ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತಕ್ಕೆ ವಿಕೆಟ್ ಕೀಪರ್ ಜೊತೆ ಧೋನಿ ಸ್ಥಾನ ತುಂಬುವವರು ಬೇಕು ಎಂದು ರವಿಶಾಸ್ತ್ರಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

1,392

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಮಾಡಿರುವ ಮ್ಯಾಜಿಕ್ ಅನ್ನು ಯಾರು ಕೂಡ ಇದುವರೆಗೂ ಮಾಡಲು ಸಾಧ್ಯವಾಗಿಲ್ಲ ಮುಂದೆ ಮಾಡುವುದು ಸಾಧ್ಯವಾಗುವುದು ಕೂಡ ಕಠಿಣ ಎಂಬುದಾಗಿ ಹೇಳಲಾಗುತ್ತದೆ. ಯಾಕೆಂದರೆ ಆತ ಕೇವಲ ನಾಯಕರಾಗಿ ಮಾತ್ರವಲ್ಲದೆ ಬ್ಯಾಟ್ಸ್ ಮ್ಯಾನ್ ಹಾಗೂ ವಿಕೆಟ್ ಹಿಂದೆಯೂ ಕೂಡ ತಂಡದ ಸೋಲು-ಗೆಲುವುಗಳನ್ನು ನಿರ್ಧರಿಸುವ ಚಾಕಚಕ್ಯತೆ ಹೊಂದಿದ್ದರು. ಅದೆಷ್ಟೋ ಪಂದ್ಯಗಳನ್ನು ವಿಕೆಟ್ ಹಿಂದೆ ನಿಂತು ಕೀಪರ್ ಜವಾಬ್ದಾರಿಯಲ್ಲಿ ಗೆದ್ದುಕೊಟ್ಟಿದ್ದರು ಕೆಲವು ಬಾರಿ ತಂಡ ರನ್ ಗಳಿಸಲು ಪರದಾಡುತ್ತಿದ್ದಾರೆ ಫಿನಿಶರ್ ಆಗಿ ಬಂದು ತಂಡದ ಗೆಲುವನ್ನು ಖಚಿತಪಡಿಸಿದ್ದು ಕೂಡ ಉಂಟು.

ಅದಕ್ಕೆ ಅವರನ್ನು ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫಿನಿಶರ್ ಹಾಗೂ ಕಪ್ತಾನ ಎಂಬುದಾಗಿ ಕರೆಯಲಾಗುತ್ತದೆ. ಈಗ ಅವರ ನಿವೃತ್ತಿಯ ಕಾರಣದಿಂದಾಗಿ ಅವರ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಹುಡುಕಲು ಕಷ್ಟವಾಗುತ್ತಿದೆ. ಇದೇ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಐಸಿಸಿ ಇವೆಂಟ್ ಗಳಲ್ಲಿ ಹಿನ್ನಡೆಯನ್ನು ಸಾಧಿಸಿರುವುದು ನಮ್ಮ ಕಣ್ಣಮುಂದಿದೆ. ಇನ್ನು ಮಹೇಂದ್ರ ಸಿಂಗ್ ಧೋನಿ ರವರಂತೆ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಸಹಕಾರಿಯಾಗಬಲ್ಲ ಅಂತಹ ಆಟಗಾರ ಮುಂಬರುವ ಅಂತಹ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಬೇಕಾಗುತ್ತದೆ ಎನ್ನುವುದಾಗಿ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ. ರವಿಶಾಸ್ತ್ರಿ ರವರ ಪ್ರಕಾರ ಅಂತಹ ಅರ್ಹತೆ ಉಳ್ಳ ಆಟಗಾರ ಈಗಾಗಲೇ ಇದ್ದಾರೆ ಎಂಬುದಾಗಿ ಕೂಡಾ ತಿಳಿಸಿದ್ದಾರೆ.

ಹೌದು ಗೆಳೆಯರೇ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 16 ಪಂದ್ಯಗಳಿಂದ 383 ರನ್ನುಗಳನ್ನು ಬಾರಿಸಿ ಫಿನಿಶರ್ ಜವಾಬ್ದಾರಿಯನ್ನು ಸಂಪೂರ್ಣ ಯಶಸ್ವಿಯಾಗಿ ನಿಭಾಯಿಸಿರುವ ದಿನೇಶ್ ಕಾರ್ತಿಕ್ ರವರನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡ t20 ವರ್ಲ್ಡ್ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂಬುದಾಗಿ ಸಲಹೆಯನ್ನು ರವಿಶಾಸ್ತ್ರಿ ನೀಡಿದ್ದಾರೆ. ಈಗಾಗಲೇ ಮೂರು ವರ್ಷದ ನಂತರ ಸೌತ್ ಆಫ್ರಿಕಾ ಸರಣಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ರವರು ತಮಗೆ ಸಿಕ್ಕಿರುವ ಅವಕಾಶವನ್ನು ಹಾಗೂ ತಮ್ಮ ಅನುಭವದ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

Get real time updates directly on you device, subscribe now.