿಂಗಳುಗಳ ಕಾಲ ಗುಜರಾತ್, ದಿಲ್ಲಿ ಹಿಮಾಚಲ ಪ್ರದೇಶ ಹಾಗೂ ಉತ್ತರಕಾಂಡ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮೋದಿ ರವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಆಧರಿಸಿ ಚಿತ್ರವನ್ನು ನಿರ್ದೇಶನ ಮಾಡಲಿರುವುದು ನಿರ್ದೇಶಕ ಕುಮಾರ್.

ಈ ಮೊದಲು ಮೇರಿ ಕೋಮ್ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿರುವ ಇವರು ಸಂಜಯ್ ದತ್ ರವರ ಭೂಮಿ ಚಿತ್ರವನ್ನು ಸಹ ನಿರ್ಧರಿಸಿದ್ದರು. ಇನ್ನು ಮೋದಿ ರವರ ಪಾತ್ರಕ್ಕೆ ಬಾಲಿವುಡ್ ನ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾಗಿರುವ ವಿವೇಕ್ ಒಬಿರಾಯ್ ನಟಿಸಲಿದ್ದಾರೆ.

ಓಂಕಾರ, ಕಂಪನಿ ಮತ್ತು ಸಾಧ್ಯ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿರುವ ವಿವೇಕ್ ಒಬಿರಾಯ್ ರವರು ನರೇಂದ್ರ ಮೋದಿರವರ ಪಾತ್ರದಲ್ಲಿ ನಟಿಸಲಿದ್ದು ಅಭಿಮಾನಿಗಳು ಕಾತರದಿಂದ ಮೋದಿ ರವರ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.