ಐಪಿಎಲ್ 2019: ಆರ್ ಸಿ ಬಿ ತಂಡದಿಂದ 6 ಬಿಗ್ ಸ್ಟಾರ್ ಆಟಗಾರರು ಔಟ್

ಐಪಿಎಲ್ 2019: ಆರ್ ಸಿ ಬಿ ತಂಡದಿಂದ 6 ಬಿಗ್ ಸ್ಟಾರ್ ಆಟಗಾರರು ಔಟ್

0

ಕಳೆದ 11 ಆವೃತ್ತಿ ಗಳಿಂದಲೂ ಆರ್ ಸಿ ಬಿ ತಂಡಕ್ಕೆ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದಿದೆ. ಅತಿ ಹೆಚ್ಚು ಮನರಂಜನೆ ನೀಡುವ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಈ ಬಾರಿಯಾದರೂ ಪ್ರಶಸ್ತಿ ಗೆದ್ದು ತನ್ನ ಅಭಿಮಾನಿಗಳಿಗೆ ರಸದೌತಣ ನೀಡಲು ಸಿದ್ದವಾಗುತ್ತಿದೆ.

[do_widget id=et_ads-2]

ಹೇಗಾದರೂ ಮಾಡಿ ಈ ಬಾರಿ ಪ್ರಶಸ್ತಿಯನ್ನು ಗೆಲ್ಲುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೇಜರ್ ಸರ್ಜರಿ ಯನ್ನು ಮಾಡಲಾಗಿದೆ. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಆರು ಬಿಗ್ ಸ್ಟಾರ್ ಆಟಗಾರರನ್ನು ಆರ್ ಸಿ ಬಿ ತಂಡದಿಂದ ಹೊರಹಾಕಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

[do_widget id=et_ads-5]

ಐಪಿಎಲ್ ನಿಯಮದ ಪ್ರಕಾರ ನವೆಂಬರ್ 15ರೊಳಗೆ ರಿಟನ್ ಹಾಗೂ ರಿಲೀಸ್ ತಂಡವನ್ನು ಪ್ರಕಟಿಸಬೇಕಿತ್ತು. ಅದರಂತೆಯೇ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಪ್ರಮುಖ 6 ಆಟಗಾರರನ್ನು ಕೈಬಿಟ್ಟಿದ್ದು ಅದರಲ್ಲಿ ನಾಲ್ಕು ವಿದೇಶಿ ಆಟಗಾರರು ಮತ್ತು ಎರಡು ಸ್ವದೇಶಿ ಆಟಗಾರರು ಇದ್ದಾರೆ. ಸಂಪೂರ್ಣ ತಂಡದ ವಿವರಗಳಿಗಾಗಿ ಕೆಳಗಡೆ ನೋಡಿ.

[do_widget id=et_ads-4]

ರಿಟೈನ್ ಆಟಗಾರರು:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥೀವ್ ಪಟೇಲ್, ವಾಶಿಂಗ್ಟನ್ ಸುಂದರ್, ಪವನ್ ನೇಗಿ, ಮೊಯಿನ್ ಆಲಿ, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ, ಮಾರ್ಕಸ್ ಸ್ಟೊಯಿನಿಸ್, ಯಜುವೇಂದ್ರ ಚೆಹಾಲ್, ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೋಲಿಯಾ, ನತನ್ ಕೌಲ್ಟರ್ ನೈಲ್.

ಕೈಬಿಟ್ಟ ಆಟಗಾರರು:
ಬ್ರೆಂಡನ್‌ ಮೆಕ್‌ಕಲಮ್, ಕೊರಿ ಆಂಡರ್ಸನ್, ಕ್ರಿಸ್ ವೋಕ್ಸ್, ಕ್ವಿಂಟನ್ ಡಿಕಾಕ್ ಸರ್ಫರಾಜ್ ಖಾನ್, ಮನ್ದೀಪ್ ಸಿಂಗ್

[do_widget id=et_ads-3]