ಧಾರವಾಹಿ ಕಟ್ಟಾ ವಿರೋಧಿಗಳು ಕೂಡ ಕನ್ನಡತಿ ನೋಡಲು ಕಾರಣವೇನು ಗೊತ್ತೆ? ದಿನೇ ದಿನೇ ಹೆಚ್ಚಾಗುತ್ತಿದೆ ಕನ್ನಡತಿ ಹವಾ.

ಧಾರವಾಹಿ ಕಟ್ಟಾ ವಿರೋಧಿಗಳು ಕೂಡ ಕನ್ನಡತಿ ನೋಡಲು ಕಾರಣವೇನು ಗೊತ್ತೆ? ದಿನೇ ದಿನೇ ಹೆಚ್ಚಾಗುತ್ತಿದೆ ಕನ್ನಡತಿ ಹವಾ.

ನಮಸ್ಕಾರ ಸ್ನೇಹಿತರೇ ಹಲವಾರು ಜನ ಧಾರವಾಹಿ ಎಂದ ತಕ್ಷಣ ನೋಡುವುದಿಲ್ಲ ಎನ್ನುತ್ತಾರೆ, ಸಿನಿಮಾ ಹಾಕಿ ನೋಡೋಣ ಅಥವಾ ನ್ಯೂಸ್ ನೋಡೋಣ ಎನ್ನುವ ಜನರೇ ಹೆಚ್ಚು. ಆದರೆ ಇತ್ತೀಚಿಗೆ ಕನ್ನಡದಲ್ಲಿ ಒಂದು ಧಾರವಾಹಿ ಇತರ ಧಾರವಾಹಿಯ ಪ್ರೇಕ್ಷಕರನ್ನು ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಧಾರವಾಹಿಗಳನ್ನು ವಿರೋಧಿಸುತ್ತಾ ಬಂದಿರುವ ಅದೆಷ್ಟು ಜನರನ್ನು ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಆ ಧಾರವಾಹಿ ಮತ್ತ್ಯಾವುದೂ ಅಲ್ಲ ಮದುವೆ ಕನ್ನಡತಿ ಧಾರಾವಾಹಿ.

ಹೌದು ಸ್ನೇಹಿತರೇ ಕನ್ನಡ ಧಾರವಾಹಿ ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕನ್ನಡತಿ ಧಾರವಾಹಿಯ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾರು ಯಾವುದೇ ಸೀರಿಯಲ್ ಅಭಿಮಾನಿಯಾಗಿದ್ದರೂ ಕೂಡ ಕನ್ನಡ ಧಾರವಾಹಿ ತಪ್ಪದೇ ನೋಡಬೇಕು ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಅಷ್ಟರಮಟ್ಟಿಗೆ ಜನರನ್ನು ಕನ್ನಡತಿ ಧಾರಾವಾಹಿ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ ಇಷ್ಟೆಲ್ಲಾ ಹವಾ ಸೃಷ್ಟಿಸುತ್ತಿರುವ ಕನ್ನಡತಿ ಧಾರಾವಾಹಿಯ ವಿಶೇಷತೆಯನ್ನು ಏನು?? ಅದು ಏಕೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ನಾವು ಉತ್ತರ ನೀಡುತ್ತೇವೆ ಕೇಳಿ.

ಮೊದಲನೆಯದಾಗಿ ಸ್ನೇಹಿತರೇ ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡು ಧಾರವಾಹಿ ನಿರ್ಮಾಣ ಮಾಡಿದಂತೆ ಭಾವನೆ ಮೂಡುವಂತೆ ಇದೆ. ಯಾಕೆಂದರೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಕ್ಲಾಸ್ ಕೂಡ ನಡೆಯುತ್ತದೆ, ಸಿರಿಗನ್ನಡಂ ಗೆಲ್ಗೆ ಎಂಬ ಆಲೋಚನೆಯ ಮೂಲಕ ಜನರಿಗೆ ಕನ್ನಡದ ಜ್ಞಾನವನ್ನು ತಲುಪಿಸುವ ಕೆಲಸವನ್ನು ಕನ್ನಡತಿ ಮಾಡುತ್ತಿದೆ. ಕಿರುತೆರೆಯಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಒಂದು ಧಾರವಾಹಿ ಕನ್ನಡದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ.

