ವಿರಾಟ್, ರೋಹಿತ್, ರಾಹುಲ್ ಇಲ್ಲದೆ, ದಕ್ಷಿಣ ಆಫ್ರಿಕಾ ಸರಣಿಗೆ ತಂಡದ ತಯಾರಿ ಆರಂಭಿಸಿದ ಬಿಸಿಸಿಐ, ದ್ರಾವಿಡ್ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ಹೊಸ ನಾಯಕನ್ಯಾರು ಗೊತ್ತೇ?

ವಿರಾಟ್, ರೋಹಿತ್, ರಾಹುಲ್ ಇಲ್ಲದೆ, ದಕ್ಷಿಣ ಆಫ್ರಿಕಾ ಸರಣಿಗೆ ತಂಡದ ತಯಾರಿ ಆರಂಭಿಸಿದ ಬಿಸಿಸಿಐ, ದ್ರಾವಿಡ್ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ಹೊಸ ನಾಯಕನ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ಐಪಿಎಲ್ ನಲ್ಲಿ ಸಾಕಷ್ಟು ಕಳಪೆ ಫಾರ್ಮ್ ನಿಂದಾಗಿ ಕಂಗೆಟ್ಟಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಮುಂದಿನ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂಬುದಾಗಿ ಕೇಳಿಬಂದಿದೆ. ಹೌದು ಗೆಳೆಯರೇ ಮುಂಬರುವ ಸರಣಿಯಲ್ಲಿ ಈ ಎಲ್ಲಾ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಐಪಿಎಲ್ ಮುಗಿದ ನಂತರ ಭಾರತೀಯ ಕ್ರಿಕೆಟ್ ತಂಡ ಭಾರತದಲ್ಲಿ ಸೌತ್ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಇದಕ್ಕೂ ಮುನ್ನವೇ ಈಗ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಅದರಲ್ಲೂ ಕೂಡ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ರವರಂತಹ ಸ್ಟಾರ್ ಕ್ರಿಕೆಟಿಗರ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ.

ಹೌದು ಗೆಳೆಯರೇ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಇಬ್ಬರೂ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಕಳಪೆ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು ಅವರಿಬ್ಬರಿಗೂ ಕೂಡ ಬಿಸಿಸಿಐ ವಿಶ್ರಾಂತಿ ನೀಡುವ ನಿರ್ಧಾರವನ್ನು ಮಾಡಿದೆ. ಕೇವಲ ಇವರು ಮಾತ್ರವಲ್ಲದೆ ಇವರ ಜೊತೆಗೆ ರಿಷಬ್ ಪಂತ್ ಕೆ ಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ರವರಂತಹ ಸ್ಟಾರ್ ಆಟಗಾರರಿಗೂ ಕೂಡ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಇವರು ಇಷ್ಟು ಜನ ಆಟಗಾರರ ಅನುಪಸ್ಥಿತಿಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಯಾರು ಮುನ್ನಡೆಸ ಬಹುದು ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಅದಕ್ಕೆ ಕೂಡ ನಾವು ಉತ್ತರಿಸುತ್ತೇವೆ ಬನ್ನಿ.

ಹೌದು ಗೆಳೆಯರೇ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಲಯದಲ್ಲಿರುವ ಹಾರ್ದಿಕ್ ಪಾಂಡ್ಯ ರವರನ್ನು ಸೌತ್ ಆಫ್ರಿಕಾ ವಿರುದ್ಧದ ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಬಹುದಾಗಿದೆ ಇಲ್ಲವೇ ಶಿಖರ್ ಧವನ್ ಅವರವರಿಗೆ ಈ ಜವಾಬ್ದಾರಿಯನ್ನು ನೀಡಬಹುದು ಎನ್ನುವುದಾಗಿ ಸುದ್ದಿಗಳು ಓಡಾಡುತ್ತಿವೆ. ಇಷ್ಟು ಮಾತ್ರವಲ್ಲದೆ ಈ ಬಾರಿಯ ಸೌತ್ ಆಫ್ರಿಕಾ ವಿರುದ್ಧದ ಭಾರತ ತಂಡದಲ್ಲಿ ಹಲವಾರು ಹೊಸಮುಖಗಳು ಕೂಡ ಕಾಣಲಿವೆ. ಮೋಹ್ಸಿನ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಈ ಬಾರಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಉಮ್ರಾನ್ ಮಲಿಕ್ ಈಗಾಗಲೇ ಎಲ್ಲರನ್ನೂ ಮೆಚ್ಚಿಸಿದ್ದಾರೆ ನಿಜ ಆದರೆ ಇಷ್ಟು ಬೇಗ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಳಿಸುವುದು ಅನುಮಾನ ಎಂಬುದಾಗಿ ಹೇಳಲಾಗುತ್ತಿದೆ. ಇನ್ನು ಹಿರಿಯ ಆಟಗಾರರನ್ನು ಈ ಟೂರ್ನಿಯಿಂದ ಹೊರಗಿಡಲು ಮುಖ್ಯ ಕಾರಣವೇನೆಂದರೆ ಇವರು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಬೇಕು ಎನ್ನುವ ಕಾರಣಕ್ಕಾಗಿ.