ಧಾರಾವಾಹಿಗಳ ಟಾಪ್ 5 ಜೋಡಿಗಳು ಯಾರ್ಯಾರು ಗೊತ್ತಾ?? ಗಟ್ಟಿಮೇಳ, ಕನ್ನಡತಿ ಜೋಡಿಗೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇಂದು ಕನ್ನಡದ ಬೆಳ್ಳಿತೆರೆ ಯಂತೆ ಕಿರುತೆರೆಯೂ ಕೂಡ ಸಾಕಷ್ಟು ಪ್ರಸಿದ್ಧಿ ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳು ಬಹಳ ವರ್ಣರಂಜಿತವಾಗಿ ಹಾಗೂ ಬಹಳ ಶ್ರಮವಹಿಸಿ ನಿರ್ಮಾಣ ಮಾಡಲಾಗುತ್ತಿದೆ. ಒಂದು ಸಿನಿಮಾ ಮಾಡಲು ಬೇಕಾಗಿದ್ದ ಶ್ರಮಕ್ಕಿಂತಲೂ ಹೆಚ್ಚು ಶ್ರಮವಹಿಸಿ ಧಾರವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರೆ ನೀವು ನಂಬಲೇಬೇಕು.

ಕೆಲವು ಧಾರವಾಹಿಗಳ ಬಜೆಟ್ ಹೋಲಿಕೆ ಮಾಡುವುದಾದರೆ ಸಿನಿಮಾ ಗಳಿಗಿಂತಲೂ ಹೆಚ್ಚಿನ ಬಜೆಟ್ ಹಾಕಲಾಗುತ್ತದೆ. ಇದು ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಅದೇ ಕಾರಣಕ್ಕಾಗಿ ಇಂದು ಬಹುತೇಕ ಧಾರವಾಹಿಗಳು ಅತ್ಯುತ್ತಮ ಟಿಆರ್ಪಿ ಪಡೆದುಕೊಂಡು ಟಾಪ್ ಸ್ಥಾನ ಪಡೆಯಲು ಬಾರಿ ಪೈಪೋಟಿ ನಡೆಸುತ್ತಿವೆ. ಹಾಕಿದ ಬಜೆಟ್ ಗಿಂತಲೂ ಹೆಚ್ಚಿನ ಲಾಭವನ್ನು ಬಹಳ ಸುಲಭವಾಗಿ ಧಾರವಾಹಿಗಳು ಗಳಿಸುತ್ತಿವೆ. ಹೀಗಿರುವಾಗ ಸಾಮಾನ್ಯವಾಗಿ ಧಾರವಾಹಿಗಳ ನಡುವೆ ಪೈಪೋಟಿ ದಿನೇ ದಿನೇ ಹೆಚ್ಚಾಗುತ್ತಿದೆ.

ಇನ್ನು ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿರುವ ಪಾತ್ರಧಾರಿಗಳು ಕೂಡ ದಿನೇ ದಿನೇ ಫೇಮಸ್ ಹಾಕುತ್ತಿದ್ದಾರೆ. ಅದೇ ಕಾರಣಕ್ಕಾಗಿ ನಾವು ಇಂದು ಕನ್ನಡದ ಧಾರವಾಹಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾರಿ ಚಾಪು ಮೂಡಿಸಿದಂತಹ top5 ಧಾರವಾಹಿ ಜೋಡಿಗಳನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಲಿಸ್ಟ್ ಅನ್ನು ನೋಡಿ ನಿಮ್ಮ ನೆಚ್ಚಿನ ಧಾರವಾಹಿಯ ಜೋಡಿ ಯಾವುದು, ಹಾಗೂ ನಿಮ್ಮ ಟಾಪ್ 5 ಜೋಡಿಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಟಾಪ್ 5: ಸ್ನೇಹಿತರೇ ಕಲರ್ಸ್ ಕನ್ನಡ ಧಾರವಾಹಿಯಲ್ಲಿ 8:30 ಕ್ಕೆ ಪ್ರಸಾರವಾಗುತ್ತಿರುವ ಗಿಣಿರಾಮ ಧಾರವಾಹಿಯ ಜೋಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದಕ್ಕೆಲ್ಲಾ ಕಾರಣವೆಂದರೇ ನಟ ಹಾಗೂ ನಟಿಯ ನಡುವೆ ನಡೆಯುವ ಕೋಳಿ ಜಗಳ. ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ನಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ಇಬ್ಬರು ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತ ಒಬ್ಬರಿಗೊಬ್ಬರು ಟಕ್ಕರ್ ನೀಡುತ್ತಾ ಧಾರವಾಹಿಯಲ್ಲಿ ಅದ್ಭುತ ನಟನೆ ಮಾಡುವ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಪ್ 4: ಸ್ನೇಹಿತರೇ ಕಲರ್ಸ್ ಕನ್ನಡದ ಮತ್ತೊಂದು ಧಾರವಾಹಿ ಇರುವ ನಮ್ಮನೆ ಯುವರಾಣಿ ಧಾರಾವಾಹಿ ಇತ್ತೀಚೆಗೆ ಟಿಆರ್ಪಿ ಲಿಸ್ಟಿನಲ್ಲಿ ಕೂಡ ಉತ್ತಮ ಸಾಧನೆ ಮಾಡುತ್ತಿದೆ, ಧಾರವಾಹಿಯಲ್ಲಿ ಅನಿಕೇತ್ ಹಾಗೂ ಮೀರಾ ಪಾತ್ರಧಾರಿಗಳಾದ ದೀಪಕ್ ಗೌಡ ಹಾಗೂ ಅಂಕಿತ ರವರ ಜೋಡಿಯು ಅದ್ಭುತ ನಟನೆಯ ಮೂಲಕ ಜನರ ಮನ ಗೆಲ್ಲುವುದರಲ್ಲಿ ಈ ಜೋಡಿ ಯಶಸ್ವಿಯಾಗಿದೆ.

