ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜಿಯೋ ಹಾಗೂ ಏರ್ಟೆಲ್ ಎರಡು ಪರಿಚಯ ಮಾಡಿರುವ 666 ರೂಪಾಯಿಯ ಯೋಜನೆಯಲ್ಲಿ ಬೆಸ್ಟ್ ಯಾವುದು ಗೊತ್ತೆ?? ಯಾವುದರಲ್ಲಿ ಹೆಚ್ಚು ಲಾಭ ಗೊತ್ತೇ??

242

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಪ್ರಸ್ತುತ ವಿದ್ಯಮಾನವನ್ನು ಗಮನಿಸುವುದಾದರೆ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ತಮ್ಮ ಹಿಡಿತವನ್ನು ಸಾಧಿಸಿವೆ ಎಂದರೆ ತಪ್ಪಾಗಲಾರದು. ಹೌದು ಗಳೆಯರೇ ಹಲವಾರು ಜನಪ್ರಿಯ ಯೋಜನೆಗಳ ಮೂಲಕ ಈ ಎರಡು ಸಂಸ್ಥೆಗಳು ಕೂಡ ಭಾರತೀಯ ಟೆಲಿಕಾಂ ಕ್ಷೇತ್ರದ ಬಹುತೇಕ ಎಲ್ಲಾ ಗ್ರಾಹಕರನ್ನು ಕೂಡ ತಮ್ಮ ಕಡೆಗೆ ಸೆಳೆದುಕೊಂಡಿವೆ.

ಇವೆರಡು ಸಂಸ್ಥೆಗಳು ಕೂಡ ಈಗಾಗಲೇ 666 ರೂಪಾಯಿಗಳ ಪ್ರಿಪೇರ್ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಒಂದೇ ಪ್ರೈಸ್ ನಲ್ಲಿರುವ ಈ ರಿಚಾರ್ಜ್ ನ ಲಾಭ ಯಾವ ಸಿಮ್ ನಲ್ಲಿ ಹೇಗಿದೆ ಎಂಬುದು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಏರ್ಟೆಲ್ ಸಂಸ್ಥೆಯಲ್ಲಿ ಗಮನಿಸುವುದಾದರೆ 666 ರೂಪಾಯಿ ರೀಚಾರ್ಜ್ ನಲ್ಲಿ ಏನೆಲ್ಲ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ 666 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನಲ್ಲಿ ಏರ್ಟೆಲ್ ನಲ್ಲಿ 77 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಪ್ರತಿದಿನ 1.5 ಜಿಬಿ ಡೇಟಾ ಇಂಟರ್ನೆಟ್ ಸಿಗಲಿದೆ. 100 ಉಚಿತ ಮೆಸೇಜ್ ಹಾಗೂ ಅನ್ಲಿಮಿಟೆಡ್ ಕರೆಗಳು ಕೂಡ ಉಚಿತವಾಗಿ ದೊರೆಯಲಿದೆ. ಒಟ್ಟಾರೆಯಾಗಿ ವ್ಯಾಲಿಡಿಟಿ ಒಳಗಡೆ 126gb ಇಂಟರ್ನೆಟ್ ಅನ್ನು ನೀವು ಪಡೆಯಲಿದ್ದೀರಿ. ಏರ್ಟೆಲ್ ನ ಬಹುತೇಕ ಎಲ್ಲಾ ಅಪ್ಲಿಕೇಶನ್ಗಳಿಗೆ ಕೂಡ ಉಚಿತ ಚಂದಾದಾರಿಕೆ ಪಡೆಯಲಿದ್ದೀರಿ ಮಾತ್ರವಲ್ಲದೆ ವಿಂಕ್ ಮ್ಯೂಸಿಕ್ ಫಾಸ್ಟ್ಯಾಗ್ ಕ್ಯಾಶ್ಬ್ಯಾಕ್ ಹಾಗೂ ಉಚಿತ ಹಲೋ ಟ್ಯೂನ್ ಕೂಡ ದೊರೆಯಲಿವೆ.

ಇನ್ನು ಇದೆ 666 ರೂಪಾಯಿಗಳು ರಿಚಾರ್ಜ್ ಪ್ಲಾನ್ ನಲ್ಲಿ ಜಿಯೋ ಸಿಮ್ ನಲ್ಲಿ ಏನೇನು ಸಿಗುತ್ತದೆ ಎಂಬುದನ್ನು ನೋಡೋಣ. ದೈನಂದಿನ 1.5 ಜಿಬಿ ಇಂಟರ್ನೆಟ್ ಡೇಟ್ ಆದಂತೆ 84 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇಲ್ಲಿ ಕೂಡ ದಿನಕ್ಕೆ 100 ಮೆಸೇಜುಗಳು ಹಾಗೂ ಅನ್ಲಿಮಿಟೆಡ್ ಕರೆಗಳು ಉಚಿತವಾಗಿ ಸಿಗಲಿದೆ. ಇನ್ನುಳಿದಂತೆ ಜಿಯೋ ಅಪ್ಲಿಕೇಶನ್ ಗಳು ಉಚಿತ ಚಂದಾದಾರಿಕೆ ಕೂಡ ಸಿಗಲಿದೆ. ಇವೆರಡೂ ಸಂಸ್ಥೆಗಳಲ್ಲಿ 666 ರೂಪಾಯಿಗಳ ರಿಚಾರ್ಜ್ ಪ್ಲಾನ್ ಯಾವ ಸಿಮ್ ನಲ್ಲಿ ಅತ್ಯಂತ ಲಾಭಕಾರಿ ಆಗಿದೆ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.