ಹೊಸ ರೀತಿಯ ಈರುಳ್ಳಿ ರೈಸ್ ಟ್ರೈ ಮಾಡಿ, ಎಲ್ಲರೂ ಇಷ್ಟಪಟ್ಟು ಪ್ಲೇಸ್ ಖಾಲಿ ಮಾಡುವುದು ಪಕ್ಕ. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ವಿಶೇಷ ರೀತಿಯಲ್ಲಿ ನಾವು ಇಂದು ಬೆಳಗಿನ ತಿಂಡಿಗೆ ಅಥವಾ ರಾತ್ರಿಯ ಒಂದು ಹೊತ್ತಿನ ಊಟಕ್ಕೆ ಬಹಳ ಅದ್ಭುತವಾಗಿ ರುಚಿಕರವಾಗಿರುವ ಅಂತಹ ಈರುಳ್ಳಿ ರೈಸ್ ಹೇಗೆ ಮಾಡುವುದು ಎಂಬುದನ್ನು ನಾವು ಹೇಳಿಕೊಡುತ್ತೇವೆ. ನಿಮ್ಮ ಅನುಕೂಲತೆಗಾಗಿ ಯೂಟ್ಯೂಬ್ ವಿಡಿಯೋ ಕೂಡ ಇಲ್ಲಿ ಲಗತ್ತಿಸಲಾಗಿದೆ ನೋಡಿ, ನಿಮ್ಮ ಮನೆಯಲ್ಲಿ ಟ್ರೈ ಮಾಡಿ ರುಚಿ ಹೇಗಿದೆಯೆಂದು ತಿಳಿಸುವುದನ್ನು ಮರೆಯಬೇಡಿ.

ಈರುಳ್ಳಿ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು: ಸ್ವಲ್ಪ ಎಣ್ಣೆ, 1 ಚಮಚ ಜೀರಿಗೆ, ಸ್ವಲ್ಪ ಶುಂಠಿ, ಸ್ವಲ್ಪ ಬೆಳ್ಳುಳ್ಳಿ, 3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, 3 ಹಸಿಮೆಣಸಿನಕಾಯಿ,1 ಚಮಚ ಅಚ್ಚ ಖಾರದ ಪುಡಿ, ಕಾಲು ಚಮಚ ಅರಿಶಿನ ಪುಡಿ, ಅರ್ಧ ಚಮಚ ಕಾಳು ಮೆಣಸಿನ ಪುಡಿ, 2 ಬಟ್ಟಲು ಅನ್ನ, ಅರ್ಧ ಬಟ್ಟಲು ಕೊತ್ತಂಬರಿಸೊಪ್ಪು,1 ಚಮಚ ನಿಂಬೆ ಹಣ್ಣಿನ ರಸ.

ಈರುಳ್ಳಿ ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ 1 ಚಮಚ ಜೀರಿಗೆ, 1 ಚಮಚ ಸಣ್ಣಗೆ ಹಚ್ಚಿದ ಶುಂಠಿ, 1 ಚಮಚ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ಅನ್ನು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ತದನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೂ ಫ್ರೈ ಮಾಡಿಕೊಳ್ಳಿ. ತದನಂತರ ಇದಕ್ಕೆ ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಮತ್ತೆ ಇದಕ್ಕೆ 1 ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಅರಿಶಿನ ಪುಡಿ, ಅರ್ಧ ಚಮಚ ಕಾಳುಮೆಣಸಿನಪುಡಿಯನ್ನು ಹಾಕಿ 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಎರಡು ಬಟ್ಟಲು ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು , ನಿಂಬೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿದರೆ ಈರುಳ್ಳಿ ರೈಸ್ ಸವಿಯಲು ಸಿದ್ಧ

Facebook Comments

Post Author: Ravi Yadav