ಟಾಪ್ 3: ಇತ್ತೀಚಿನ ದಿನಗಳಲ್ಲಿ ಯಾವ ಧಾರಾವಾಹಿಯು ಸಾಧಿಸಲಾಗದ ಟಿಆರ್ಪಿ ಸಾಧಿಸಿ ಇತಿಹಾಸ ಸೃಷ್ಟಿಸಿರುವ ಜೊತೆ ಜೊತೆಯಲಿ ಧಾರವಾಹಿ ಜೋಡಿ ಕೇವಲ ಧಾರವಾಹಿಯಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಭಾರಿ ಸದ್ದು ಮಾಡುತ್ತದೆ. ಆರ್ಯವರ್ಧನ್ ಹಾಗೂ ಅನು ಸಿರಿಮನೆ ರವರ ನಡುವೆ ನಡೆಯುವ ಪ್ರೇಮ ಕಥೆ ಜನರಿಗೆ ಬಹಳ ಇಷ್ಟವಾಗಿದ್ದು ಈ ಜೋಡಿಯು ಟಾಪ್ ಮೂರನೇ ಸ್ಥಾನದಲ್ಲಿದೆ.

ಟಾಪ್ 2: ಒಬ್ಬ ಸ್ಟಾರ್ ಬಿಸಿನೆಸ್ ಮ್ಯಾನ್ ಮತ್ತೊಬ್ಬರು ಪಕ್ಕಾ ರೌಡಿ ಬೇಬಿ, ಇವರಿಬ್ಬರ ಸಂಬಂಧ ಜಗಳದಿಂದ ಪ್ರಾರಂಭವಾಗಿ ಕೊನೆಗೆ ಇದೀಗ ಪ್ರೀತಿಯ ಬಲೆಯಲ್ಲಿ ಸಿಲುಕಿರುವ ಪ್ರೇಮಿಗಳಾಗಿರುವ ಗಟ್ಟಿಮೇಳ ಧಾರವಾಹಿಯ ಪಾತ್ರಧಾರಿಗಳಾದ ವೇದಾಂತ್ ವಸಿಷ್ಠ ಹಾಗೂ ಅಮೂಲ್ಯ ಅವರ ಜೋಡಿ ಜನರ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದು ಈ ನಮ್ಮ ಲಿಸ್ಟ್ ನಲ್ಲಿ ಟಾಪ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಟಾಪ್ 1: ಕೇಳಿದರೇ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದಂತೂ ಸತ್ಯ ಕನ್ನಡತಿ ಧಾರಾವಾಹಿ ದಿನೇ ದಿನೇ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಅದ್ಭುತವಾಗಿ ಮೂಡಿ ಬರುತ್ತಿದೆ. ಬೇರೆ ಧಾರವಾಹಿಗಳು ಟಿಆರ್ಪಿ ಲಿಸ್ಟ್ ನಲ್ಲಿ ಸಾಧನೆ ಮಾಡುತ್ತಿದ್ದರೂ ಕೂಡ ಕನ್ನಡತಿ ಧಾರಾವಾಹಿ ಪ್ರತಿದಿನವೂ ಏರುತ್ತಿರುವ ರೀತಿಯನ್ನು ನೋಡಿದರೆ ಖಂಡಿತಾ ಕೆಲವೇ ಕೆಲವು ದಿನಗಳಲ್ಲಿ ಟಾಪ್ ಧಾರವಾಹಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಧಾರಾವಾಹಿಯಲ್ಲಿ ನಟನೆ ಮಾಡಿರುವ ರಂಜನಿ ರಾಘವನ್ ಹಾಗೂ ಕಿರಣ ರಾಜ್ ರವರ ನಡುವಿನ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಸೃಷ್ಟಿ ಮಾಡಿದೆ. ಆದಕಾರಣ ಕನ್ನಡತಿ ಧಾರಾವಾಹಿಯ ಈ ಜೋಡಿ ಮೊದಲನೇ ಸ್ಥಾನದಲ್ಲಿದೆ

Post Author: Ravi Yadav