ನೇರವಾಗಿ ಭಾರತದ ಪಿಲ್ಲರ್ ಗಳಾದ ರಾಹುಲ್ ಕೊಹ್ಲಿ ರೋಹಿತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಪಿಲ್ ದೇವ್, ಹೇಳಿದ್ದೇನು ಗೊತ್ತೆ??

ನೇರವಾಗಿ ಭಾರತದ ಪಿಲ್ಲರ್ ಗಳಾದ ರಾಹುಲ್ ಕೊಹ್ಲಿ ರೋಹಿತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಪಿಲ್ ದೇವ್, ಹೇಳಿದ್ದೇನು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಐಪಿಎಲ್ ಮುಗಿದಿದ್ದು ಕೆಎಲ್ ರಾಹುಲ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಐದು ಟಿ-ಟ್ವೆಂಟಿ ಪಂದ್ಯಗಳ ಸರಣಿಗೆ ಸಿದ್ಧವಾಗಿ ನಿಂತಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇದೇ ಜೂನ್ 9 ರಿಂದ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಸರಣಿ ಆರಂಭವಾಗಲಿದೆ.

ಈ ತಂಡದಲ್ಲಿ ಹಿರಿಯ ಆಟಗಾರರಾಗಿರುವ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಜಸ್ಪ್ರೀತ್ ಬುಮ್ರಾ ಹಾಗೂ ಶಮಿ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ವರ್ಷದ ಅಂತ್ಯದ ಒಳಗೆ ಆಸ್ಟ್ರೇಲಿಯಾದಲ್ಲಿ ಟಿ-20ವಿಶ್ವಕಪ್ ಆರಂಭವಾಗಲಿದ್ದು ಇದರ ಹಿನ್ನೆಲೆಯಲ್ಲಿ 1983 ವಿಶ್ವಕಪ್ ವಿಜೇತ ತಂಡದ ನಾಯಕನಾಗಿರುವ ಕಪಿಲ್ ದೇವ್ ರವರು ತಂಡದ ಅನುಭವಿ ಆಟಗಾರರಾಗಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಕುರಿತಂತೆ ಹೇಳಿಕೆಯನ್ನು ನೀಡಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಅಷ್ಟಕ್ಕೂ ಈ ಮೂರು ಅನುಭವಿ ಕ್ರಿಕೆಟಿಗರು ಕುರಿತಂತೆ ಕಪಿಲ್ ದೇವ್ ಹೇಳಿದ್ದಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಇದು ಶಾರ್ಟ್ ಕ್ರಿಕೆಟ್ ಫಾರ್ಮೆಟ್ ಆಗಿದ್ದು ಇದರಲ್ಲಿ ಇವರು ( ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ) ಸಪೋರ್ಟಿವ್ ರೋಲ್ ಆಡಬೇಕೇ ಅಥವಾ ಸ್ಟ್ರೈಕರ್ ಆಗಿ ಆಡಬೇಕೇ ಎಂಬುದನ್ನು ಮೊದಲೇ ನಿರ್ಧರಿಸಿ ಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 150ರಿಂದ 160 ಆಗಿರಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಇವರು ಔಟ್ ಆಗುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸುತ್ತಾರೆ. ಹೀಗಾಗಿ ಮೊದಲಿನಿಂದಲೇ ಅಗ್ರೆಸಿವ್ ಗೇಮ್ ಪ್ಲೇ ಅನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಂಡರೆ ವಿಶ್ವಕಪ್ ನಲ್ಲಿ ತಂಡದ ಗೆಲುವಿಗೆ ನೆರವಾಗುತ್ತದೆ. ಕ್ರಿಕೆಟ್ ಜಗತ್ತಿನಲ್ಲಿ ನೀವು ದೊಡ್ಡ ಹೆಸರನ್ನು ಹೊಂದಿದ್ದರೆ ಅದಕ್ಕೆ ತಕ್ಕಂತೆ ಆಟವಾಡಿ ಇಲ್ಲದಿದ್ದರೆ ಅದರ ಕುರಿತಂತೆ ಮಾತನಾಡಲು ನಾವಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ಈ ಆಟಗಾರರ ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ರವರ ಐಪಿಎಲ್ ಪ್ರದರ್ಶನದ ಹಿನ್ನೆಲೆಯಲ್ಲಿ ಕಪಿಲ್ ದೇವ್ ರವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.