ಇನ್ನೂ ಕರ್ನಾಟಕ ಬಿಜೆಪಿ ಮಯ, ಜನಾರ್ದನ ರೆಡ್ಡಿಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ಹೈಕಮಾಂಡ್

ಇನ್ನೂ ಕರ್ನಾಟಕ ಬಿಜೆಪಿ ಮಯ, ಜನಾರ್ದನ ರೆಡ್ಡಿಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ಹೈಕಮಾಂಡ್

0

ಬಳ್ಳಾರಿಯ ಜನಾರ್ದನ ರೆಡ್ಡಿ ರವರ ತಾಕತ್ತು ಏನೆಂಬುದು ಪ್ರತಿಯೊಬ್ಬ ಕರ್ನಾಟಕ ರಾಜಕೀಯ ನಾಯಕರಿಗೆ ತಿಳಿದಿದೆ. ಕಳೆದ ಬಾರಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರದ ಗದ್ದುಗೆ ಏರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ದನ ರೆಡ್ಡಿ ರವರನ್ನು ಬಿಜೆಪಿ ಪಕ್ಷವು ದೂರವಿಟ್ಟಿತ್ತು‌. ಕೆಲವು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡಿದ್ದ ಜನಾರ್ಧನರೆಡ್ಡಿ ರವರನ್ನು ಬಿಜೆಪಿ ಪಕ್ಷವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ತಪ್ಪು ಮಾಡಿದ್ದರೆ ಶಿಕ್ಷೆಗೆ ಒಳಗಾಗಿ ಎಂದು ಯಾವುದೇ ಸಹಾಯಕ್ಕೆ ಬಂದಿರಲಿಲ್ಲ.

[do_widget id=et_ads-2]

ಒಂದು ವೇಳೆ ಕಳೆದ ವಿಧಾನಸಭಾ ಚುನಾವಣ ಫಲಿತಾಂಶದ ಸಮಯದಲ್ಲಿ ಜನಾರ್ದನ ರೆಡ್ಡಿ ರವರು ಬಿಜೆಪಿ ಪಕ್ಷದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಏರುತ್ತಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ‌. ಆದರೆ ಬಿಜೆಪಿ ಹೈಕಮಾಂಡ್ ಜನಾರ್ದನ ರೆಡ್ಡಿ ರವರಿಂದ ದೂರವಿರಲು ಎಲ್ಲರಿಗೂ ವಾರ್ನಿಂಗ್ ಮಾಡಿತ್ತು.

[do_widget id=et_ads-3]

ಇದೇ ಕಾರಣಕ್ಕಾಗಿಯೇ ಏನೋ ಈ ಬಾರಿ ಬಳ್ಳಾರಿಯಲ್ಲಿ ಬಿಜೆಪಿ ಪಕ್ಷವು ಸೋಲುಂಡಿತ್ತು. ಚುನಾವಣೆ ನಂತರ ರಾಜ್ಯ ಸರ್ಕಾರದ ದ್ವೇಷ ರಾಜಕಾರಣದಿಂದ ಜನಾರ್ದನ ರೆಡ್ಡಿ ರವರನ್ನು ಸಂಬಂಧವಿಲ್ಲದ ಪ್ರಕರಣದಲ್ಲಿ ಜೈಲಿಗೆ ಹಾಕಿಸಲು ಪ್ರಯತ್ನಪಟ್ಟಿದೆ ಎಂದು ಆರೋಪಿಸಿದ ಸಮಯದಲ್ಲಿ ಬಿಜೆಪಿ ಬೆಂಬಲಿಗರು ಯಾರೂ ಸಹ ಜನಾರ್ದನ ರೆಡ್ಡಿ ರವರ ಬೆಂಬಲಕ್ಕೆ ನಿಲ್ಲಲಿಲ್ಲ. ಯಾಕೆಂದರೆ ಬಿಜೆಪಿ ಪಕ್ಷಕ್ಕೆ ಹಾಗೂ ಜನಾರ್ದನ ರೆಡ್ಡಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೈಕಮಾಂಡ್ ಹೇಳಿಕೊಂಡಿತ್ತು.

[do_widget id=et_ads-4]

ಆದರೆ ಇತ್ತೀಚಿಗೆ ಬಂದ ಮೂಲಗಳ ಪ್ರಕಾರ ರಾಜ್ಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ಅವರು ರೀ ಎಂಟ್ರಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.  ಮುಂದಿನ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ ಇರುವುದರಿಂದ ಪಕ್ಷಕ್ಕೆ ಜನಾರ್ದನ ರೆಡ್ಡಿ ರವರ ಸೇವೆ ಅವಶ್ಯಕತೆ ಇದೆ ಎಂದು ಎಲ್ಲರೂ ಭಾವಿಸಿದಂತೆ ಕಾಣುತ್ತಿದೆ. ಇದೇ ನಿಟ್ಟಿನಲ್ಲಿ ಜನಾರ್ಧನ ರೆಡ್ಡಿ ರವರು ಸಹ ಬಿಜೆಪಿ ಪಕ್ಷದ ವರಿಷ್ಠರ ಜತೆ ಮಾತನಾಡಿದ್ದಾರೆ.

[do_widget id=et_ads-5]

ಹೇಗಿದ್ದರೂ ನಾನು ನಿರಪರಾಧಿ, ನನಗೆ ಮತ್ತು ಅಭಿಡೆಂಟ್ ಕಂಪನಿಗೆ ಯಾವುದೇ ಸಂಬಂಧವಿಲ್ಲ, ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿ ನನಗೆ ಜಾಮೀನು ಮಂಜೂರು ಮಾಡಿದೆ. ನಾನು  ಸುಖಾಸುಮ್ಮನೆ ಮನೆಯಲ್ಲಿದ್ದರು ಸಹ ರಾಜ್ಯ ಸರ್ಕಾರವು ನನ್ನನ್ನು ಕೆಣಕಿದ್ದಾರೆ ,ಹೀಗಾಗಿ ಅವರ ವಿರುದ್ಧ ನಾನು ರಾಜಕೀಯ ಸಮರ ಸಾರಬೇಕಾಗಿದೆ. ಆದ್ದರಿಂದ ನಾನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ದೋಸ್ತಿಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ರವರು ಬಿಜೆಪಿ ಪಕ್ಷಕ್ಕೆ ತಿಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

[do_widget id=et_ads-6]

ಅಂಶಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಪಕ್ಷದ ಹೈಕಮಾಂಡ್ ಜನಾರ್ದನ ರೆಡ್ಡಿ ರವರಿಗೆ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ ಒಂದು ವೇಳೆ ಅದೇ ನಡೆದಲ್ಲಿ ಮುಂದಿನ ಲೋಕಸಭಾ ಚುನಾವಣೆಗೂ ಮುಂಚೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

[do_widget id=et_ads-7]