ಆಸ್ಟ್ರೇಲಿಯಾ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಪಂತ್
ಆಸ್ಟ್ರೇಲಿಯಾ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಪಂತ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ನಡೆಯುತ್ತಿದೆ ಎಂದರೆ ಪಂದ್ಯದ ವೇಳೆ ಯಲ್ಲಿ ಜನಾಂಗೀಯ ನಿಂದನೆ ಗಳು ಹೆಚ್ಚು. ಹಲವು ಬಾರಿ ಈಗಾಗಲೇ ಆಟಗಾರರ ನಡುವೆ ಸ್ಲೆಡ್ಜಿಂಗ್ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ ಯಾರೂ ಊಹಿಸದ ರೀತಿಯಲ್ಲಿ ಆಸ್ಟ್ರೇಲಿಯ ನಾಯಕ ಅವರು ಹಲವಾರು ಭಾರತೀಯ ಆಟಗಾರರಿಗೆ ಇನ್ನಿಲ್ಲದ ರೀತಿಯಲ್ಲಿ ಸ್ಲೆಡ್ಜಿಂಗ್ ಮಾಡುತ್ತಿದ್ದಾರೆ.
ಭಾರತೀಯ ಆಟಗಾರರು ಏನು ಕಡಿಮೆ ಇಲ್ಲ ಪ್ರತಿ ಬಾರಿಯೂ ಆಸ್ಟ್ರೇಲಿಯ ನಾಯಕನಿಗೆ ಮುಟ್ಟಿ ನೋಡಿ ಕೊಳ್ಳುವಂತಹ ತಿರುಗೇಟು ನೀಡುತ್ತಾ ಬಂದಿದ್ದಾರೆ. ಮೊನ್ನೆಯಷ್ಟೇ ರೋಹಿತ್ ಶರ್ಮ ರವರನ್ನು ಕೆಣಕಿದ್ದ ಫೈನ್ ರವರಿಗೆ ರೋಹಿತ್ ಶರ್ಮಾ ರವರು ನೀನು ಸೆಂಚುರಿ ಬಾರಿಸಿ ನಿನ್ನನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಉತ್ತರ ನೀಡಿದ್ದರು.
ಆದರೆ ಇಷ್ಟಕ್ಕೇ ಸುಮ್ಮನಾಗದ ಆಸ್ಟ್ರೇಲಿಯ ಕ್ಯಾಪ್ಟನ್ ರಿಷಬ್ ಪಂತ್ ರವರಿಗೆ ಹೇಗಿದ್ದರೂ ಟಿ20 ಸರಣಿಗೆ ನಿನ್ನನ್ನು ಕೈ ಬಿಡಲಾಗಿದೆ, ನೀನು ಯಾಕೆ ಆಸ್ಟ್ರೇಲಿಯ ಬಿಗ್ ಬ್ಯಾಷ್ ಲೀಗ್ ಆಡಬಾರದು. ಅಷ್ಟೇ ಅಲ್ಲದೆ ನಿನಗೆ ಒಳ್ಳೆಯ ಕೆಲಸ ನೀಡುತ್ತೇವೆ ನಿನಗೆ ಮಕ್ಕಳನ್ನು ನೋಡಿಕೊಳ್ಳುವುದು ಬರುವ ಹಾಗಿದ್ದರೆ ನನಗೆ ಹೇಳು ನಾನು ನನ್ನ ಹೆಂಡತಿ ಸಿನಿಮಾ ಗೆ ಹೋಗಬೇಕು,ಆಗ ನೀನು ನನ್ನ ಮಕ್ಕಳನ್ನು ನೋಡಿಕೋ ಎಂದು ಕಾಲೆಳೆದಿದ್ದಾರೆ.
ಆದರೆ ಇದಕ್ಕೆ ಉತ್ತರ ನೀಡಿರುವ ರಿಷಬ್ ಪಂಥ್ ರವರು ರವರು ಆಸ್ಟ್ರೇಲಿಯಾದ ನಾಯಕ ಬ್ಯಾಟಿಂಗ್ ಇಳಿದಾಗ ಮಾಯಂಕ್ ಅಗರ್ವಾಲ್ ಅವರನ್ನು ಮಾತನಾಡಿಸುತ್ತಾ ಹೊಸ ಅತಿಥಿ ಬಂದಿದ್ದಾರೆ. ಹಾಗೂ ನೀನು ಎಂದಾದರೂ ತಾತ್ಕಾಲಿಕ ಕ್ಯಾಪ್ಟನ್ ನೋಡಿದ್ದೀಯಾ ಎಂದು ಪೈನ್ ರವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಮಾತಿಗೆ ಕೆಂಡಾಮಂಡಲವಾದ ನಾಯಕ ಬಿರುಸಿನ ಆಟಕ್ಕೆ ಮುಂದಾಗಿ ಕೆಲವೇ ಕೆಲವು ಬಾಲು ಗಳ ನಂತರ ಔಟಾಗಿದ್ದಾರೆ.
ಹೌದು ಆಸ್ಟ್ರೇಲಿಯಾದ ಮಟ್ಟಿಗೆ ಪೈನ್ ರವರು ತಾತ್ಕಾಲಿಕ ಕ್ಯಾಪ್ಟನ್ . ಯಾಕೆಂದರೆ 1 ವರ್ಷದ ನಿಷೇಧಕ್ಕೊಳಗಾಗಿರುವ ಸ್ಮಿತ್ ರವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ವಾಪಸಾಗುತ್ತಾರೆ, ತದನಂತರ ಪೈನ್ ರವರು ಬೇರೆ ದಾರಿಯಿಲ್ಲದೆ ಅವರಿಗೆ ತಮ್ಮ ಕ್ಯಾಪ್ಟನ್ಸಿ ಯನ್ನು ಬಿಟ್ಟು ಕೊಡಬೇಕಾಗುತ್ತದೆ.