ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ಕರ್ನಾಟಕದಲ್ಲಿ ಇನ್ನೂ ಅನಂತನ ಹವಾ

ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ಕರ್ನಾಟಕದಲ್ಲಿ ಇನ್ನೂ ಅನಂತನ ಹವಾ

0

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹೀನಾಯ ಸೋಲನ್ನು ಕಂಡಿದೆ ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ಪಕ್ಷದ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಕಮಲ ಪಾಳಯದಲ್ಲಿ ಇರುವ ಪ್ರಮುಖ ಹಿಂದೂ ರಾಷ್ಟ್ರೀಯವಾದ ಅನಂತಕುಮಾರ್ ಹೆಗಡೆ ಅವರ ವರ್ಚಸ್ಸನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ರಾಜ್ಯದಲ್ಲಿ ಲಕ್ಷಾಂತರ ಯುವಕರು ಇವರ ಅಭಿಮಾನಿಗಳು, ಆದ್ದರಿಂದ ಇವರನ್ನು ಬಳಸಿಕೊಂಡು ಯುವ ಮತದಾರರನ್ನು ಸೆಳೆಯುವ ಪ್ಲಾನ್ ಮಾಡಿದೆ ಬಿಜೆಪಿ.

[do_widget id=et_ads-2]

ತನ್ನ ದಿಟ್ಟ ಮಾತುಗಳಿಂದ ಮತ್ತು ರಾಷ್ಟ್ರೀಯವಾದದ ಮೂಲಕವೇ ಪ್ರಸಿದ್ಧರಾಗಿರುವ ಅನಂತಕುಮಾರ್ ಹೆಗಡೆ ರವರು ಬಾರಿ ಜನ ಬೆಂಬಲವನ್ನು ಹೊಂದಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷವು ರಾಜ್ಯದಲ್ಲಿ ಮತ್ತಷ್ಟು ಅನಂತ್ ಕುಮಾರ್ ಹೆಗಡೆ ಅವರನ್ನು ಬಳಸಿಕೊಂಡು ಪ್ರಚಾರ ನಡೆಸಿ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಆದೇಶಿಸಿದೆ. ಚುನಾವಣಾ ಪ್ರಚಾರದಿಂದ ದೂರ ಉಳಿಯುವಂತೆ ಆದೇಶಿಸಿದ್ದ ಬಿಜೆಪಿ ಹೈಕಮಾಂಡ್ ಇದ್ದಕ್ಕಿದ್ದ ಹಾಗೆ ಅನಂತ್ ಕುಮಾರ್ ಹೆಗಡೆ ರವರಿಗೆ ಮತ್ತಷ್ಟು ಜವಾಬ್ದಾರಿ ನೀಡಿ ಕರೆ ತರಲು ನಿರ್ಧರಿಸಿದೆ.

[do_widget id=et_ads-3]

ಸಾಮಾನ್ಯವಾಗಿಯೇ ಅನಂತ್ ಕುಮಾರ್ ಹೆಗಡೆ ಅವರನ್ನು ಕಂಡರೆ ವಿರೋಧ ಪಕ್ಷಗಳಿಗೆ ತಲೆನೋವು ಬರುತ್ತದೆ. ಇರುವ ಸತ್ಯವನ್ನು ಯಾರಿಗೂ ಹೆದರಿ ಕೊಳ್ಳದೆ ಜನರ ಮುಂದೆ ಇಡುವ ನೈಜ ವ್ಯಕ್ತಿ ಅನಂತ್ ಕುಮಾರ್ ಹೆಗಡೆ. ಅನಂತ್ ಕುಮಾರ್ ಹೆಗಡೆಯವರು ಒಮ್ಮೆ ಭಾಷಣ ಮಾಡಿದರೆ ವಿರೋಧ ಪಕ್ಷದ ನಾಯಕರು ಸಹ ಬೆವರುತ್ತಾರೆ. ಇಂತಹ ನಾಯಕನನ್ನು ರಾಜ್ಯರಾಜಕಾರಣದಲ್ಲಿ ಸಕ್ರಿಯಗೊಳಿಸಿ ಯುವಜನತೆಯನ್ನು ಸಂಘಟಿಸುವ ಜವಾಬ್ದಾರಿ ಹೊರಿಸುವ ಎಲ್ಲಾ ಸಾಧ್ಯತೆಗಳು ಇದೆ.

[do_widget id=et_ads-4]

ಕಳೆದ ಉಪಚುನಾವಣೆಯಲ್ಲಿ ಯಡಿಯೂರಪ್ಪನವರ ಆಜ್ಞೆಯ ಮೇರೆಗೆ ಅನಂತ್ ಕುಮಾರ್ ಹೆಗಡೆ ಅವರನ್ನು ಚುನಾವಣಾ ಪ್ರಚಾರದಿಂದ ದೂರ ಇಡಲಾಗಿತ್ತು. ಆದರೆ ಸೋಲಿನ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಅನಂತ್ ಕುಮಾರ್ ಹೆಗಡೆ ಅವರನ್ನು ಹೆಚ್ಚಾಗಿ ಬಳಸಿಕೊಂಡು ಮತ್ತಷ್ಟು ಮತ ಗಳಿಸುವ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ.

[do_widget id=et_ads-5]