ಕುಮಾರಣ್ಣನ ಕರಾಳ ಮುಖ: ಪ್ರಶ್ನೆಗಳಿಗೆ ಉತ್ತರಿಸಿ ಕುಮಾರಣ್ಣ

ಕುಮಾರಣ್ಣನ ಕರಾಳ ಮುಖ: ಪ್ರಶ್ನೆಗಳಿಗೆ ಉತ್ತರಿಸಿ ಕುಮಾರಣ್ಣ

0

ಮಾನ್ಯ ಮುಖ್ಯಮಂತ್ರಿಗಳೇ, ಓ ಕ್ಷಮಿಸಿ ನಾನು ನಿಮಗೆ ಮತ ನೀಡಿಲ್ಲ ಆದ ಕಾರಣದಿಂದ ನೀವು ನಮಗೆ ಮುಖ್ಯಮಂತ್ರಿಗಳು ಅಲ್ಲ( ನೀವೇ ಹೇಳಿದ ಹಾಗೆ). ಮಾನ್ಯ ಕುಮಾರಸ್ವಾಮಿ ರವರೆ ನೀವು ಕಳೆದ ಕೆಲವು ಗಂಟೆಗಳ ಹಿಂದಷ್ಟೇ ರೈತರನ್ನು ರೈತರೇ ಅಲ್ಲ ಮತ್ತು ಮಹಿಳೆಯನ್ನು ಇಷ್ಟು ವರ್ಷ ಎಲ್ಲಿ ಮಲಗಿದ್ದೆ ತಾಯಿ ಎಂದು ಪ್ರಶ್ನಿಸಿದ್ದೀರ ! , ಅಷ್ಟೇ ಅಲ್ಲದೆ ಮಾಧ್ಯಮಗಳನ್ನು ಸಹ ತರಾಟೆಗೆ ತೆಗೆದುಕೊಂಡಿದ್ದೀರ, ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವಷ್ಟು ದೊಡ್ಡವ ನಾನಲ್ಲ , ಆದರೆ ನನಗೆ ತಿಳಿದಿರುವಷ್ಟು ಜ್ಞಾನದಲ್ಲಿ ನಾನು ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬಯಸುತ್ತೇನೆ ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನನ್ನ ಕೈಲಾದಷ್ಟು ಪ್ರಯತ್ನ ಪಟ್ಟಿದ್ದೇನೆ.

[do_widget id=et_ads-2]

ನೀವು ಕೇಳುತ್ತೀರಾ ಮತ ಹಾಕುವಾಗ ಕುಮಾರಸ್ವಾಮಿ ನಿಮಗೆ ನೆನಪಾಗಲಿಲ್ಲವೇ ಎಂದು !!

ಆದರೆ ನೀವು ಮುಖ್ಯಮಂತ್ರಿ ಕುರ್ಚಿ ಏರುವಾಗ ರಾಜ್ಯದ ಜನ ಯಾರಿಗೆ ಮತ ನೀಡಿದ್ದಾರೆ ಎಂದು ಒಮ್ಮೆ ಯೋಚಿಸಿ ನಂತರ ಕುರ್ಚಿ ಏರಿ.ಒಂದು ವೇಳೆ ಈ ಪ್ರಶ್ನೆ ನಿಮಗೂ ಸಹ ಬಂದಿದ್ದಲ್ಲಿ ನಮಗೆ ನೀವು ಪ್ರಶ್ನೆಯನ್ನು ಮಾಡುತ್ತಿರಲಿಲ್ಲ. ನೀವು ಸಹ ಜನ ಯಾರಿಗೆ ಮತ ನೀಡಿದರೆ ನಮಗೆ ಏನು ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ ಆಗಿಬಿಡುವ ಎಂದು ಮುಖ್ಯಮಂತ್ರಿ ಕುರ್ಚಿ ಹೇಗಿದ್ದೀರಾ ಅದೇ ರೀತಿ ನಾವು ಸಹ ಯಾರಿಗೆ ಮತ ನೀಡಿದ್ದೇವೆ ಎಂಬುದನ್ನು ಮರೆತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಂಬ ಸ್ಥಾನದಲ್ಲಿ ಕುಳಿತಿರುವ ನಿಮ್ಮನ್ನು ಪ್ರಶ್ನೆ ಮಾಡುತ್ತಿದ್ದೇವೆ.

ಒಂದು ವೇಳೆ ನಮಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದಾದಲ್ಲಿ ನಿಮಗೂ ಸಹ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರುವ ನೈತಿಕತೆ ಇಲ್ಲ.

