ಸಾಮಾಜಿಕ ಜಾಲತಾಣಗಳಲ್ಲಿ 3 ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ಕನ್ನಡದ ಚೆಲುವೆಯ ವಿಡಿಯೋ ನೋಡಿದ್ದೀರಾ?? ಹೇಗಿದೆ ಗೊತ್ತಾ??

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡುವ ಮೂಲಕ ಸಾಕಷ್ಟು ಯುವ ತಾರೆಗಳು ಹುಟ್ಟು ಕೊಂಡಿದ್ದಾರೆ. ಹೌದು ಸ್ನೇಹಿತರೆ ಮೊದಲು tik.tok ಈ ಯುವ ಪ್ರತಿಭೆಗಳಿಗೆ ಒಂದು ಉತ್ತಮ ಪ್ಲಾಟ್ಫಾರ್ಮ್ ಆಗಿತ್ತು. ನಂತರ ಅದರ ನಿಷೇಧದ ನಂತರ ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣ ಎಲ್ಲರಿಗೂ ತಮ್ಮ ಪ್ರತಿಭೆ ಅನಾವರಣ ಮಾಡುವುದಕ್ಕೆ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ.

ನೀವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ನೋಡುವಾಗ ನಿಮಗೆ ಹೆಚ್ಚಾಗಿ ಹಿಂದಿ ಭಾಷೆಯ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ವಿಡಿಯೋ ಕಾಣಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಮೂಲದ ಕನ್ನಡದ ಹುಡುಗಿಯ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಕೋಟ್ಯಂತರ ಮಂದಿ ಇಂದ ವೀಕ್ಷಣೆಗೆ ಒಳಪಟ್ಟು ಸಾಕಷ್ಟು ವೈರಲ್ ಆಗಿ ಸುದ್ದಿಯಾಗಿರುವ ವಿಚಾರ ನಿಮಗೆ ಗೊತ್ತಿರುತ್ತದೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕೊಡಗಿನ ಮೂಲದ ಹುಡುಗಿ ಯಾಗಿರುವ ಭೂಮಿಕ ಬಸವರಾಜ ಕುರಿತಂತೆ. ಹೌದು ಈಕೆಯ ಅಯ್ಯಾ ಚಿತ್ರದ ಡ್ರೀಮಂ ವೀಪಕಂ ಎಂಬ ಹಾಡಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ 3 ಕೋಟಿಗೂ ಅಧಿಕ ವೀಕ್ಷಣೆ ಒಳಪಟ್ಟಿದ್ದು 18 ಲಕ್ಷಕ್ಕೂ ಅಧಿಕ ಲೈಕ್ ಗಳನ್ನು ಪಡೆದು ಇನ್ಸ್ಟಾಗ್ರಾಮ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಚಲನ ಸೃಷ್ಟಿಸಿರುವ ವಿಡಿಯೋಗಳಲ್ಲಿ ಅಗ್ರಗಣ್ಯ ಆಗಿದೆ. ಮಾತ್ರವಲ್ಲದೆ ಭೂಮಿಕ ಬಸವರಾಜ ರವರಿಗೆ ಇನ್ಸ್ಟಾಗ್ರಾಂ ನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಈಕೆ ಯಾವ ನಟಿಗೂ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಆಗಿದ್ದು ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಅವಕಾಶ ಸಿಕ್ಕರೂ ಆಶ್ಚರ್ಯಪಡಬೇಕಾಗಿಲ್ಲ. ನೋಡಿದ್ರೆ ಸ್ನೇಹಿತರೆ ಪ್ರತಿಭೆ ಇದ್ದರೆ ಸಾಮಾಜಿಕ ಜಾಲತಾಣಗಳಿಂದ ಕೂಡ ಸ್ಟಾರ್ ಆಗಬಹುದು ಎಂಬುದನ್ನು ಇವರು ನಿರೂಪಿಸಿದ್ದಾರೆ.

Post Author: Ravi Yadav