ಕೈಕೊಟ್ಟ ಟ್ರಂಪ್ ಗಣರಾಜ್ಯೋತ್ಸವದ ಹೊಸ ಅತಿಥಿ ಯಾರು ಗೊತ್ತಾ?

ಕೈಕೊಟ್ಟ ಟ್ರಂಪ್ ಗಣರಾಜ್ಯೋತ್ಸವದ ಹೊಸ ಅತಿಥಿ ಯಾರು ಗೊತ್ತಾ?

0

ಪ್ರತಿ ಬಾರಿಯೂ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಗಣರಾಜ್ಯೋತ್ಸವ ದಿನದಂದು ವಿಶ್ವದ ಇತರ ದೊಡ್ಡ ರಾಷ್ಟ್ರಗಳ ನಾಯಕರನ್ನು ಕರೆದು ಅತಿಥಿ ಗೌರವವನ್ನು ನೀಡಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಇಡೀ ವಿಶ್ವಕ್ಕೆ ಭಾರತ ಒಂದು ಬಲಿಷ್ಠ ರಾಷ್ಟ್ರ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ. ಅದರಂತೆಯೇ ಈ ಬಾರಿ ಅಮೆರಿಕಾದ ಅಧ್ಯಕ್ಷ ರಾದ ಟ್ರಂಪ್ ರವರನ್ನು ಗಣರಾಜ್ಯೋತ್ಸವಕ್ಕಾಗಿ ಮೋದಿ ರವರು ಆಹ್ವಾನಿಸಿದ್ದರು.

[do_widget id=et_ads-2]

ಆದರೆ ತಮ್ಮ ಇತರ ಕಾರ್ಯಕ್ರಮಗಳಿಂದ ಗಣರಾಜ್ಯೋತ್ಸವಕ್ಕೆ ಹಾಜರಾಗಲು ಟ್ರಂಪ್ ಅವರು ನಿರಾಕರಿಸಿದ್ದಾರೆ. ಆದ ಕಾರಣ ನರೇಂದ್ರ ಮೋದಿ ಅವರು ಮುಂದಿನ ವರ್ಷ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷರಾದ ಸಿರಿಲ್ ರಮಫೋಸ ಅವರನ್ನು ಆಯ್ಕೆ ಮಾಡಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಕೋರಿಕೊಂಡಿದ್ದರು.

[do_widget id=et_ads-3]

ಈ ಆಹ್ವಾನವನ್ನು ಒಪ್ಪಿಕೊಂಡಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾಗಿದ್ದ ನೆಲ್ಸನ್ ಮಂಡೇಲಾ ರವರ ಆಪ್ತರಾಗಿರುವ ಸಿರಿಲ್ ರಮಫೋಸ ಅವರನ್ನು ಸ್ವತಹ ನೆಲ್ಸನ್ ಮಂಡೇಲಾ ರವರ ಮುಂದಿನ ಅಧ್ಯಕ್ಷರಾಗಿ ಶಿಫಾರಸು ಮಾಡಿದ್ದರು.

[do_widget id=et_ads-4]