ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಂದೀಪ್ ಉನ್ನಿಕೃಷ್ಣನ್ ರವರ ಸಿನೆಮಾದ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತೇ?

92

Get real time updates directly on you device, subscribe now.

ನಮಸ್ಕಾರ ಸ್ನೇಹಿತರ ಸಾಮಾನ್ಯವಾಗಿ ಸಿನಿಮಾ ಹೀರೋಗಳು ನಿಜವಾದ ಹೀರೋಗಳಲ್ಲ ದೇಶ ಕಾಯುವ ಯೋಧರು ನಿಜವಾದ ಹೀರೋಗಳು ಎಂಬುದಾಗಿ ಎಲ್ಲರೂ ಹೇಳುತ್ತಾರೆ ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಇದೇ ರೀತಿ ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿರುವ ಮಹಾನ್ ಯೋಧನ ಜೀವನಾಧಾರಿತ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಕನ್ನಡಿಗ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಆಗಿರುವ ಮೇಜರ್ ಸಿನಿಮಾದ ಕುರಿತಂತೆ. ಆದಿವಿ ಶೇಷ್ ಈ ಸಿನಿಮಾದಲ್ಲಿ ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರಿಗೆ ನಾಯಕಿಯಾಗಿ ಸಾಯಿ ಮಂಜ್ರೇಕರ್ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಮಹೇಶ್ ಬಾಬುರವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು ಚಿತ್ರ ಸಾಕಷ್ಟು ಸೊಗಸಾಗಿ ಮೂಡಿಬಂದಿದೆ ಎಂಬುದಾಗಿ ಸಿನಿಮಾ ನೋಡಿದವರು ಪ್ರತಿಯೊಬ್ಬರು ಕೂಡ ಹೇಳುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ಸಿನಿಮಾ ಥಿಯೇಟರ್ ಗಳಿಂದ ಹೊರಬರಬೇಕಾದರೆ ಕಣ್ಣೀರಿನಿಂದ ಭಾವುಕರಾಗಿ ಹೊರಬರುತ್ತಿರುವುದು ಸಿನಿಮಾ ಯಾವ ಮಟ್ಟಿಗೆ ಪ್ರೇಕ್ಷಕರನ್ನು ಗೆದ್ದಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. 26 11 ರ ಮುಂಬೈ ಘಟನೆಯ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರನ್ನು ಬದುಕಿಸಲು ತನ್ನ ಜೀವವನ್ನೇ ಪಣವಾಗಿಟ್ಟು ವೀರ ಸಂದೀಪ್ ಉನ್ನಿಕೃಷ್ಣನ್ ರವರ ಜೀವನಾಧಾರಿತ ಸಿನಿಮಾ ಮೇಜರ್ ಬಿಡುಗಡೆಯಾಗಿ ಮೊದಲ ದಿನವೇ 13 ಕೋಟಿ ರೂಪಾಯಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.

ಇನ್ನು ಚಿತ್ರವನ್ನು ವೀಕ್ಷಿಸಿರುವ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ರವರು ಚಿತ್ರದ ಕುರಿತಂತೆ ಪ್ರಶಂಸೆಯ ಮಳೆಯನ್ನು ಸುರಿದಿದ್ದಾರೆ. ನಾಯಕನಟ ಆದಿವಾ ಶೇಷ್ ನಾಯಕಿ ಸಾಯಿ ಮಂಜ್ರೇಕರ್ ಪ್ರಕಾಶ್ ರಾಜ್ ಸೇರಿದಂತೆ ಪ್ರತಿಯೊಬ್ಬ ನಟರ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಂಗೀತವೂ ಕೂಡ ಸೊಗಸಾಗಿ ಮೂಡಿ ಬಂದಿದ್ದು ಎಂತಹ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಿದ್ದಕ್ಕಾಗಿ ನಿರ್ಮಾಪಕ ಹಾಗೂ ನಟ ಮಹೇಶ್ ಬಾಬು ರವರಿಗೆ ಅಲ್ಲುಅರ್ಜುನ್ ರವರು ತಮ್ಮ ಟ್ವಿಟರ್ ಖಾತೆಯ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಮೇಜರ್ ಸಿನಿಮಾ ಪ್ರತಿಯೊಬ್ಬ ಭಾರತೀಯನ ಹೃದಯ ಕಟ್ಟುವಂತ ಸಿನಿಮಾ ಎಂಬುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Get real time updates directly on you device, subscribe now.