ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಕಟ್ಟಿದ ವಾಸಿಂ ಜಾಫರ್. ರೋಹಿತ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೆ??

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಕಟ್ಟಿದ ವಾಸಿಂ ಜಾಫರ್. ರೋಹಿತ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿ ಐಪಿಎಲ್ ಮುಗಿದಿದ್ದು ಗುಜರಾತ್ ಟೈಟನ್ಸ್ ತಂಡ ಮೊದಲನೇ ಸ್ಥಾನವನ್ನು ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 3 ಹಾಗೂ 4ನೇ ಸ್ಥಾನಗಳಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ತಂಡಗಳು ಕಾಣಿಸಿಕೊಳ್ಳುತ್ತಿವೆ. ನೀವು ಗಮನಿಸಿರಬಹುದು ಐಪಿಎಲ್ ಮುಗಿಯುತ್ತಿದ್ದಂತೆಯೇ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಸಾರ್ವಕಾಲಿಕ ಮೆಚ್ಚಿನ ಐಪಿಎಲ್ ತಂಡವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಿಸುತ್ತಿದ್ದಾರೆ. ಅವರ ಪಟ್ಟಿಗೆ ಈಗ ವಾಸಿಂ ಜಾಫರ್ ಕೂಡ ಸೇರಿಕೊಂಡಿದ್ದಾರೆ.

ಹಾಗಿದ್ದರೆ ಇವರು ಹೆಸರಿಸಿರುವ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡದ ಸದಸ್ಯರು ಯಾರು ಎಂಬುದನ್ನು ನೋಡೋಣ ಬನ್ನಿ. ಆರಂಭಿಕ ಆಟಗಾರರಾಗಿ ಕ್ರಿಸ್ ಗೇಲ್ ಹಾಗೂ ಕೆ ಎಲ್ ರಾಹುಲ್ ರವರನ್ನು ಹೆಸರಿಸಿದ್ದಾರೆ. ಗೇಲ್ ರವರ ಕುರಿತಂತೆ ಹೇಳೋದೆ ಬೇಡ ಇನ್ನು ಕೆಎಲ್ ರಾಹುಲ್ ಅವರು ಕಳೆದ ಕೆಲವು ವರ್ಷಗಳಿಂದ ಸತತವಾಗಿ ಸಮತೋಲಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ನಂತರ ಕಿಂಗ್ ಕೊಹ್ಲಿ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಹಾಗೂ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ರವರನ್ನು ಆಯ್ಕೆಮಾಡಿದ್ದು ಧೋನಿ ಅವರನ್ನೇ ತಂಡದ ಕಪ್ತಾನನನ್ನಾಗಿ ಕೂಡ ಆಯ್ಕೆ ಮಾಡಿದ್ದಾರೆ.

ಇನ್ನು ಈ ಸಾಲಿನಲ್ಲಿ ರೋಹಿತ್ ಶರ್ಮ ರವರನ್ನು ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿಲ್ಲ. ಆಲ್ರೌಂಡರ್ ಗಳಾಗಿರುವ ಆಂದ್ರೆ ರಸೆಲ್ ಹಾಗೂ ಹಾರ್ದಿಕ್ ಪಾಂಡ್ಯ ರವರನ್ನು ಕೂಡ ಆಯ್ಕೆ ಮಾಡಿದ್ದಾರೆ. ರಶೀದ್ ಖಾನ್ ಜಸ್ಪ್ರೀತ್ ಬುಮ್ರಾ ಹಾಗೂ ಲಸಿತ್ ಮಲಿಂಗ ರವರನ್ನು ಕೂಡ ಪ್ರಮುಖ ಬೌಲರ್ ಗಳಾಗಿ ಆಯ್ಕೆ ಮಾಡಿದ್ದಾರೆ. ಅಶ್ವಿನ್ ಅಥವಾ ಚಹಾಲ್ ನಡುವೆ ಎರಡನೇ ಸ್ಪಿನ್ನರ್ ಆಗಿ ಒಬ್ಬರನ್ನು ಆಯ್ಕೆ ಮಾಡುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಒಟ್ಟಾರೆಯಾಗಿ ವಾಸಿಂ ಜಾಫರ್ ಅವರ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ನೋಡುವುದಾದರೆ ಹೀಗಿದೆ, ಗೇಲ್ ರಾಹುಲ್ ವಿರಾಟ್ ಕೊಹ್ಲಿ ಮಹೇಂದ್ರಸಿಂಗ್ ಧೋನಿ ( ನಾಯಕ ಹಾಗೂ ವಿಕೆಟ್ ಕೀಪರ್ ) ಆಂಡ್ರೆ ರಸೆಲ್ ಹಾರ್ದಿಕ್ ಪಾಂಡ್ಯ ರಶೀದ್ ಖಾನ್ ಬೂಮ್ರಾ ಮಲಿಂಗ ಚಹಲ್ / ಅಶ್ವಿನ್. ವಾಸಿಂ ಜಾಫರ್ ರವರ ತಂಡದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಮಿಸ್ ಮಾಡ್ದೆ ಹಂಚಿಕೊಳ್ಳಿ.