ಮಿಥುನ ರಾಶಿಗೆ ಪ್ರವೇಶ ಮಾಡಲಿರುವ ಸೂರ್ಯದೇವ: ಇನ್ನು ಈ ರಾಶಿಯ ಜನರಿಗೆ ಅದೃಷ್ಟ ಹೊತ್ತು ತರಲಿದ್ದಾನೆ ಗೊತ್ತೇ?? ಯಾರ್ಯಾರಿಗೆ ಅದೃಷ್ಟ ಕಾಲ ಗೊತ್ತೇ?

ಮಿಥುನ ರಾಶಿಗೆ ಪ್ರವೇಶ ಮಾಡಲಿರುವ ಸೂರ್ಯದೇವ: ಇನ್ನು ಈ ರಾಶಿಯ ಜನರಿಗೆ ಅದೃಷ್ಟ ಹೊತ್ತು ತರಲಿದ್ದಾನೆ ಗೊತ್ತೇ?? ಯಾರ್ಯಾರಿಗೆ ಅದೃಷ್ಟ ಕಾಲ ಗೊತ್ತೇ?

ನಮಸ್ಕಾರ ಸ್ನೇಹಿತರೇ ಸೂರ್ಯ ನನ್ನು ಗ್ರಹಗಳ ರಾಜ ಎನ್ನುವುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಇನ್ನು ವೃಷಭರಾಶಿಯಲ್ಲಿ ಇದ್ದ ಸೂರ್ಯ ಇದೇ ಜೂನ್ 15ರಂದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಹಲವಾರು ರಾಶಿಯವರ ಜೀವನಚಕ್ರ ಬದಲಾಗಲಿದೆ. ಹೌದು ಗೆಳೆಯರೇ ಕೆಲವು ರಾಶಿಯವರಿಗೆ ಸಾಕಷ್ಟು ಅದೃಷ್ಟ ಕೈಹಿಡಿಯಲಿದೆ ಎಂಬುದಾಗಿ ಕೂಡಾ ಉಲ್ಲೇಖವಾಗಿದೆ. ಹಾಗಿದ್ದರೆ ಸೂರ್ಯನ ರಾಶಿ ಬದಲಾವಣೆಯಿಂದಾಗಿ ಯಾವೆಲ್ಲ ರಾಶಿಯವರಿಗೆ ಲಾಭ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ಸೂರ್ಯನ ರಾಶಿ ಬದಲಾವಣೆಯಿಂದ ಜೂನ್ 15ರಿಂದ ವೃಷಭ ರಾಶಿಯವರಿಗೆ ಉತ್ತಮ ದಿನಗಳು ಪ್ರಾರಂಭವಾಗಲಿವೆ. ಅದರಲ್ಲೂ ವಿಶೇಷವಾಗಿ ಸೂರ್ಯ ಈ ಸಂದರ್ಭದಲ್ಲಿ ವೃಷಭರಾಶಿ ಚಕ್ರದ ಎರಡನೇ ಮನೆಯಲ್ಲಿ ಸುತ್ತುವ ಕಾರಣದಿಂದಾಗಿ ಅದರಲ್ಲೂ ವಿಶೇಷವಾಗಿ ಹಣದ ವಿಚಾರದಲ್ಲಿ ವೃಷಭ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಲಾಭವನ್ನು ಪಡೆಯಲಿದ್ದಾರೆ.

ಕಟಕ ರಾಶಿ; ನೀವು ಯಾರ ಬಳಿಯಾದರೂ ಸಾಲವನ್ನು ತೆಗೆದುಕೊಂಡಿದ್ದರೆ ಸಂದರ್ಭದಲ್ಲಿ ಅದನ್ನು ಪಾವತಿಸುವ ಅವಕಾಶ ನಿಮಗೆ ಸಿಗಲಿದೆ. ಕೆಲಸಕ್ಕಾಗಿ ಕಾಯುತ್ತಿರುವ ವರಿಗೆ ಅಥವಾ ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿರುವ ವರೆಗೆ ಉತ್ತಮ ಉದ್ಯೋಗದ ಅವಕಾಶಗಳು ಸಿಗಲಿದೆ. ಹೀಗಾಗಿ ಸೂರ್ಯನ ರಾಶಿ ಬದಲಾವಣೆ ನಿಮಗೆ ಅದೃಷ್ಟವನ್ನು ತರಲಿದೆ.

ಸಿಂಹ ರಾಶಿ; ಮೊದಲಿಗೆ ನೀವು ಸೂರ್ಯಗ್ರಹ ಸಿಂಹರಾಶಿಯ ಅಧಿಪತಿ ಆಗಿರುತ್ತಾನೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಈ ಸಂದರ್ಭದಲ್ಲಿ ಸಿಂಹರಾಶಿಯ 11ನೇ ಮನೆಯಲ್ಲಿ ಸೂರ್ಯಗ್ರಹ ಚಲಿಸುತ್ತಿರುತ್ತಾನೆ. ಹೀಗಾಗಿ ಸಿಗುವಂತಹ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ ಮಾತ್ರವಲ್ಲದೆ ಲಾಭವೂ ಕೂಡ ವ್ಯಾಪಾರದಲ್ಲಿ ಉನ್ನತವಾಗಿ ಹರಿದುಬರುತ್ತದೆ. ಆರ್ಥಿಕವಾಗಿ ನಿಮ್ಮ ಜೀವನ ಎನ್ನುವುದು ಈ ಸಂದರ್ಭದಲ್ಲಿ ಅತ್ಯುತ್ತಮವಾಗಿರುತ್ತದೆ.

