ಪ್ರತಿ ಬಾರಿಯೂ ಕೊಹ್ಲಿ ರವರನ್ನು ಹಾಡಿ ಹೊಗಳುತ್ತಿದ್ದ ಸಿರಾಜ್ ಈ ಬಾರಿ ಮಾಡಿದ್ದೇನು ಗೊತ್ತೇ? ಸಿರಾಜ್ ವಿರುದ್ದ ತಿರುಗಿ ಬಿದ್ದ ಕೊಹ್ಲಿ ಫ್ಯಾನ್ಸ್. ಯಾಕೆ ಗೊತ್ತೇ??

ಪ್ರತಿ ಬಾರಿಯೂ ಕೊಹ್ಲಿ ರವರನ್ನು ಹಾಡಿ ಹೊಗಳುತ್ತಿದ್ದ ಸಿರಾಜ್ ಈ ಬಾರಿ ಮಾಡಿದ್ದೇನು ಗೊತ್ತೇ? ಸಿರಾಜ್ ವಿರುದ್ದ ತಿರುಗಿ ಬಿದ್ದ ಕೊಹ್ಲಿ ಫ್ಯಾನ್ಸ್. ಯಾಕೆ ಗೊತ್ತೇ??-

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಒಮ್ಮೆ ವಿರಾಟ್ ಕೊಹ್ಲಿ ರವರ ಬದಲಾಗಿ ಟೀಮ್ ಇಂಡಿಯಾದ ನಾಯಕನಾಗಿ ರೋಹಿತ್ ಶರ್ಮಾ ರವರು ಆಯ್ಕೆಯಾಗಿದ್ದಕ್ಕೆ ದೊಡ್ಡ ಮಟ್ಟದಲ್ಲಿ ಬಿಸಿಸಿಐ ಸೇರಿದಂತೆ ಎಲ್ಲರೂ ಕೂಡ ಕ್ರಿಕೆಟ್ ಅಭಿಮಾನಿಗಳಿಂದ ಅಸಮಾಧಾನವನ್ನು ಅನುಭವಿಸಿದ್ದರು. ಈಗ ಆ ವಿಚಾರ ಆರುವ ಮುನ್ನವೇ ಈಗ ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ಆ ವಿಚಾರಕ್ಕೆ ತುಪ್ಪ ಸುರಿದಿದ್ದಾರೆ.

ಹೌದು ಗೆಳೆಯರೆ ನಿಮಗೆ ಗೊತ್ತಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಸಿರಾಜ್ ರವರು ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಆರ್ಸಿಬಿ ತಂಡಕ್ಕೆ ಸೇರಿದ ಪ್ರಾರಂಭದಿಂದಲೂ ಕೂಡ ಕಳಪೆ ಪ್ರದರ್ಶನದ ಮೂಲಕ ಪ್ರೇಕ್ಷಕರಿಂದ ಟೀಕೆಗೆ ಒಳಗಾಗುತ್ತಿದ್ದ ಸಿರಾಜ್ ರವರನ್ನು ತಂಡದಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದು ವಿರಾಟ್ ಕೊಹ್ಲಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟೇ ಯಾಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಸಿರಾಜ್ ಅವರು ಪಾದಾರ್ಪಣೆ ಮಾಡಲು ಸಾಧ್ಯವಾಗಿದ್ದು ವಿರಾಟ್ ಕೊಹ್ಲಿ ಅವರ ಮಾರ್ಗದರ್ಶನದಿಂದಲೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ವಿದಾಯ ಹೇಳಿದ ಸಂದರ್ಭದಲ್ಲಿಯೂ ಕೂಡ ಎಂದೆಂದಿಗೂ ನೀವೇ ನನ್ನ ನಾಯಕ ಎಂಬುದಾಗಿ ಭಾವನಾತ್ಮಕವಾಗಿ ಮೊಹಮ್ಮದ್ ವಿರಾಜ್ ರವರು ಹೇಳಿಕೊಂಡಿದ್ದರು.

ಆದರೆ ಈಗ ಐಪಿಎಲ್ ಮುಗಿದು ಮತ್ತೆ ಇಂಟರ್ನ್ಯಾಷನಲ್ ಟೂರ್ನಿಗಳು ಪ್ರಾರಂಭವಾಗುತ್ತಿದ್ದಂತೆಯೇ ರೋಹಿತ್ ಶರ್ಮಾ ರವರ ಗುಣಗಾನ ಮಾಡಲು ಪ್ರಾರಂಭಿಸಿದ್ದಾರೆ. ಹೌದು ಗೆಳೆಯರೇ ರೋಹಿತ್ ಶರ್ಮ ರವರ ಕುರಿತಂತೆ ಬರೆಯುತ್ತ ಸಿರಾಜ್ ರವರು ಆಟಗಾರರ ಮನಸ್ಥಿತಿಯನ್ನು ರೋಹಿತ್ ಶರ್ಮಾ ರವರು ಚೆನ್ನಾಗಿ ಅರಿತುಕೊಳ್ಳುತ್ತಾರೆ ಹೀಗಾಗಿ ಒತ್ತಡದಲ್ಲಿಯೂ ಕೂಡ ಬೇರೆ ಯೋಜನೆಯನ್ನು ರೂಪಿಸಿ ಆಟಗಾರರು ಒತ್ತಡದಿಂದ ಹೊರಬರುವಂತೆ ಸಹಾಯ ಮಾಡುತ್ತಾರೆ ನೀವು ಒಬ್ಬ ಅತ್ಯುತ್ತಮ ನಾಯಕ ಎಂಬುದಾಗಿ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ. ಇದರಿಂದ ಕುಪಿತಗೊಂಡಿರುವ ವಿರಾಟ್ ಕೊಹ್ಲಿ ಅಭಿಮಾನಿಗಳು ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದಕ್ಕಾಗಿ ರೋಹಿತ್ ಶರ್ಮಾ ರವರಿಗೆ ಬಕೆಟ್ ಹಿಡಿಯುತ್ತಿದ್ದೀರ ಎಂಬುದಾಗಿ ಟೀಕಿಸಿದ್ದಾರೆ. ಇದರ ಕುರಿತಂತೆ ನಿಮ್ಮ ಅಭಿಪ್ರಾಯ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.