ಬ್ಯಾಚುಲರ್ಸ್ ಗಳೇ ನಿಮಗಾಗಿ ಈ ಸ್ಪೆಷಲ್ ಬಿರಿಯಾನಿ, ವೇಗವಾಗಿ ದಿಡೀರ್ ಎಂದು ಬಿರಿಯಾನಿ ಹೀಗೆ ಮಾಡಿ ನೋಡಿ, ಮತ್ತೆ ಮತ್ತೆ ಮಾಡಿ ತಿಂತಿರಾ.
ಬ್ಯಾಚುಲರ್ಸ್ ಗಳೇ ನಿಮಗಾಗಿ ಈ ಸ್ಪೆಷಲ್ ಬಿರಿಯಾನಿ, ವೇಗವಾಗಿ ದಿಡೀರ್ ಎಂದು ಬಿರಿಯಾನಿ ಹೀಗೆ ಮಾಡಿ ನೋಡಿ, ಮತ್ತೆ ಮತ್ತೆ ಮಾಡಿ ತಿಂತಿರಾ.
ನಮಸ್ಕಾರ ಸ್ನೇಹಿತರೇ ಬ್ಯಾಚುಲರ್ಸ್ ಆಗಿದ್ರೆ ಅಡುಗೆ ಮಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆ. ಅಡುಗೆ ಮಾಡದೇ ಇರುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ. ಹಾಗಂತ ಹೊರಗಡೆ ಎಷ್ಟು ಅಂತ ತಿನ್ನೋದಕ್ಕಾಗುತ್ತದೆ. ಚಿಂತೆ ಯಾಕೆ? ನಾವಿಲ್ಲಿ ಹೇಳಿರುವ ಸೂಪರ್ ಬಿರಿಯಾನಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಮಾಡೋದಕ್ಕೂ ಸುಲಭ. ತಿನ್ನೋದಕ್ಕೂ ರುಚಿ.
ಬಿರಿಯಾನಿ ಮಾಡೋದಕ್ಕೆ ಬೇಕಾಗುವ ಸಾಮಗ್ರಿಗಳು: ಅನ್ನ ಒಂದು ಕಪ್ (ರಾತ್ರಿ ಉಳಿದ ಅನ್ನದಲ್ಲಿಯೂ ಮಾಡಬಹುದು), ಬೆಳ್ಳುಳ್ಳಿ ೬, ಶುಂಠಿ ಸ್ವಲ್ಪ, ಕತ್ತರಿಸಿದ ಈರುಳ್ಳಿ ಮತ್ತು ಟೊಮ್ಯಾಟೊ ಒಂದು, ಬಿರಿಯಾನಿ ಮಸಾಲ, ಎಣ್ಣೆ ಮತ್ತು ತುಪ್ಪ ಒಂದು ಚಮಚ, ಕರಿಬೇವು ಸ್ವಲ್ಪ, ಹಸಿಮೆಣಸು ೨, ರುಚಿಗೆ ಉಪ್ಪು, ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ: ಒಂದು ಪ್ಯಾನ್ ಗೆ ೨ ಚಮಚ ಎಣ್ಣೆ ಹಾಗೂ ೧ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ. ಈಗ ಕತ್ತರಿಸಿ ಇಟ್ಟುಕೊಂಡ ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಹಾಕಿ. ಇದಕ್ಕೆ ಕತ್ತರಿಸಿ ಇಟ್ಟ ೨ ಹಸಿಮೆಣಸು, ಒಂದು ದಂಟು ಕರಿಬೇವನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ ಉದ್ದಕ್ಕೆ ಸಣ್ಣದಾಗಿ ಕತ್ತರಿಸಿ ಇಟ್ಟುಕೊಂಡ ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಿ. ಈಗ ಒಂದು ಕತ್ತರಿಸಿದ ಟೊಮ್ಯಾಟೋ ಹಾಕಿ ಹುರಿಯಿರಿ. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಇದೀಗ ಬಿರಿಯಾನಿ ಮಸಾಲಾ ಪೌಡರ್ ನ್ನು ೨ ಚಮಚದಷ್ಟು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಮಾಡಿಟ್ಟುಕೊಂಡ ಅನ್ನವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಹಾಕಿಕೊಳ್ಳಿ. ಇದೀಗ ಇನ್ಸ್ಟೆಂಟ್ ಬಿರಿಯಾನಿ ರೆಡಿಯಾಗಿದೆ. ನಿಮಗೆ ಬೇಕಿದ್ದರೆ ಇತರ ತರಕಾರಿಗಳನ್ನು ಸೇರಿಸಬಹುದು, ಅಥವಾ ಮೊಟ್ಟೆಯನ್ನು ಕತ್ತರಿಸಿ ಹಾಕಬಹುದು. ಯಾವ ತರಕಾರಿಯೂ ಇಲ್ಲದೇ ಇದ್ದರೂ ಮಾಡಬಹುದಾದ ಈ ರುಚಿಕರವಾದ ರೆಸಿಪಿ ವಿಡಿಯೋ ಈ ಕೆಳಗೆ ಕೊಡಲಾಗಿದೆ.