[do_widget id=et_ads-7]

ತನ್ನ ಹೊಟ್ಟೆ ಪಾಡಿಗಾಗಿ ಬೆಳೆದ ಬೆಳೆಗೆ ಬೆಲೆಯನ್ನು ಕೇಳಲು ಒಂದು ಮಹಿಳೆ ಬಂದಾಗ ನೀವು ಇಷ್ಟು ವರ್ಷ ಇಲ್ಲೂ ಮಲಗಿದ್ದ ತಾಯಿ ಎಂದು ಕೇಳಿದ್ದೀರಿ, ಆ ಮಹಿಳೆ ಹೋರಾಟಕ್ಕೆ ನಾಲ್ಕು ವರ್ಷದಲ್ಲಿ ಎಲ್ಲಿಯೂ ಬಾರದೆ ಇರಬಹುದು ಆದರೆ ಆಕೆಯ ಪರವಾಗಿ ಆತನ ಸಹೋದರ,ಗಂಡ  ಅಥವಾ ತಂದೆ ಹೋರಾಟದಲ್ಲಿ ಭಾಗಿಯಾಗಿರುತ್ತಾರೆ. ಯಾಕೆಂದರೆ ರೈತರ ಹೋರಾಟ ನಿಮಗೆ ತಿಳಿದಿರುವ ಹಾಗೆ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಈಗ ಆ ಮಹಿಳೆಯ ಕಾಲವಷ್ಟೇ ಎಂಬುದು ನಿಮಗೆ ನೆನಪಿರಲಿ. ಯಾರಾದರೂ ಒಬ್ಬರು ಕುಟುಂಬದಿಂದ ಬಂದು ಹೋರಾಟ ನಡೆಸುತ್ತಿದ್ದಾರೆ ಆದರೆ ನಿಮ್ಮ ಕುಟುಂಬದ ರೀತಿ ಹಲವಾರು ಹಗರಣಗಳ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದ ಕ್ಷಣ ಆ ಹಗರಣಗಳನ್ನು ಮುಚ್ಚಿಹಾಕಿ ಕಾಂಗ್ರೆಸ್ ಪಕ್ಷ ಬೆಂಬಲಕೋಸ್ಕರ ಅಂಗಲಾಚಿ ನಿಂತಂತೆ ಆ ಮಹಿಳೆಯು ಇನ್ನೊಬ್ಬರ ಪರವಾಗಿ ನಿಂತಿಲ್ಲ ಎಂಬುದು ನಿಮಗೆ ನೆನಪಿರಲಿ.

[do_widget id=et_ads-6]

ನೈಸ್ ಸಂಸ್ಥೆಯ ವಿರುದ್ಧ ದೇವೇಗೌಡರು ಹಲವಾರು ಬಾರಿ ಧ್ವನಿ ಎತ್ತಿದ್ದರೂ ಆದರೆ ತಾವು ಅಧಿಕಾರಕ್ಕೆ ಬಂದ ತಕ್ಷಣ ನೈಸ್ ಸಂಸ್ಥೆಯ ಪರವಾಗಿ ಮಾತನಾಡಲು ಸಿದ್ಧರಿದ್ದೀರಾ, ಇದು ಕೇವಲ ಅಧಿಕಾರದ ಗದ್ದುಗೆಗಾಗಿ ಎಂಬುದು ಪ್ರತಿಯೊಬ್ಬರಿಗೂ ಈಗಾಗಲೇ ತಿಳಿದಿದೆ. ಆದರೆ ಆ ಮಹಿಳೆ ಅಥವಾ ಅವರ ಕುಟುಂಬ ಕೇವಲ ತಾವು ಬೆಳೆದ ಬೆಳೆಗಳಿಗೆ ಆಗಿ ಹೋರಾಟ ನಡೆಸುತ್ತಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

[do_widget id=et_ads-5]

ರೈತರನ್ನು ಇಂದು ನೀವು ಹೋರಾಟ ಮಾಡುತ್ತಿರುವುದು ರೈತರೇ ಅಲ್ಲ ಅವರು ಗೂಂಡಾಗಳು ಎಂದು ಹೇಳಿದ್ದೀರಾ, ವಿಧಾನಸಭೆ ಗೂ ಮುಂಚೆ ಕಾಂಗ್ರೆಸ್ ಸರ್ಕಾರವನ್ನು ಗೂಂಡಾ ಸರ್ಕಾರ ಎಂದು ನೀವೇ ಹೇಳಿದ್ದೀರಿ ಈಗ ಆ ಗುಂಡ ಸರ್ಕಾರದ ಜೊತೆ ಕೇವಲ ಅಧಿಕಾರಕ್ಕಾಗಿ ಕೈ ಜೋಡಿಸಿ ನೀವು ಮಾಡುತ್ತಿರುವುದಾದರೂ ಏನು???

[do_widget id=et_ads-4]

ದಯವಿಟ್ಟು ಕ್ಷಮಿಸಿ ಕುಮಾರಣ್ಣ, ನಾನು ಒಬ್ಬ ಸಾಮಾನ್ಯ ಪ್ರಜೆ ನಾನು ಓದಿರುವುದು ಅಷ್ಟು ಕಡಿಮೆ. ನಿಮ್ಮಷ್ಟು ರಾಜಕೀಯ ಅನುಭವ ವಾಗಲಿ ಅಥವಾ ಜ್ಞಾನವಾಗಲಿ ನನಗೆ ಇಲ್ಲ. ಆದರೆ ಸಾಮಾನ್ಯ ಜ್ಞಾನ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

[do_widget id=et_ads-3]