ಆಸಿಡ್ ಹಾಕಿ ತಪ್ಪಿಸಿಕೊಂಡು ಈಗ ಕಂಬಿ ಎಣಿಸುತ್ತಿರುವ ನಾಗೇಶ್ ನಿಂದ ಹೊಸ ಅವತಾರ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಳಿದ್ದೇನು ಗೊತ್ತೇ??

ಆಸಿಡ್ ಹಾಕಿ ತಪ್ಪಿಸಿಕೊಂಡು ಈಗ ಕಂಬಿ ಎಣಿಸುತ್ತಿರುವ ನಾಗೇಶ್ ನಿಂದ ಹೊಸ ಅವತಾರ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಒಂದು ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹೌದು ಗೆಳೆಯರೇ ತಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕಾಗಿ ಆಸಿ’ಡ್ ನಾಗೇಶ್ ಎನ್ನುವಾತ ಪ್ರೀತಿಸಿದ ಹುಡುಗಿಗೆ ಆಸಿ’ಡ್ ಎರಚಿ ಪೊಲೀಸರ ಗುಂಡೇ’ಟಿಗೆ ಕಾಲನ್ನು ಊನ ಮಾಡಿಕೊಂಡು ಈಗ ಪೊಲೀಸರ ಕಸ್ಟಡಿಯಲ್ಲಿ ಬಿದ್ದಿದ್ದಾನೆ. ಈ ಕುರಿತಂತೆ ಇತ್ತೀಚೆಗಷ್ಟೇ ಪೋಲಿಸರಿಗೆ ಆಸಿ’ಡ್ ನಾಗೇಶ್ ತನ್ನ ಪರಿಸ್ಥಿತಿಯ ಕುರಿತಂತೆ ಕೆಲವೊಂದು ಮಾತುಗಳನ್ನಾಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಆ ಹುಡುಗಿಗೆ ಆಸಿ’ಡ್ ಎರಚುವ ಮೂಲಕ ನಾನು ನನ್ನ ಜೀವನದಲ್ಲಿ ಮಾಡಬಾರದಂತಹ ದೊಡ್ಡ ತಪ್ಪನ್ನು ಮಾಡಿದ್ದೇನೆ ಎಂಬುದಾಗಿ ಪೊಲೀಸರ ಎದುರು ಕಣ್ಣೀರು ಹಾಕಿದ್ದಾರೆ.

ಅದಕ್ಕಾಗಿ ಯಾವ ಶಿಕ್ಷೆಯನ್ನು ನೀಡಿದರೂ ಕೂಡ ನನಗೆ ಕಡಿಮೆ ಎಂಬುದಾಗಿ ಹೇಳಿದ್ದಾನೆ. ನೀವು ಕಾಲಿಗೆ ಗುಂ’ಡು ಹಾರಿಸುವ ಬದಲು ನನ್ನ ಎದೆಗೆ ಗುಂ’ಡು ಹಾರಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದಾಗಿ ಕೂಡ ಕಣ್ಣೀರು ಹಾಕುವ ಮೂಲಕ ಪೊಲೀಸರ ಕಾಲಿಗೆ ಬಿದ್ದಿದ್ದಾನೆ. ನಾನು ಆ ಹುಡುಗಿಯನ್ನು ಕಾಲೇಜು ದಿನಗಳಿಂದಲೂ ಕೂಡ ಪ್ರೀತಿಸುತ್ತಿದ್ದೆ. ಅವಳಿಗಾಗಿ ಅವಳ ಹಿಂದೆ ಪ್ರತಿದಿನ ಸುತ್ತಾಡುತ್ತಿದ್ದೆ ಅವಳ ಮೇಲೆ ಕಣ್ಣು ಹಾಕಿದವರಿಗೆಲ್ಲ ವಾರ್ನಿಂಗ್ ನೀಡುತ್ತಿದೆ ಆದರೆ ಯಾವಾಗ ಅವಳು ನನ್ನನ್ನು ಪ್ರೀತಿಸುತ್ತಿಲ್ಲ ಕೇವಲ ನಾನು ಮಾತ್ರ ಪ್ರೀತಿಸುತ್ತಿದ್ದೇನೆ ಎಂಬುದಾಗಿ ಗೊತ್ತಾಯಿತೋ ಅಂದಿನಿಂದಲೂ ಕೂಡ ನಾನು ಎಣ್ಣೆಗೆ ದಾಸನಾಗಿ ಇದ್ದೇನೆ ಎಂಬುದಾಗಿ ದುಃಖವನ್ನು ತೋಡಿಕೊಂಡಿದ್ದಾನೆ.

ಈಗ ಪೊಲೀಸರೆದುರು ಹೊಸ ಕ್ಯಾತೆ ತೆಗೆದಿರುವ ನಾಗೇಶ ಆ’ಸಿಡ್ ದಾಳಿಗೆ ಒಳಗಾಗಿರುವ ಆಕೆಯನ್ನು ನಾನು ಮದುವೆಯಾಗಲು ಸಿದ್ದನಾಗಿದ್ದೇನೆ ಅವಳು ಹಾಗೂ ಮನೆಯವರು ಒಪ್ಪಿದರೆ ಮಾತ್ರ ನಾನು ಈ ಮದುವೆಯಾಗಲು ಸಿದ್ಧ ಎಂಬುದಾಗಿ ಹೇಳಿಕೊಂಡಿದ್ದಾನೆ. ಇದೇ ನನ್ನ ತಪ್ಪಿಗೆ ಪ್ರಯಶ್ಚಿತ ಹಾಗೂ ಈ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಲು ನನಗೆ ಒಂದು ಅವಕಾಶ ಎಂಬುದಾಗಿ ಹೇಳಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.