ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಿಯಾದರೂ ಸರಿ, ಆಲ್-ರೌಂಡರ್ ಮೇಲೆ ಕಣ್ಣಿಟ್ಟ ಆರ್ಸಿಬಿ. ಈತ ಬಂದರೆ ಕಪ್ ಅಂತೂ ನಮ್ಮದೇ. ಯಾರು ಗೊತ್ತೇ ಆ ಸ್ಟಾರ್ ಆಲ್-ರೌಂಡರ್?

12,282

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೆ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಹಂತಕ್ಕೆ ತೇರ್ಗಡೆ ಆಗಿಲ್ಲ ನಿಜ ಆದರೆ ಬೇರೆ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮಾಧಾನಕರ ಹಾಗೂ ಸ್ಪರ್ಧಾತ್ಮಕ ಆಟವನ್ನಾಡಿದೆ ಎಂದು ಹೇಳಬಹುದಾಗಿದೆ. ಆದರೂ ಕೂಡ ಕೆಲವೊಂದು ತಪ್ಪುಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕ್ವಾಲಿಫೈಯರ್ 2 ಹಂತದಿಂದಲೇ ನಿರ್ಗಮಿಸಬೇಕಾಯಿತು ಎನ್ನುವುದಂತೂ ಸುಳ್ಳಲ್ಲ.

ಇನ್ನು ಸದ್ಯಕ್ಕೆ ಈಗಾಗಲೇ ಮುಂದಿನ ಐಪಿಎಲ್ ನಲ್ಲಿ ಯಾರು ಹೊಸ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ ಹಾಗೂ ಯಾರು ತಂಡವನ್ನು ಬಿಟ್ಟು ಹೋಗಲಿದ್ದಾರೆ ಎಂಬುದಾಗಿ ಚರ್ಚೆಗಳು ಪ್ರಾರಂಭವಾಗಲು ಶುರುವಾಗಿದೆ. ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿ ಕೂಡ ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲಂತಹ ಆಲ್-ರೌಂಡರ್ ಆಟಗಾರನ ಅಗತ್ಯವಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ರವರು ಆಲ್-ರೌಂಡರ್ ಆಟಗಾರರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ನಿಜ.

ಆದರೆ ಅವರಿಗಿಂತಲೂ ಕೂಡ ಆಲ್-ರೌಂಡರ್ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲಂತಹ ಆಟಗಾರನನ್ನು ಆರ್ಸಿಬಿ ತಂಡ ಮುಂದಿನ ಹರಾಜಿನಲ್ಲಿ ಖರೀದಿಸಬೇಕಾಗಿದೆ. ಹೀಗಾಗಿ ಇಂಗ್ಲೆಂಡ್ ಮೂಲದ ಈ ಒಬ್ಬ ಆಟಗಾರ ಈಗ ಎಲ್ಲರ ಹಾಟ್ ಫೇವರಿಟ್ ಆಗಿದ್ದಾರೆ. ಹೌದು ಗೆಳೆಯರೇ ಈ ಬಾರಿ ಹಲವಾರು ಸಮಸ್ಯೆಗಳ ಕಾರಣಗಳನ್ನು ನೀಡಿ ಹರಾಜಿನಿಂದ ದೂರವುಳಿದಿದ್ದ ಬೆನ್ ಸ್ಟೋಕ್ಸ್ ನನ್ನು ಮುಂದಿನ ಬಾರಿ ಹರಾಜಿನಲ್ಲಿ ಸಾಧಿಸಲು ಆರ್ಸಿಬಿ ತಂಡ ಉತ್ಸುಕವಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗದಲ್ಲಿ ಈಗಾಗಲೇ ಪುಣೆ ಹಾಗೂ ರಾಜಸ್ಥಾನ ತಂಡದ ಪರವಾಗಿ ಅಬ್ಬರಿಸಿ ರುವ ಬೆನ್ ಸ್ಟೋಕ್ಸ್ ಆರ್ಸಿಬಿಗೆ ಬಂದರೆ ಖಂಡಿತವಾಗಿ ಆರ್ಸಿಬಿ ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. 15 ಕೋಟಿ ರೂಪಾಯಿ ಖರೀದಿಸಿದರು ಕೂಡ ಬೆನ್ ಸ್ಟೋಕ್ಸ್ ಅತ್ಯುತ್ತಮ ಮೌಲ್ಯವನ್ನು ತಂಡಕ್ಕೆ ನೀಡಲಿದ್ದಾರೆ. ಇವರ ಬದಲಿಗೆ ಹಸರಂಗ ಅಥವಾ ಜೋಶ್ ಹೆಝಲ್ ವುಡ್ ರವರನ್ನು ತಂಡದಿಂದ ಹೊರಹಾಕಲು ಆರ್ಸಿಬಿ ಯೋಚಿಸಬಹುದು.