ತಾಜ್ ನಲ್ಲಿ ನಡೆಯಿತು ಬಜರಂಗದಳದ ವತಿಯಿಂದ ಪೂಜೆ: ನಮಾಜ್ ಮಾಡಿದವರಿಗೆ ತಕ್ಕ ತಿರುಗೇಟು

ತಾಜ್ ನಲ್ಲಿ ನಡೆಯಿತು ಬಜರಂಗದಳದ ವತಿಯಿಂದ ಪೂಜೆ: ನಮಾಜ್ ಮಾಡಿದವರಿಗೆ ತಕ್ಕ ತಿರುಗೇಟು

0

ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ತಾಜ್ ಮಹಲ್ ನಲ್ಲಿ ನಮಾಜ್ ಮಾಡಬಾರದು ಎಂದು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆ ಮತ್ತು ಸುಪ್ರಿಂ ಕೋರ್ಟ್ ಆದೇಶವನ್ನು ಹೊರಡಿಸಿದೆ. ಪ್ರವಾಸ ರಿಗೆ ತೊಂದರೆಯಾಗುತ್ತದೆ ಮತ್ತು ಮುಸ್ಲಿಮರಿಗೆ ನಮಾಜ್ ಮಾಡಲು ಪ್ರತಿಷ್ಠಿತ ಸ್ಥಳವೇ ಬೇಕಿಲ್ಲ ಎಂಬ ಆಧಾರಗಳ ಮೇಲೆ ತಾಜ್ ಮಹಲ್ ನಲ್ಲಿ ನಮಾಝನ್ನು ನಿಷೇಧಿಸಲಾಗಿತ್ತು.

[do_widget id=et_ads-2]

ಸುಪ್ರೀಂ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಕೆಲವು ಮುಸಲ್ಮಾನರು ತಾಜ್ ಮಹಲ್ ನಲ್ಲಿ ಕೆಲವು ದಿನಗಳ ಹಿಂದಷ್ಟೇ ನಮಾಜ್ ಮಾಡಿದ್ದರು. ಇದರಿಂದ ಸಾಮಾನ್ಯವಾಗಿಯೇ ನಮಾಜ್ ಮಾಡಿದವರು ಭಾರತೀಯ ಪುರಾತತ್ವ ಸಂಸ್ಕೃತಿಯನ್ನು ಉಳಿಸಲು ಹೋರಾಡುತ್ತಿರುವ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಈ ವಿದ್ಯಮಾನವನ್ನು ಬಜರಂಗದಳವು ಸಹ ಖಂಡಿಸಿತ್ತು.

[do_widget id=et_ads-3]

ನಮಾಝ ಇಂದ ತಾಜ್ಮಹಲ್ ಅಪವಿತ್ರಗೊಂಡಿತು ಎಂದು ಆರೋಪಿಸಿರುವ ಬಜರಂಗದಳದ ಮಹಿಳಾ ಕಾರ್ಯಕರ್ತರು ತಾಜ್ ಆವರಣದೊಳಗೆ ತಮ್ಮೊಂದಿಗೆ ತಂದಿದ್ದ ಗಂಗಾ ಜಲವನ್ನು ಸಿಂಪಡಿಸಿ ಆವರಣವನ್ನು ಶುದ್ಧಿಗೊಳಿಸಿ ನಂತರ ಆರತಿ ಬೆಳಗಿಸಿ ಪೂಜೆ ನಡೆಸಿದರು. ಈ ವಿದ್ಯಮಾನವನ್ನು ಹಲವಾರು ಮುಸ್ಲಿಂ ನಾಯಕರು ಖಂಡಿಸಿದ್ದಾರೆ.

[do_widget id=et_ads-4]

ಇದಕ್ಕೆ ಪ್ರತ್ಯುತ್ತರ ನೀಡದ ಬಜರಂಗದಳ ಕಾರ್ಯಕರ್ತರು ಯಾರಿಗೂ ಕ್ಯಾರೆ ಎನ್ನದೆ ತಮ್ಮ ಪಾಡಿಗೆ ಪೂಜೆ ನಡೆಸಿ ತಾಜ್ಮಹಲ್ ನಿಂದ ಹೊರ ಬಂದಿದ್ದಾರೆ.

[do_widget id=et_ads-5]