ಎರಡನೇ ಕಾರಣವೇನು ಎಂಬುದರ ಕುರಿತು ನಾವು ಗಮನಹರಿಸುವುದಾದರೇ ಸ್ನೇಹಿತರೇ ನೀವು ಕನ್ನಡತಿ ಧಾರವಾಹಿ ನೋಡಿದರೆ ನಿಮಗೆ ತಿಳಿಯುತ್ತದೆ, ಕನ್ನಡತಿ ಧಾರಾವಾಹಿ ಯಲ್ಲಿ ಯಾವುದೇ ಅನಗತ್ಯ ಪಾತ್ರಗಳು ಇಲ್ಲವೇ ಇಲ್ಲ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಮಹತ್ವ ನೀಡಲಾಗಿದ್ದು, ಅದ್ಭುತವಾಗಿ ಪ್ರತಿಯೊಂದು ಸಂಭಾಷಣೆಗಳನ್ನೂ ಕೂಡ ಹೆಣೆಯಲಾಗಿದೆ. ಹೀಗಾಗಿ ಯಾವುದೋ ಒಂದು ಪಾತ್ರದ ಮೇಲೆ ಹೆಚ್ಚಿನ ಮಹತ್ವ ನೀಡಿ ಒಂದೆರಡು ಎಪಿಸೋಡುಗಳು ಪ್ರಸಾರವಾದರೂ ಕೂಡ ಜನರಿಗೆ ಬೇಸರವಾಗುತ್ತಿಲ್ಲ, ಅಷ್ಟೇ ಅಲ್ಲಾ ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಸರಿಯಾದ ಸಂದರ್ಭದಲ್ಲಿ ಸೂಕ್ತವಾದ ರೀತಿಯಲ್ಲಿ ಸಂದರ್ಭವನ್ನು ಬೆಸೆದು ಕಥೆಗೆ ತಿರುವು ನೀಡಲಾಗಿದೆ. ಬಹಳ ಸೂಕ್ಷ್ಮ ಮಾಹಿತಿಗಳನ್ನು ಕೂಡ ನೀಡಿ ಪ್ರತಿಯೊಂದು ಪಾತ್ರಗಳಿಗೆ ಅರ್ಥ ತುಂಬಲಾಗಿದೆ.

ಇನ್ನು ಇಷ್ಟೇ ಅಲ್ಲ ಪ್ರಮುಖವಾಗಿ ನೀವು ಇತರ ಧಾರವಾಹಿಗಳನ್ನು ನೋಡಿದರೇ ಖಂಡಿತಾ ಕೆಲವೊಂದು ಸಂದರ್ಭಗಳಲ್ಲಿ ಕಥೆಯನ್ನು ಬಹಳ ಎಳೆಯಲಾಗುತ್ತದೆ ಎಂಬ ಭಾವನೆ ಮಾಡುತ್ತದೆ, ಕೆಲವು ಧಾರಾವಾಹಿಗಳು ಗಳಂತೂ ಆರರಿಂದ ಏಳು ವರ್ಷಗಳ ಕಾಲ ಪ್ರಸಾರವಾದರೂ ಕೂಡ ಇನ್ನು ಪ್ರಮುಖ ತಿರುವು ಪಡೆದುಕೊಂಡು ಇರುವುದಿಲ್ಲ. ಇನ್ನು ಕೆಲವು ಧಾರವಾಹಿಗಳು ಆಗಾಗ ಕಥೆಯನ್ನು ಎಳೆಯುತ್ತವೆ. ಆದರೆ ಕನ್ನಡತಿ ಧಾರಾವಾಹಿ ಆರಂಭವಾದ ದಿನಗಳಿಂದಲೂ ಕೂಡ ಇಲ್ಲಿಯವರೆಗೂ ಹೆಚ್ಚು ವೇಗವಾಗಿ ಅಲ್ಲದೇ ಅಥವಾ ಹೆಚ್ಚು ನಿಧಾನವಾಗಿ ಅಲ್ಲದೆ ಸರಿಯಾದ ವೇಗದಲ್ಲಿ ಕಥೆಯನ್ನು ಪ್ರಸಾರ ಮಾಡಲಾಗುತ್ತಿದೆ.

ಅಷ್ಟೇ ಅಲ್ಲ ಈ ಎಲ್ಲಾ ಸಂಗತಿಗಳ ನಡುವೆ ಸಂಭಾಷಣೆಗಳ ಮೂಲಕ ಜನರನ್ನು ನಗಿಸುವ ಕಾರ್ಯವನ್ನು ಕೂಡ ಕನ್ನಡತಿ ಧಾರಾವಾಹಿ ಮರೆತಿಲ್ಲ. ಇನ್ನು ಇಷ್ಟು ಸಾಲದು ಎಂಬಂತೆ ಪ್ರೀತಿ, ಪೋಷಕರ ನಡುವಿನ ಸಂಬಂಧದ ಬಾಂಧವ್ಯತೆ, ಗೌರವ, ಮುಗ್ಧತೆ, ಸಹೋದರ ಸಹೋದರಿಯರ ನಡುವಿನ ಅನ್ಯೋನ್ಯತೆ, ಮಧ್ಯಮ ವರ್ಗದ ಹುಡುಗಿಯ ಜೀವನ, ಯುವಕರಿಗೂ ಕೂಡ ಅಗತ್ಯವಾದ ಕಾಲೆಳೆಯುವ ಸಂದರ್ಭಗಳು, ಹೀಗೆ ಯುವಕರಿಂದ ಹಿಡಿದು ಹಿರಿಯರವರೆಗೆ ಬೇಕಾಗಿರುವ ಎಲ್ಲಾ ಅಂಶಗಳನ್ನು ಒಟ್ಟಾಗಿ ಬೆರೆಸಿ ಕನ್ನಡತಿ ಧಾರಾವಾಹಿ ನಿರ್ಮಾಣ ಮಾಡಲಾಗುತ್ತಿದೆ. ಆದ ಕಾರಣ ಕನ್ನಡತಿ ಧಾರಾವಾಹಿ ಎಲ್ಲರನ್ನೂ ಕೂಡ ತನ್ನತ್ತ ಸೆಳೆಯುತ್ತಿದ್ದು ದಿನೇದಿನೇ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ನೀವು ಕೂಡ ಈ ಧಾರವಾಹಿ ಮೆಚ್ಚಿಕೊಂಡಿದ್ದಾರೆ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.