ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೂರು ವರ್ಷಗಳಿಂದ ರೋಹಿತ್, ಕೊಹ್ಲಿ ತಿರಸ್ಕಾರ ಮಾಡಿದ್ದ ಆಟಗಾರನಿಗೆ ಮಣೆ ಹಾಕಿದ ರಾಹುಲ್. ಯಾರು ಗೊತ್ತಾ ಆ ಅತ್ಯದ್ಭುತ ಆಟಗಾರ??

14,341

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಐಪಿಎಲ್ ಮುಗಿದಿದ್ದು ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಗೆ ಭಾರತೀಯ ಕ್ರಿಕೆಟ್ ತಂಡ ಸಜ್ಜಾಗುತ್ತಿದೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು ಜೂನ್ 9 ರಿಂದ ಪ್ರಾರಂಭವಾಗಲಿದೆ. ಇನ್ನು ಈಗಾಗಲೇ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿರುವಂತೆ ಭಾರತೀಯ ಕ್ರಿಕೆಟ್ ತಂಡವನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮ್ಯಾಟ್ಗಳ ನಾಯಕನಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಶಮಿ ಸೇರಿದಂತೆ ಹಲವಾರು ಅನುಭವಿ ಕ್ರಿಕೆಟಿಗರಿಗೆ ಈ ಸರಣಿಯಿಂದ ವಿಶ್ರಾಂತಿಯನ್ನು ನೀಡಲಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ನಲ್ಲಿ ಮಿಂಚಿರುವ ಹಲವಾರು ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ. ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾದ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲು ಕೂಡ ಇಂತಹ ಸರಣಿಗಳು ಅವಶ್ಯಕವಾಗಿದೆ ಎಂಬುದಾಗಿ ತಿಳಿಯಬಹುದಾಗಿದೆ. ಇನ್ನು ಮೂರು ವರ್ಷಗಳಿಂದ ಐಪಿಎಲ್ ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು ಕೂಡ ರೋಹಿತ್ ಶರ್ಮರವರ ತಂಡದಲ್ಲಿ ಈ ಒಬ್ಬ ಆಟಗಾರ ಆಯ್ಕೆಯಾಗಿರಲಿಲ್ಲ.

ಆದರೆ ಕೆಎಲ್ ರಾಹುಲ್ ರವರು ಟೀಮ್ ಇಂಡಿಯಾದ ನಾಯಕ ಆಗುತ್ತಿದ್ದಂತೆಯೇ ಈ ಆಟಗಾರ ಈಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಹೌದು ಗೆಳೆಯರೇ ಆಟಗಾರ ಮತ್ತಿನ್ಯಾರು ಅಲ್ಲ ಪಂಜಾಬ್ ಕಿಂಗ್ಸ್ ತಂಡದ ಅರ್ಷದೀಪ್ ಸಿಂಗ್. ಹೌದು ಗೆಳೆಯರೆ ಪಂಜಾಬ್ ಕಿಂಗ್ ತಂಡದ ಪರವಾಗಿ ಅದರಲ್ಲೂ ಕೊನೆಯ ಓವರ್ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಅರ್ಷದೀಪ್ ಸಿಂಗ್ ಈಗಾಗಲೇ ತಮ್ಮನ್ನು ತಾವು ಐಪಿಎಲ್ನಲ್ಲಿ ಸಾಬೀತುಪಡಿಸಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ರವರ ಬದಲಿಗೆ ಕೊನೆಯ ಓವರ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಇವರು ನೆರವಾಗಲಿದ್ದಾರೆ ಎಂಬುದಾಗಿ ಅಭಿಪ್ರಾಯಪಡಲಾಗಿದೆ. ಈ ಆಟಗಾರನ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

Get real time updates directly on you device, subscribe now.