ಕೊನೆಗೂ ಮೌನ ಮುರಿದ ಗಂಗೂಲಿ, ರೋಹಿತ್-ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾತನಾಡಿ ಹೇಳಿದ್ದೇನು ಗೊತ್ತೇ?? ಬಿಸಿಸಿಐ ಆಲೋಚನೆ ಹೇಗಿದೆ ಗೊತ್ತೇ?

ಕೊನೆಗೂ ಮೌನ ಮುರಿದ ಗಂಗೂಲಿ, ರೋಹಿತ್-ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾತನಾಡಿ ಹೇಳಿದ್ದೇನು ಗೊತ್ತೇ?? ಬಿಸಿಸಿಐ ಆಲೋಚನೆ ಹೇಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಯುವ ಆಟಗಾರರು ಮೊದಲ ಐಪಿಎಲ್ ನಲ್ಲಿ ಸಾಕಷ್ಟು ಭರವಸೆಯ ಆಟವನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅನುಭವಿ ಸ್ಟಾರ್ ಆಟಗಾರರು ಈ ಬಾರಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ರವರು ಈ ಬಾರಿಯ ಐಪಿಎಲ್ ನಲ್ಲಿ ಯಾವುದೇ ಗಮನಾರ್ಹ ಪ್ರದರ್ಶನವನ್ನು ನೀಡಿಲ್ಲ.

ಪ್ರಾರಂಭದಿಂದ ಕೊನೆಯವರೆಗೂ ಕೂಡ ರೋಹಿತ್ ಶರ್ಮಾ ರವರು ತಮ್ಮ ಕಳಪೆ ಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೂಡ ಕೊನೆಯ ಸ್ಥಾನದಲ್ಲಿ ಈ ಬಾರಿ ಐಪಿಎಲ್ ಅನ್ನು ಮುಗಿಸಿದೆ. ಈ ಬಾರಿ ಕೇವಲ ಇಲ್ಲಿಯವರಿಗೆ ರೋಹಿತ್ ಶರ್ಮಾ ರವರು 218 ರನ್ನುಗಳನ್ನು ಮಾತ್ರ ಗಳಿಸಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ರವರು ಕೂಡ ಈ ಬಾರಿಯ ಐಪಿಎಲ್ ನಲ್ಲಿ ಸಂಪೂರ್ಣವಾಗಿ ಕಳಸ ಆಟವನ್ನು ತೋರಿಸಿದ್ದಾರೆ. ಕೇವಲ 236 ರನ್ನುಗಳನ್ನು ಮಾತ್ರ ಇಲ್ಲಿಯವರೆಗೆ ಬಾರಿಸಿದ್ದಾರೆ.

ಒಂದು ಕಾಲದಲ್ಲಿ ಕಿಂಗ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ರವರು ಈಗ ಇಂತಹ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಚಿಂತಾದಾಯಕವಾಗಿದೆ. ಇವರಿಬ್ಬರ ಕಳಪೆ ಫಾರ್ಮ್ ಕುರಿತಂತೆ ಈಗ ಸ್ವತಹ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗುಲಿ ರವರೆ ಮಾತನಾಡಿದ್ದಾರೆ. ಹೌದು ಗೆಳೆಯರೇ ಸೌರವ್ ಗಂಗೂಲಿ ರವರೇ ವಿಶ್ವಕಪ್ ಇನ್ನು ಕೂಡ ಸ್ವಲ್ಪ ದೂರದಲ್ಲಿದ್ದು ಅದರ ಒಳಗಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಕೂಡ ತಮ್ಮ ಫಾರ್ಮ್ ಗೆ ವಾಪಸಾಗಲಿದ್ದಾರೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದ್ದು ಇಬ್ಬರು ಕೂಡ ಪ್ರತಿಭಾವಂತ ಆಟಗಾರರಾಗಿದ್ದಾರೆ ಎಂಬುದನ್ನು ಕೂಡ ಇಲ್ಲಿ ಸೌರವ್ ಗಂಗೂಲಿ ಅವರು ಹೇಳುವ ಮೂಲಕ ತಮ್ಮ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ವಿಶ್ವಕಪ್ ಒಳಗಾಗಿ ಇಬ್ಬರು ಕೂಡ ತಮ್ಮ ಲಯಕ್ಕೆ ಮರಳಿ ಬೇಕಾಗಿರುವುದು ಅನಿವಾರ್ಯವಾಗಿದೆ.