ಕನ್ಯಾ ರಾಶಿ; ನಿಮ್ಮ ರಾಶಿಯ ಸುತ್ತಮುತ್ತವೇ ಸೂರ್ಯನು ಓಡಾಡುವ ಕಾರಣದಿಂದಾಗಿ ನಿಮ್ಮ ಬಹುತೇಕ ಎಲ್ಲ ಸಮಸ್ಯೆಗಳು ಕೂಡ ಈ ಚಲನೆಯ ಸಂದರ್ಭದಲ್ಲಿ ಪರಿಹಾರಗೊಳ್ಳುತ್ತವೆ. ಮಾತ್ರವಲ್ಲದೆ ಕೆಲಸವನ್ನು ಹುಡುಕುತ್ತಿರುವವರಿಗೆ ಕೂಡ ಈ ಸಂದರ್ಭದಲ್ಲಿ ಶುಭಸುದ್ದಿ ದೊರಕಲಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ವೃಶ್ಚಿಕ ರಾಶಿ; ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಕೊಂಚ ಮಟ್ಟಿಗೆ ಆರೋಗ್ಯದ ಕುರಿತಂತೆ ಜಾಗೃತಿಯನ್ನು ವಹಿಸಲೇಬೇಕು ಯಾಕೆಂದರೆ ಆರೋಗ್ಯದಲ್ಲಿ ಹೆಚ್ಚು-ಕಡಿಮೆ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನಿಮಗೆ ಹಲವಾರು ಇಷ್ಟಪಟ್ಟಿರುವ ಕೆಲಸದ ಅವಕಾಶಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಈಗಾಗಲೇ ಕೆಲಸದಲ್ಲಿರುವ ವರಿಗೆ ಪ್ರಮೋಷನ್ ಕೂಡ ಸಿಗುವುದು ನಿಶ್ಚಿತವಾಗಿದೆ.

ಮಕರ ರಾಶಿ; ಮನಸ್ಸಿನಲ್ಲಿ ಮೂಡಿಬರುವ ನಕರತ್ಮಕ ಯೋಚನೆಗಳನ್ನು ಕಡಿಮೆ ಮಾಡಿ ಸಕಾರಾತ್ಮಕ ಯೋಜನೆಗಳತ್ತ ಮನಸ್ಸನ್ನು ನೀಡಿ. ಯಾವುದೇ ಕೋಪ ಅಸಮಾಧಾನ ಗಳಿದ್ದರೂ ಕೂಡ ಮನಸ್ಸಿನಲ್ಲಿ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಇದಿಷ್ಟನ್ನು ಈ ಸಂದರ್ಭದಲ್ಲಿ ಸಾಧಿಸಿದರೆ ಖಂಡಿತವಾಗಿ ನಿಮಗೆ ಜೀವನದಲ್ಲಿ ಹಲವಾರು ಅತ್ಯುತ್ತಮ ಅವಕಾಶಗಳು ಅನಿರೀಕ್ಷಿತವಾಗಿ ನಿಮ್ಮ ಕೈಸೇರುತ್ತದೆ. ಉದ್ಯೋಗದಲ್ಲಿ ಕೂಡ ಬದಲಾವಣೆಗಳು ಕಂಡು ಬರಬಹುದಾಗಿದೆ. ಕೆಲಸದಲ್ಲಿ ಹಲವಾರು ಅವಕಾಶಗಳು ಕೂಡ ನಿಮ್ಮ ಜೀವನವನ್ನು ಉನ್ನತ ಹಂತಕ್ಕೆ ತಲುಪುವಂತೆ ಮಾಡುತ್ತದೆ. ಆದರೆ ಖರ್ಚುವೆಚ್ಚಗಳ ಕುರಿತಂತೆ ನಿಗಾವಹಿಸಿ.

ಮೀನ ರಾಶಿ; ವ್ಯವಹಾರದಲ್ಲಿ ಲಾಭ ಸಿಗುತ್ತದೆ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮದಿಂದ ನೀವು ಅತ್ಯುತ್ತಮ ಸಂಭಾವನೆಯನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ವಿಚಾರಕ್ಕೂ ಕೂಡ ನೀವು ಹಠ ಮಾಡಬೇಡಿ ಪ್ರತಿಯೊಂದು ನಿರ್ಧಾರಕ್ಕೂ ಮುನ್ನ ನೂರಾರು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಇವಿಷ್ಟು ರಾಶಿಗಳಿಗೆ ಈ ಬಾರಿ ಸೂರ್ಯನ ರಾಶಿ ಬದಲಾವಣೆಯಿಂದ ಅದೃಷ್ಟ ಪ್ರಾರಂಭವಾಗಲಿದೆ.