ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೋಟೆಲ್ ಗಿಂತ ಅದ್ಭುತ ರುಚಿಯ ಮಸಾಲಾ ಖುಷ್ಕ ರೈಸ್. ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ? ಸುಲಭ ಹಾಗೂ ಫಾಸ್ಟ್. ಹೇಗೆ ಗೊತ್ತೇ??

822

ನಮಸ್ಕಾರ ಸ್ನೇಹಿತರೇ ನಾನ್ ವೆಜ್ ತಿನ್ನೋರಿಗೆ ಖುಷ್ಕ ರೈಸ್ ಭಾರಿ ಪ್ರಿಯ. ಖುಷ್ಕ ರೈಸ್ ಒಂದು ಇದ್ರೆ ಅದಕ್ಕೆ ಬೇಕಾದ ಮಾಂಸದ ತುಂಡನ್ನೋ ಅಥವಾ ಮೊಟ್ಟೆಯನ್ನೋ ಹಾಕಿಕೊಂಡು ತಿನ್ನಬಹುದು. ಬನ್ನಿ ಹಾಗಾದರೆ ಹೋಟೆಲ್ ಗಿಂತಲೂ ರುಚಿಯಾದ ಮಸಾಲಾ ಖುಷ್ಕ ರೈಸ್ ಹೇಗೆ ಮಾಡೋದು ಅಂತ ನೋಡೋಣ.

ಮಸಾಲ ಖುಷ್ಕ ರೈಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು: ಬೆಳ್ಳುಳ್ಳಿ ಎಸಳುಗಳು ೨೦, ಹಸಿ ಶುಂಠಿ ೨ ಇಂಚು, ಪುದೀನಾ ಸೊಪ್ಪು ಸ್ವಲ್ಪ, ಹಸಿಮೆಣಸು ೪, ಬಾಸುಮತಿ ಅಕ್ಕಿ ಒಂದು ಕಪ್, ಟೊಮ್ಯಾಟೋ ಹಾಗೂ ಈರುಳ್ಳಿ ತಲಾ ಒಂದು, ಗರಂ ಮಸಾಲಾ ಪದಾರ್ಥಗಳು (ಚಕ್ಕೆ, ಲವಂಗ, ಮೊಗ್ಗು, ಚಕ್ರ, ಪಲಾವ್ ಎಲೆ, ಏಲಕ್ಕಿ, ತಲಾ ಒಂದು), ಧನಿಯಾ ಪೌಡರ್, ಗರಮ್ ಮಸಾಲಾ ಪೌಡರ್, ಅಚ್ಚ ಖಾರದ ಪುಡಿ ತಲಾ ಒಂದು ಚಮಚ, ಅರಿಶಿನ ಕಾಲು ಚಮಚ, ಉಪ್ಪು ರುಚಿಗೆ, ಕರಿಬೇವು ಸ್ವಲ್ವ. ಎಣ್ಣೆ ೩ ಚಮಚ, ನೀರು.

ಮಾಡುವ ವಿಧಾನ: ಮೊದಲು ಒಂದು ಜಾರ್ ಗೆ ಬೆಳ್ಳುಳ್ಳಿ ಎಸಳುಗಳು, ಹಸಿ ಶುಂಠಿ, ಪುದೀನಾ ಸೊಪ್ಪು, ಹಸಿಮೆಣಸು ಹಾಗೂ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಗ್ಯಾಸ್ ಸ್ಟೋವ್ ಮೇಲೆ ಒಂದು ಕುಕ್ಕರ್ ನ್ನು ಇಡಿ, ಕುಕ್ಕರ್ ಪಾತ್ರೆಗೆ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಿ. ನಂತರ ಎಲ್ಲಾ ಗರಂ ಮಸಾಲಾ ಪದಾರ್ಥಗಳನ್ನು ಹಾಕಿಕೊಳ್ಳಿ. ನಂತರ ಗೋಡಂಬಿ, ಜೀರಿಗೆ, ಕರಿಬೇವಿನ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಒಮ್ಮೆ ಹುರಿಯಿರಿ. ಈಗ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೋ ಹಾಕಿ ಬೇಯಿಸಿ.

ಕುಕ್ಕರ್ ಗೆ ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಹುರಿಯಿರಿ. ಹಸಿ ವಾಸನೆ ಹೋಗುವವ್ರೆಗೂ ಹುರಿದು ನಂತರ ಒಂದು ಚಮಚ ಧನಿಯಾ ಪೌಡರ್, ಒಂದು ಚಮಚ ಗರಂ ಮಸಾಲಾ, ಚಿಟಿಕೆ ಅರಿಶಿನ ಪುಡಿ, ೨ ಚಮಚ ಅಚ್ಚ ಖಾರದ ಪುಡಿ, ಈಗ ಇದಕ್ಕೆ ಒಂದು ಕಪ್ ಗಟ್ಟಿ ಮೊಸರನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಇದಕೀಗ ಅರ್ಧ ಗಂಟೆ ನೆನೆಸಿಟ್ಟುಕೊಂಡ ಬಾಸುಮತಿ ಅಕ್ಕಿಯನ್ನು ಹಾಕಿ. ನಂತರ ೨ ಲೋಟ ನೀರನ್ನು ಹಾಕಿ. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಕುದಿ ತರಿಸಿ. ನಂತರ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಜಲ್ ಕೂಗಿಸಿ. ನಂತರ ಕುಕ್ಕರ್ ಆರಿದ ಮೇಲೆ ಮುಚ್ಚಳ ತೆಗೆದರೆ ರುಚಿಕರವಾದ ಮಸಾಲಾ ಖುಷ್ಕ ರೈಸ್ ರೆಡಿ. ಈ ರೆಸಿಪಿ ಮಾಡುವ ವಿಧಾನವನ್ನು ಕೆಳವಿನ ವಿಡಿಯೋದಲ್ಲಿಯೂ ಕೊಡಲಾಗಿದೆ.