ಅಸಲಿ ಸವಾಲು ಈಗ ಶುರು; ಕೆಎಲ್ ರಾಹುಲ್ ಹಾಗೂ ದ್ರಾವಿಡ್ ರವರಿಗೆ ಒಂದಲ್ಲ ಎರಡಲ್ಲ ಮೂರು ಸವಾಲುಗಳು, ಯಾವ್ಯಾವು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಐಪಿಎಲ್ ಮುಗಿದಿದ್ದು ಹಲವಾರು ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಇನ್ನು ಜೂನ್ 9 ರಿಂದ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಶಮಿ ರವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಕೆಎಲ್ ರಾಹುಲ್ ರವರು ಮುನ್ನಡೆಸಲಿದ್ದಾರೆ.

ಕನ್ನಡಿಗ ರಾಹುಲ್ ದ್ರಾವಿಡ್ ಅವರು ತಂಡದಲ್ಲಿ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದು ತಂಡದ ನಾಯಕ ಕೂಡ ಕನ್ನಡಿಗನೆ ಆಗಿದ್ದು ಇಬ್ಬರು ಕನ್ನಡಿಗರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಯಾವರೀತಿಯಲ್ಲಿ ವಿಜಯದ ಕಡೆಗೆ ಮುನ್ನಡೆಸಲಿದ್ದಾರೆ ಎಂಬುದು ಕುತೂಹಲಕರವಾಗಿದೆ. ಈಗ ಭಾರತೀಯ ಕ್ರಿಕೆಟ್ ತಂಡವನ್ನು ಗಮನಿಸುವುದಾದರೆ ಹಲವಾರು ಅನುಭವಿ ಆಟಗಾರರು ತಂಡದಿಂದ ವಿಶ್ರಾಂತಿಯನ್ನು ಪಡೆದಿದ್ದು ಹಾರ್ದಿಕ್ ಪಾಂಡೆ ಹಾಗೂ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಮರು ಪ್ರವೇಶ ಪಡೆದುಕೊಂಡಿದ್ದಾರೆ. ಈ ಬಾರಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯುವ ಆಟಗಾರರೇ ತುಂಬಿಕೊಂಡಿದ್ದು ಕಪ್ತಾನ ಕೆಎಲ್ ರಾಹುಲ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರಿಗೆ 3 ಸಮಸ್ಯೆಗಳು ಎದುರಾಗಿವೆ.

ಮೊದಲನೇದಾಗಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕದ ಕುರಿತಂತೆ ಗೊಂದಲ. ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಆಟವಾಗಿರುವ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡದಲ್ಲಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಈ ಕ್ರಮಾಂಕಕ್ಕೆ ಸಾಕಷ್ಟು ಪೈಪೋಟಿ ಇದ್ದು ಹಾರ್ದಿಕ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದು ಗೊಂದಲವಾಗಿದೆ. ಎರಡನೆಯದಾಗಿ ಕೆಎಲ್ ರಾಹುಲ್ ರವರ ಜೊತೆಗೆ ಋತುರಾಜ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಇವರಿಬ್ಬರಲ್ಲಿ ಯಾರು ಓಪನಿಂಗ್ ಮಾಡುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಮೂರನೇದಾಗಿ ಬೌಲಿಂಗ್ ಲೈನ್ ಅಪ್ ಅನ್ನು ಡಿಸೈಡ್ ಮಾಡುವುದು. ಚಹಲ್ ಹಾಗೂ ಕುಲದೀಪ್ ಯಾದವ್ ಇಬ್ಬರು ಸ್ಪಿನ್ ಬೌಲರ್ ಗಳಾಗಿ ತಂಡದಲ್ಲಿ ಕಾರ್ಯನಿರ್ವಹಿಸಿದರೆ, ವೇಗಿಗಳ ಲಿಸ್ಟಿನಲ್ಲಿ ಅರ್ಷದೀಪ್ ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್ ಆವೇಶ್ ಖಾನ್ ಉಮ್ರಾನ್ ಮಲಿಕ್ ಕೂಡ ಆಯ್ಕೆಯಾಗಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಐಪಿಎಲ್ ನಲ್ಲಿ ಅಷ್ಟೊಂದು ಲಯದಲ್ಲಿ ಇರಲಿಲ್ಲ. ಹೀಗಾಗಿ ತಂಡದಲ್ಲಿ ಅಂದರೆ ಪ್ಲೇಯಿಂಗ್ 11ರಲ್ಲಿ ಯಾರನ್ನು ಆಡಿಸ ಬಹುದು ಎನ್ನುವ ಗೊಂದಲವು ಕೂಡ ಇದೆ. ನಿಮ್ಮ ಪ್ರಕಾರ ಯಾರನ್ನು ಆಡಿಸಬಹುದು ಎಂಬ ಸಲಹೆಯನ್ನು ಕಾಮೆಂಟ್ ಮಾಡಿ ತಿಳಿಸಿ.