ಪಾತ್ರೆ ಅಥವಾ ಕುಕ್ಕರ್ ಎರಡರಲ್ಲೂ ಅನ್ನವನ್ನು ಉದುರು ಉದುರಾಗಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಹಲವಾರು ಬಾರಿ ಮನೆಯಲ್ಲಿ ಅನ್ನ ಉದುರುದುರಾಗಿ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಅದರಲ್ಲಿಯೂ ಪುಳಿಯೋಗರೆ, ಚಿತ್ರಾನ್ನ ಸೇರಿದಂತೆ ವಿವಿಧ ರೀತಿಯ ಗುಜ್ಜುಗಳಿಗೆ ಅನ್ನವನ್ನು ಸವಿಯಲು ಅನ್ನ ಉದುರುದುರಾಗಿದ್ದರೇ ಬಹಳ ಚೆನ್ನಾಗಿರುತ್ತದೆ. ಆದರೆ ಹೀಗೆ ಅನ್ನವನ್ನು ಉದುರುದುರಾಗಿ ಮಾಡುವುದು ಕಷ್ಟ ಸಾಧ್ಯವೇ ಸರಿ. ಬನ್ನಿ ಹೀಗೆ ಅನ್ನ ಉದುರುದುರಾಗಿ ಹೇಗೆ ಮಾಡುವುದನ್ನು ಹೇಗೆಂದು ನಾವು ಎಂದು ನಿಮಗೆ ತಿಳಿಸಿಕೊಡುತ್ತೇವೆ. ಉದುರು ಉದುರಾಗಿ ಅನ್ನ ಮಾಡುವ ವಿಧಾನಗಳು:

ಮೊದಲನೆಯದು ಪಾತ್ರೆಯಲ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನಿಮಗೆ ಬೇಕಾಗುವಷ್ಟು ಅಳತೆ ಅಕ್ಕಿಯನ್ನು ಹಾಕಿಕೊಳ್ಳಬೇಕು. ನಂತರ ಅಕ್ಕಿಯನ್ನು 2 – 3 ಬಾರಿ ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಅದೇ ಪಾತ್ರೆಗೆ ಅಕ್ಕಿಯನ್ನು ತೆಗೆದುಕೊಂಡ ಅಳತೆಯಲ್ಲಿ1:2 ನೀರನ್ನು ಹಾಕಬೇಕು. (ಅಂದರೆ ಒಂದು ಲೋಟ ಅಕ್ಕಿ ತೆಗೆದುಕೊಂಡರೆ ಎರಡು ಲೋಟ ನೀರು ಅಥವಾ ಒಂದು ಬಟ್ಟಲು ಅಕ್ಕಿಯನ್ನು ತೆಗೆದುಕೊಂಡರೆ ಎರಡು ಬಟ್ಟಲು ನೀರನ್ನು ಹಾಕಬೇಕು) ಸ್ವಲ್ಪ ಉಪ್ಪು, ಅರ್ಧ ಚಮಚದಷ್ಟು ಎಣ್ಣೆಯನ್ನು ಹಾಕಿ ಗ್ಯಾಸ್ ಮೇಲೆ ಇಟ್ಟು ದೊಡ್ಡ ಉರಿಯಲ್ಲಿ ಇಟ್ಟು 4 – 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯದಾಗಿ ಪಾತ್ರೆಯ ಮೇಲೆ ಪ್ಲೇಟನ್ನು ಮುಚ್ಚಿ 2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಂಡರೆ ಉದುರು ಉದುರಾಗಿ ಅನ್ನ ರೆಡಿಯಾಗುತ್ತದೆ.

ಎರಡನೆಯದು ಕುಕ್ಕರ್ ನಲ್ಲಿ ಮಾಡುವ ವಿಧಾನ: ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಬೇಕಾಗುವಷ್ಟು ತೊಳೆದ ಅಕ್ಕಿಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅಕ್ಕಿಯನ್ನು ತೆಗೆದುಕೊಂಡ ಅಳತೆಯಲ್ಲಿ 1:2 ನೀರನ್ನು ಹಾಕಿಕೊಳ್ಳಿ. (ಅಂದರೆ ಒಂದು ಲೋಟ ಅಕ್ಕಿ ತೆಗೆದುಕೊಂಡರೆ ಎರಡು ಲೋಟ ನೀರು ಅಥವಾ ಒಂದು ಬಟ್ಟಲು ಅಕ್ಕಿಯನ್ನು ತೆಗೆದುಕೊಂಡರೆ ಎರಡು ಬಟ್ಟಲು ನೀರನ್ನು ಹಾಕಬೇಕು) ನಂತರ ಇದಕ್ಕೆ ಸ್ವಲ್ಪ ಉಪ್ಪು, ಅರ್ಧ ಚಮಚ ಎಣ್ಣೆಯನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಗ್ಯಾಸ್ ಮೇಲೆ ದೊಡ್ಡ ಉರಿಯಲ್ಲಿ ಇಟ್ಟು ಎರಡು ವಿಷಲ್ ಹಾಕಿಸಿಕೊಂಡರೆ ಉದುರು ಉದುರಾಗಿ ಅನ್ನ ಸಿದ್ಧವಾಗುತ್ತದೆ.

Facebook Comments

Post Author: Ravi Yadav