ರುಚಿಯ ಜೊತೆ ಆರೋಗ್ಯಕ್ಕೆ ಕೂಡ ಸಹಾಯ ಮಾಡುವ ಟೇಸ್ಟಿ ಜೀರಿಗೆ ಮೆಂತ್ಯ ಚಿತ್ರಾನ್ನ ಮಾಡುವುದು ಗೊತ್ತೇ?? ಮಧ್ಯಾನ್ನದ ಬಾಕ್ಸ್ ಗೆ ಅಂತೂ ಫ್ರೆಶ್ ಆಗಿ ಇರುತ್ತೆ.

ರುಚಿಯ ಜೊತೆ ಆರೋಗ್ಯಕ್ಕೆ ಕೂಡ ಸಹಾಯ ಮಾಡುವ ಟೇಸ್ಟಿ ಜೀರಿಗೆ ಮೆಂತ್ಯ ಚಿತ್ರಾನ್ನ ಮಾಡುವುದು ಗೊತ್ತೇ?? ಮಧ್ಯಾನ್ನದ ಬಾಕ್ಸ್ ಗೆ ಅಂತೂ ಫ್ರೆಶ್ ಆಗಿ ಇರುತ್ತೆ.

ನಮಸ್ಕಾರ ಸ್ನೇಹಿತರೇ, ಶಾಲೆ ಕಾಲೇಜುಗಳು, ಕೆಲವು ಆಫೀಸ್ ಗಳು ಕೂಡ ಪೂರ್ಣ ಪ್ರಮಾಣದಲ್ಲಿ ಶುರುವಾಗಿವೆ. ಹಾಗಾಗಿ ಮನೆಯ ಹೆಂಗಸರಿಗೆ ಲಂಚ್ ಬಾಕ್ಸ್ ಕೊಟ್ಟು ಕಳುಹಿಸುವುದು ಒಂದು ದೊಡ್ಡ ಕೆಲಸ. ಹಾಗಾಗಿ ನಾವಿಲ್ಲಿ ಬೆಳಗ್ಗೆ ಎದ್ದು ಸುಲಭವಾಗಿ ತಯಾರಿಸಬಹುದಾದ ಒಂದು ಅನ್ನದ ರೆಸಿಪಿ ಜೊತೆ ಬಂದಿದ್ದೇವೆ. ಅದುವೆ ಜೀರಿಗೆ ಮೆಂತ್ಯ ಚಿತ್ರಾನ್ನ.

ಬೇಕಾಗುವ ಸಾಮಗ್ರಿಗಳು: ನೆಲಗಡಲೆ ಅರ್ಧ ಕಪ್, ಕಡ್ಲೆ ಬೇಳೆ, ಉದ್ದಿನ ಬೇಳೆ ಒಂದು ಚಮಚ, ೪ ಹಸಿಮೆಣಸು, ಕರಿಬೇವು ಸ್ವಲ್ಪ, ನಿಂಬೆರಸ ಸ್ವಲ್ಪ. ತೆಂಗಿನಕಾಯಿ ತುರಿ, ಅರ್ಧ ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಅನ್ನ ಒಂದು ದೊಡ್ಡ ಕಪ್ ನಷ್ಟು, ಎಣ್ಣೆ ಸ್ವಲ್ಪ. ಜೀರಿಗೆ ಮೆಂತ್ಯ ಹುಡಿಗೆ, ಬ್ಯಾಡಗಿ ಮೆಣಸು ೫-೬, ಮೆಂತ್ಯ ಒಂದು ಚಮಚ, ಜೀರಿಗೆ ೨ ಚಮಚ.

ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯನ್ನು ಬಿಸಿಗಿಡಿ. ಇದಕ್ಕೆ ಒಣಮೆಣಸು, ಜೀರಿಗೆ, ಮೆಂತ್ಯ ಹಾಕಿ ಬಣ್ಣ ಬದಲಾಗುವವರೆಗೂ ಹುರಿದು, ಡ್ರೈ ಪುಡಿ ಮಾಡಿ ಬದಿಗಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ ಹಾಕಿ ಅದು ಚಟಪಟ ಅಂದ ಮೇಲೆ ನೆಲಗಡಲೆ/ಶೇಂಗಾ ಹಾಕಿ ಹುರಿಯಿರಿ. ನಂತರ ಕಡ್ಲೆಬೇಳೆ, ಉದ್ದಿನ ಬೇಳೆ ಸೇರಿಸಿ. ಬಳಿಕ ಹಸಿಮೆಣಸು ಹಾಗೂ ಕರಿಬೇವನ್ನು ಕತ್ತರಿಸಿ ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈಗ ಮೊದಲೇ ಮಾಡಿಟ್ಟುಕೊಂಡ ಮೆಂತ್ಯ ಪುಡಿಯನ್ನು ೩ ಚಮಚದಷ್ಟು ಹಾಕಿಕೊಳ್ಳಿ. ಬಳಿಕ ಒಂದು ಕಪ್ ಅನ್ನವನ್ನು ಈ ಮಿಶ್ರಣಕ್ಕೆ ಸೇರಿಸಿ ಕೊನೆಯಲ್ಲಿ ನಿಂಬೆರಸವನ್ನು ಹಿಂಡಿ ಬೇಕಿದ್ದರೆ ಕೊತ್ತಂಬರಿ ಸೊಪ್ಪುನ ಅಲಂಕಾರಮಾಡಿ ಸರ್ವ್ ಮಾಡಿದರೆ ಮೆಂತ್ಯ ಜೀರಿಗೆ ಚಿತ್ರಾನ್ನ ಸವಿಯಲು ಸಿದ್ದ. ಈ ರೆಸಿಪಿಯ ವಿಡೀಯೋವನ್ನು ಕೆಳಗೆ ಕೊಡಲಾಗಿದೆ.