ಟೂತ್ ಪೇಸ್ಟ್ ಗಳಲ್ಲಿನ ಈ ಗುರುತು ಏನನ್ನು ಸೂಚಿಸುತ್ತದೆ ಗೊತ್ತಾ?? ಇದನ್ನು ನೋಡಿಯೇ ಕೊಳ್ಳಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಪ್ರತಿದಿನ ಟೂತ್ ಪೇಸ್ಟ್ ಬಳಸುತ್ತೇವೆ. ಹಿಂದಿನ ಕಾಲದಲ್ಲಿ ಹಲವಾರು ನೈಸರ್ಗಿಕ ವಸ್ತುಗಳನ್ನು ಬಳಸಿ ನಾವು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿದ್ದೆವು. ಆದರೆ ಇದೀಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಎಲ್ಲರೂ ಕೂಡ ಟೂತ್ ಪೇಸ್ಟ್ ಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಎಲ್ಲರೂ ತಮ್ಮ ಹಲ್ಲುಗಳನ್ನು ಶುಚಿಯಾಗಿಸಲು ವಿವಿಧ ರೀತಿಯ ಟೂತ್ ಪೇಸ್ಟ್ ಬಳಸುತ್ತಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹಲವಾರು ಫ್ಲೇವರ್ ಇರುವ ವಿವಿಧ ರೀತಿಯ ಟೂತ್ ಪೇಸ್ಟ್ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಕೆಲವೊಂದು ಟೂತ್ ಪೇಸ್ಟ್ ಗಳು ನಿಮ್ಮ ಶ್ವಾಸಕ್ಕೆ ತಾಜಾ ಉಲ್ಲಾಸವನ್ನು ನೀಡಿದರೆ, ಮತ್ತಷ್ಟು ಟೂತ್ ಪೇಸ್ಟ್ ಗಳು ಹಳದಿ ಯಾಗಿರುವ ಹಲ್ಲುಗಳನ್ನು ಕೆಲವು ದಿನಗಳಲ್ಲಿ ಬಿಳಿ ಹಲ್ಲು ಗಳಾಗಿ ಮಾರ್ಪಡಿಸುತ್ತವೆ ಎಂದು ಹೇಳಿ ಬಿಡುಗಡೆ ಮಾಡಲಾಗಿದೆ. ಹೀಗೆ ವಿವಿಧ ರೀತಿಯ ಟೂತ್ ಪೇಸ್ಟ್ ಗಳಲ್ಲಿಯೂ ಕೂಡ ಒಂದು ಸರ್ವೇ ಸಾಮಾನ್ಯವಾದ ಅಂಶವಿದೆ. ಆ ಅಂಶ ಏನು ಎಂದರೆ ಟೂತ್ಪೇಸ್ಟ್ ಕೆಳಗಡೆ ಪ್ಯಾಕೆಟ್ ನ ಮೇಲೆ ನಾಲ್ಕು ಬಣ್ಣಗಳ ಗುರುತು ಇರುತ್ತದೆ. ಈ ಗುರುತು ಏನನ್ನು ಸೂಚಿಸುತ್ತದೆ ಎಂದು ಎಂದಾದರೂ ನೀವು ಆಲೋಚನೆ ಮಾಡಿದ್ದೀರಾ?? ಬನ್ನಿ ಈ ಕುರಿತು ನಿಮಗೆ ಇಂದು ಮಾಹಿತಿ ನೀಡುತ್ತೇವೆ.

ಸ್ನೇಹಿತರೆ ಸಾಮಾನ್ಯವಾಗಿ ಟೂತ್ಪೇಸ್ಟ್ ಗಳಲ್ಲಿ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣಗಳ ಮೇಲೆ ಕಾಣುವ ಈ ರೀತಿಯ ನಾಲ್ಕು ಗುರುತುಗಳಲ್ಲಿ ಒಂದು ಗುರುತು ಇರುತ್ತದೆ. ಈ ಗುರುತು ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ನೋಡುವುದಾದರೇ ನಿಮ್ಮ ಟೂಥ್ ಫೇಸ್ ನಾ ಪಾಕೆಟ್ ನಲ್ಲಿ ಹಸಿರು ಗುರುತು ಇದ್ದರೆ ನೀವು ಬಳಸುತ್ತಿರುವ ಟೂತ್ ಪೇಸ್ಟ್ ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ತಯಾರು ಮಾಡಲಾಗಿದೆ ಎಂದರ್ಥ. ಇನ್ನು ನೀಲಿ ಗುರುತು ಇದ್ದರೆ ನೈಸರ್ಗಿಕ ವಸ್ತುಗಳು ಹಾಗೂ ಔಷಧಿಯುಕ್ತ ವಸ್ತುಗಳನ್ನು ಬಳಸಿ ನಿಮ್ಮ ಟೂಥ್ ಪೇಸ್ಟ್ ತಯಾರು ಮಾಡಲಾಗಿದೆ ಎಂದರ್ಥ. ಇನ್ನು ಕೆಂಪು ಗುರುತು ಇದ್ದರೆ ನೀವು ಬಳಸುತ್ತಿರುವ ಟೂಥ್ ಪೇಸ್ಟ್ ನಲ್ಲಿ ನೈಸರ್ಗಿಕ ವಸ್ತುಗಳು ಹಾಗೂ ರಾಸಾಯನಿಕ ವಸ್ತುಗಳು ಮಿಶ್ರಣವಾಗಿದೆ ಎಂದರ್ಥ. ಏನು ನಿಮ್ಮ ಟೂಥ್ ಪೇಸ್ಟ್ ಮೇಲೆ ಕಪ್ಪು ಬಣ್ಣದ ಚುಕ್ಕೆ ಇದ್ದರೆ ನೀವು ಬಳಸುತ್ತಿರುವ ಟೂತ್ಪೇಸ್ಟ್ ಸಂಪೂರ್ಣವಾಗಿ ರಾಸಾಯನಿಕಗಳಿಂದ ಕೂಡಿದೆ ಎಂದು ಅರ್ಥ.

Facebook Comments

Post Author: Ravi Yadav