ತಿಂಡಿ ಮಾಡಲು ಸಮಯವಿಲ್ಲವೇ?? ಕೇವಲ ಐದು ನಿಮಿಷದಲ್ಲಿ ರೆಡಿ ಮಾಡಿ ಮೆಂತ್ಯ ಸೊಪ್ಪಿನ ಅಕ್ಕಿ ರೊಟ್ಟಿ, ಎಲ್ಲರೂ ಇಷ್ಟ ಪಟ್ಟು ತಿಂತಾರೆ. ಹೇಗೆ ಗೊತ್ತೆ??

ತಿಂಡಿ ಮಾಡಲು ಸಮಯವಿಲ್ಲವೇ?? ಕೇವಲ ಐದು ನಿಮಿಷದಲ್ಲಿ ರೆಡಿ ಮಾಡಿ ಮೆಂತ್ಯ ಸೊಪ್ಪಿನ ಅಕ್ಕಿ ರೊಟ್ಟಿ, ಎಲ್ಲರೂ ಇಷ್ಟ ಪಟ್ಟು ತಿಂತಾರೆ. ಹೇಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ದಿನಬೆಳಗಾದರೆ ಯಾವ ತಿಂಡಿ ಮಾಡುವುದು ಎಂದು ದಿನವೂ ಹೆಂಗಸರು ತಲೆಕೆಡಿಸಿಕೊಳ್ಳುತ್ತಾರೆ. ತಿಂಡಿ ರುಚಿಯಾಗಿಯೂ ಇರಬೇಕು ಹಾಗೆಯೇ ಸುಲಭವಾಗಿಯೂ ಇರಬೇಕು. ಅಂಥ ತಿಂಡಿ ಯಾವುದು ಎಂದು ಯೋಚಿಸುತ್ತಿದ್ದರೆ ಈ ರೆಸಿಪಿಯನ್ನು ತಪ್ಪದೇ ಓದಿ. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ, ಮೃದುವಾದ ಅಕ್ಕಿರೊಟ್ಟಿ ಮಾಡುವ ವಿಧಾನವನ್ನು ನಾವಿಲ್ಲಿ ಹೇಳಿಕೊಡುತ್ತಿದ್ದೇವೆ. ಇದನ್ನು ಬೆಳಗಿನ ತಿಂಡಿಯಾಗಿ ಅಥವಾ ಸಂಜೆಯ ಲಘು ಉಪಹಾರವಾಗಿಯೂ ಸೇವಿಸಬಹುದು

ಮೆಂತ್ಯ ಅಕ್ಕಿರೊಟ್ಟಿ ಮಾಡುಲು ಬೇಕಾಗಿರುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ ಹಿಟ್ಟು, ಹೆಚ್ಚಿಟ್ತುಕೊಂಡ ಒಮ್ದು ದೊಡ್ಡ ಈರುಳ್ಳಿ, ೨ ಹಸಿಮೆಣಸು ಹೆಚ್ಚಿದ್ದು, ಒಂದು ಕಪ್ ನಷ್ಟು ಮೆಂತ್ಯಸೊಪ್ಪು, ಅಚ್ಚಖಾರದ ಪುಡಿ ಹಾಗೂ ಅರಿಶಿನ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಗೂ ಕಾಯಿಸಲು ಎಣ್ಣೆ.

ಮಾಡುವ ವಿಧಾನ; ಮೊದಲು ಒಂದು ದೊಡ್ಡ ಪಾತ್ರೆಗೆ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಸಣ್ಣದಾಗಿ ಕಟ್ ಮಾಡಿಕೊಂಡ ಮೆಂತ್ಯ ಸೊಪ್ಪು, ಅಚ್ಚಖಾರದ ಪುಡಿ ಹಾಗೂ ಅರಿಶಿನ ಜೊತೆಗೆ ಉಪ್ಪನ್ನು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ನೀರನ್ನು ಹಾಕಿಕೊಂಡು ರೊಟ್ಟಿ ತಟ್ಟುವ ಹದಕ್ಕೆ ಕಲಸಿಕೊಳ್ಳಿ. ಬಿಸಿ ನೀರನ್ನು ಹಾಕುವುದರಿಂದ ರೊಟ್ಟಿ ಮೃದುವಾಗಿ ಬರುತ್ತದೆ.

ರೊಟ್ಟಿ ಹಿಟ್ಟನ್ನು ಕಲಸಿಕೊಂಡ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿಕೊಂಡು, ಒಂದು ಪ್ಲಾಸ್ಟಿಕ್ ಕವರ್ ಮೇಲೆ ಅಥವಾ ಬಾಳೆ ಎಲೆ ಮೇಲೆ ಕೈಯಿಂದ ತಟ್ಟಿಕೊಳ್ಳಿ. ನಂತರ ಈ ತಟ್ಟಿದ ರೊಟ್ಟಿಯನ್ನು ಬಿಸಿಯಾದ ಕಾವಲಿಗೆ ಹಾಕಿ, ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಕಾಯಿಸಿ. ಎಣ್ಣೆ ಹಾಕದೆಯೂ ಮಾಡಬಹುದು. ಹೀಗೆ ಮಾಡಿದರೆ ರುಚಿಕರವಾದ ಅಕ್ಕಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.